spot_img
Sunday, April 26, 2026
spot_img

ಬಿಜೆಪಿ ಆರೋಪಗಳಿಗೆ ಜನ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ ಕೆ.ಗೋಪಾಲ ಪೂಜಾರಿ


ಬೈಂದೂರಲ್ಲಿ ಕೆ. ಗೋಪಾಲ ಪೂಜಾರಿ ಬೃಹತ್ ಶಕ್ತಿ ಪ್ರದರ್ಶನ

ಬೈಂದೂರು, ಎ.18: ಆಡಳಿತರೂಢರ ವೈಫಲ್ಯ, ಬೆಲೆ ಏರಿಕೆ ಪರಿಣಾಮ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷದ ಮೇಲೆ ಅಪವಾದ ಹೊರಿಸಲಾಗುತ್ತಿದೆ. ಭಯೋತ್ಪಾದಕರ ದಾಳಿಯಿಂದ ಪ್ರಾಣ ತ್ಯಾಗ ಮಾಡಿದವರು ಕಾಂಗ್ರೆಸ್ ನಾಯಕರುಗಳು. ಇವತ್ತು ನಮಗೆ ಭಯೋತ್ಪಾದಕರು ಎನ್ನುತ್ತಾರೆ. ಇದಕ್ಕೆ ತಕ್ಕ ಉತ್ತರ ಕೊಡಲೇಬೇಕು. ಈ ಚುನಾವಣೆ ಕಾಂಗ್ರೆಸ್ ಕಾರ್ಯಕರ್ತರ ಅಳಿವು-ಉಳಿವಿನ ಪ್ರಶ್ನೆಯಾಗಿದೆ ಎಂದು ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಹೇಳಿದರು.

ಅವರು ಬೈಂದೂರಿನಲ್ಲಿ ನಾಮಪತ್ರ ಸಲ್ಲಿಕೆಯ ಮುನ್ನ ನಡೆದ ಬೈಂದೂರು ಮತ್ತು ವಂಡ್ಸೆ ಬ್ಲಾಕ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಕಳೆದ ಬಾರಿ ನಮ್ಮ ಸರ್ಕಾರದ ಮೇಲೆ 10% ಕಮಿಷನ್ ಆರೋಪ ಮಾಡಿದರು. ಇವತ್ತು ಬಿಜೆಪಿ ಸರ್ಕಾರ 40% ಕಮಿಷನ್ ಎಂದು ಗುತ್ತಿಗೆದಾರರ ಸಂಘವೇ ಆರೋಪಿಸಿದೆ. ಬಿಜೆಪಿ ಇವತ್ತು ರಿಪಬ್ಲಿಕನ್ ಪಕ್ಷಕ್ಕಿಂತ ಹೆಚ್ಚು ಶ್ರೀಮಂತ ರಾಜಕೀಯ ಪಕ್ಷವಾಗಿದೆ ಎಂದು ಗೋಪಾಲ ಪೂಜಾರಿ ದೂರಿದರು.

ನಾನು 4 ಬಾರಿ ಕ್ಷೇತ್ರದ ಶಾಸಕನಾಗಿದ್ದೇನೆ. ಸುಳ್ಳು ಭರವಸೆ ಕೊಟ್ಟಿಲ್ಲ. ಬೈಂದೂರು ತಾಲೂಕು ರಚನೆ, ಐಟಿ‌ಐ ಕಾಲೇಜು, ಕೆ‌ಇಬಿ ಉಪ ವಿಭಾಗ, ಶಾಸಕರ ಕಛೇರಿ ಎಲ್ಲ ನನ್ನ ಕಾಲದಲ್ಲಿಯೇ ಆಗಿದ್ದು. ಮಿನಿ ವಿಧಾನಸೌಧಕ್ಕೆ ಕೂಡಾ 10 ಕೋಟಿ ಅನುದಾನ ಅಂದೇ ಬಿಡುಗಡೆಯಾಗಿತ್ತು. ಬಂದರುಗಳ ಅಭಿವೃದ್ದಿ, ಮೀನುಗಾರರಿಗೆ ಸೀಮೆ‌ಎಣ್ಣೆ ಸಬ್ಸಿಡಿ, ಕೆ‌ಎಸ್.ಆರ್.ಟಿಸಿ ಬಸ್ ಹೀಗೆ ಕ್ಷೇತ್ರದ ಅಭಿವೃದ್ದಿಗೆ ದುಡಿದಿದ್ದೇನೆ. ಆದರೆ ಇವತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಭಯೋತ್ಪಾದಕರಿಗೆ ಹೋಲಿಸುತ್ತಾರೆ. ಇಂದಿರಾಗಾಂಧಿ, ರಾಜೀವ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಇಂಥಹ ತ್ಯಾಗಿಗಳ ದೇಶಭಕ್ತ ಪಕ್ಷ ನಮ್ಮದು. ನಿಮ್ಮ ಪಕ್ಷದ ಯಾರಾದರೂ ಭಯೋತ್ಪಾದಕರಿಗೆ ಬಲಿಯಾಗಿದ್ದಾರಾ ಹೇಳಿ? ಯಡಮೊಗೆಯ ಉದಯ ಗಾಣಿಗ ಹತ್ಯೆ ಮಾಡಿದ್ದು ಯಾರು? ಬಿಜೆಪಿ ಪಕ್ಷದ ಗ್ರಾಮ ಪಂಚಾಯತ್ ಅಧ್ಯಕ್ಷನ ನೇತೃತ್ವದಲ್ಲಿ ಕೊಲೆಯಾಗುತ್ತದೆ. ಕೋಟದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನ ನೇತೃತ್ವದಲ್ಲಿ ಜೋಡಿ ಕೊಲೆಯಾಗುತ್ತದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರೆಲ್ಲ ಜನರನ್ನು ಎದುರಿಸಲಾಗದೇ ಓಡಿದ್ದೇಕೆ? ಕರಾವಳಿ ಜಿಲ್ಲೆಗೆ ಕುಚಲಕ್ಕಿ ಕೊಡುತ್ತೇವೆ ಎನ್ನುವ ಭರವಸೆ ಎನಾಯಿತು ? ಒಂದೇ ಒಂದು ಕೆಜಿ ಕುಚಲಕ್ಕಿ ಕೊಡಲಾಗಲಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಭಾರತೀಯ ಜನತಾ ಪಕ್ಷ ಇವತ್ತು ಕರಾವಳಿಯನ್ನು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ. ಈ ಪ್ರಯೋಗಶಾಲೆಗೆ ಮತದಾರರು ಬೆಂಬಲ ಕೊಡಬೇಡಿ, ಅಭಿವೃದ್ದಿಯ ಪ್ರಯೋಗಗಳಿಗೆ ಅವಕಾಶ ಕೊಡಿ. ಇವತ್ತು ಕಾಂಗ್ರೆಸ್ ಪಕ್ಷವನ್ನು ಆರೋಪಿಸುವ ಬಿಜೆಪಿ ಇವತ್ತು ಪರಿವಾರದ ಪಕ್ಷವಾಗಿದೆ. ಪರಿವಾರಕ್ಕೆ ಅವಕಾಶ ಕೊಡುತ್ತಿದೆ. ಬೈಂದೂರು ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಅವಕಾಶ ಕೊಡದೆ ಸಂಘಪರಿವಾರದವರಿಗೆ ಟಿಕೆಟು ನೀಡಿದ್ದಾರೆ. ಇದು ಬಿಜೆಪಿಯ ವಾಸ್ತವ ಸ್ಥಿತಿ ಎಂದ ಅವರು, ಬಿಜೆಪಿ ಚುನಾವಣಾ ಸಂದರ್ಭದಲ್ಲಿ ಯಾವ ಅಸ್ತ್ರವನ್ನು ಬೇಕಾದರೂ ಪ್ರಯೋಗಿಸಬಹುದು. ಮತದಾರರು ಜಾಗೃತವಾಗಿರಬೇಕು. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದ ಪುಲ್ವೋಮಾ ದಾಳಿಯ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಅಲ್ಲಿನ ಗವರ್ನರ್ ಸ್ಪೋಟಕ ಹೇಳಿಕೆ ನೀಡುತ್ತಿದ್ದಾರೆ. ಹಾಗಾಗಿ ಈಗಲೂ ಕೂಡಾ ಬಿಜೆಪಿ ಯಾವುದೇ ಅಸ್ತ್ರ ಬೇಕಾದರೂ ಯಾವ ಕ್ಷಣದಲ್ಲಿ ಬೇಕಾದರೂ ಪ್ರಯೋಗಿಸಬಹುದು ಎಂದರು.

ಕಾಂಗ್ರೆಸ್ ಪಕ್ಷದ ವಕ್ತಾರ ವಿಕಾಸ್ ಹೆಗ್ಡೆ, ಪ್ರಚಾರ ಸಮಿತಿಯ ಪ್ರಮುಖರಾದ ಡಾ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಪ್ರಕಾಶ್ಚಂದ್ರ ಶೆಟ್ಟಿ, ಎಸ್.ರಾಜು ಪೂಜಾರಿ, ಸಂಜೀವ ಶೆಟ್ಟಿ, ವಾಸುದೇವ ಯಡಿಯಾಳ, ರಮೇಶ ಗಾಣಿಗ ಕೊಲ್ಲೂರು, ರಘುರಾಮ ಶೆಟ್ಟಿ, ಪ್ರಸನ್ನಕುಮಾರ್ ಶೆಟ್ಟಿ, ವಿಜಯ ಶೆಟ್ಟಿ, ಗೌರಿ ದೇವಾಡಿಗ, ಮಂಜುಳ ದೇವಾಡಿಗ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್‌ನ ಪ್ರಮುಖರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಎಸಿ‌ಎಫ್ ಅಧಿಕಾರಿ ಪರಮಯ್ಯ ಗೊಂಡ, ಸುಬ್ಬಣ್ಣ ಶೆಟ್ಟಿ ಶಿರೂರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಸ್ವಾಗತಿಸಿದರು. ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪಕುಮಾರ್ ಶೆಟ್ಟಿ ಗುಡಿಬೆಟ್ಟು ವಂದಿಸಿದರು.

ಸಮಾವೇಶಕ್ಕೂ ಮುನ್ನ ಯಡ್ತರೆಯಿಂದ ಸಮಾವೇಶದ ಸ್ಥಳದ ತನಕ ಬೃಹತ್ ಪಾದಯಾತ್ರೆ ನಡೆಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!