spot_img
Monday, April 20, 2026
spot_img

ಬಿಜೆಪಿ ಭ್ರಷ್ಟಾಚಾರವನ್ನು ವೈಭವೀಕರಣ ಮಾಡುತ್ತಿದೆ -ಬಿ.ಕೆ ಹರಿಪ್ರಸಾದ್

ವಂಡ್ಸೆಯಲ್ಲಿ ಕರಾವಳಿ ಪ್ರಜಾ ಧ್ವನಿ ಯಾತ್ರೆ-ಬೃಹತ್ ಸಮಾವೇಶ

ಬೈಂದೂರು: ಬಿಜೆಪಿಗರು ಭೃಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬರುವಾಗ ವಿಜಯೋತ್ಸವದ ರೀತಿ ಸಂಭ್ರಮಿಸುವ ಮೂಲಕ ಭೃಷ್ಟಾಚಾರವನ್ನು ವೈಭವೀಕರಣ ಮಾಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಾಗ ಅಭಿವೃದ್ಧಿಯ ಬಗ್ಗೆ ಮಾತನಾಡದೇ ಧರ್ಮ, ಜಾತಿಯ ವಿಷಯವನ್ನೇ ಪ್ರಮುಖ ಅಸ್ತ್ರಗಳನ್ನಾಗಿಸಿಕೊಂಡಿದೆ. ಇಂದು ಬಿಜೆಪಿಯಲ್ಲಿ ಇರುವುದು ದೇಶಭಕ್ತಿಯಲ್ಲ, ದ್ವೇಷಭಕ್ತಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಗುಡುಗಿದರು.

ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕರಾವಳಿ ಪ್ರಜಾ ಧ್ವನಿ ಯಾತ್ರೆ ಬೃಹತ್ ಸಮಾವೇಶ ಫೆ.19 ವಂಡ್ಸೆಯಲ್ಲಿ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ಮೋದಿ, ಅಮಿತ್ ಷಾ, ನಡ್ಡಾ ಈಗ ಎಲ್ಲರೂ ಕರಾವಳಿ ಭಾಗಕ್ಕೆ ಬರುತ್ತಾರೆ. ಆದರೆ ಪ್ರವಾಹ, ಸಮುದ್ರ ಕೊರೆತ ಸಂಭವಿಸಿದಾಗ, ನೆರೆ ಹಾವಳಿ ಸಂಭವಿಸಿ ಜನ ಅತಂತ್ರರಾಗುವ ಸಮಯದಲ್ಲಿ ಯಾವ ನಾಯಕರು ಈ ಕಡೆ ಬರಲಿಲ್ಲ. ಇದು ಜನರು ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ 40% ಕಮಿಷನ್ ಆರೋಪ ಇವತ್ತು ವ್ಯಾಪಕವಾಗಿ ಕೇಳಿ ಬರುತ್ತಿದ್ದು ಗುತ್ತಿಗೆದಾರರ ಸಂಘ ಪ್ರಧಾನಿಗಳಿಗೆ ಮನವಿ ಸಲ್ಲಿಸಿ ಒಂದುವರೆ ವರ್ಷವಾದರೂ ಪ್ರಧಾನಿಯಿಂದ ಉತ್ತರವಿಲ್ಲದಿರುವುದು ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಿದೆ. ಆರೋಗ್ಯ, ಶಿಕ್ಷಣ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿ ಪಕ್ಷ ಪ್ರನಾಳಿಕೆ ಬಿಡುಗಡೆ ಮಾಡಿದೆ. ಸ್ವಾತಂತ್ರ್ಯ ಭಾರತದಲ್ಲಿ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು. ಈಗಿನ ಬಿಜೆಪಿ ಸರ್ಕಾರದಂತೆ 10 ಜನರಲ್ಲಿಯೇ ಭಾರತದ ಸಂಪತ್ತು ಹಂಚಿಕೆಯಾಗಬಾರದು. ಕಾಂಗ್ರೆಸ್ ಪಕ್ಷ ಜನರ ಬದುಕಿನ ಬಗ್ಗೆ ಮಾತಾಡುತ್ತದೆಯೇ ವಿನಃ ಭಾವನೆಗಳ ಬಗ್ಗೆ ಅಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಪ್ರಜೆಗಳ ಧ್ವನಿಯನ್ನು ಆಲಿಸಿ, ಸಮಸ್ಯೆ ಕ್ರೋಢೀಕರಿಸಿ, ರಾಜ್ಯಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವುದು ಪ್ರಜಾಧ್ವನಿ ಯಾತ್ರೆಯ ಉದ್ದೇಶವಾಗಿದೆ. ಕರಾವಳಿ ಭಾಗದಲ್ಲಿ ಐಟಿ ಪಾರ್ಕ್, ಗಾರ್ಮೆಂಟ್ಸ್ ಪಾರ್ಕ್ ಸ್ಥಾಪನೆ, ಮೀನುಗಾರಿಕೆಯಲ್ಲಿ ಆಕಸ್ಮಿಕ ಸಾವನ್ನಪ್ಪಿದರೆ 10 ಲಕ್ಷ ವಿಮೆ, ನಾಡ ದೋಣಿ, ಬೋಟ್‌ಗಳಿಗೆ 25% ಸಹಾಯಧನ, ಸಬ್ಸಿಡಿಯಲ್ಲಿ ಸೀಮೆ‌ಎಣ್ಣೆ, ಡಿಸೇಲ್ ವಿತರಣೆ, ಮೀನುಗಾರ ಮಹಿಳೆಯರಿಗೆ 1 ಲಕ್ಷ ರೂ ಬಡ್ಡಿರಹಿತ ಸಾಲ ನೀಡಲು ಕ್ರಮ ತಗೆದುಕೊಳ್ಳಲಾಗುವುದು. ಸೂಕ್ಷ್ಮ ಹಿಂದುಳಿದ ಸಮುದಾಯಗಳನ್ನು ಒಟ್ಟುಗೂಡಿಸಿ ಅಭಿವೃದ್ದಿ ನಿಗಮ ರಚನೆ ಮಾಡಿ ೨೫೦ ಕೋಟಿ ವಾರ್ಷಿಕ ಮೀಸಲಿಡಲಾಗುವುದು ಎಂದರು.

ಕೆಪಿಸಿಸಿ ಮಾಧ್ಯಮ ವಕ್ತಾರ ಸುಧೀರ್ ಕುಮಾರ್ ಮುರೋಳಿ ಮಾತನಾಡಿ, ಹಿಂದೆ ಕಾಂಗ್ರೆಸ್ ಸರ್ಕಾರ ನೀಡಿದ ದತ್ತಕವಾದ ಅಧಿಕಾರವನ್ನು ಚಲಾಯಿಸುವಲ್ಲಿ ಬೈಂದೂರು ಕ್ಷೇತ್ರದ ಶಾಸಕರು ವಿಫಲರಾಗಿದ್ದಾರೆ. ಮೂಲಸೌಕರ್ಯ ನೀಡುವುದಾಗಲಿ, ಅಕ್ರಮ ಸಕ್ರಮ, ಡೀಮ್ಟ್ ಫಾರೆಸ್ಟ್ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ನಾರಾಯಣ ಗುರುಗಳ ವಿಚಾರವನ್ನು ಪಠ್ಯ ಪುಸ್ತಕದಿಂದ ತೆಗೆದಾಗ, ಈ ಭಾಗದಲ್ಲಿ ಹುಟ್ಟಿದ ಬ್ಯಾಂಕ್‌ಗಳ ವಿಲೀನವಾದಾಗ ಏಕೆ ಸ್ಥಳೀಯ ಶಾಸಕರು ಮಾತನಾಡಿಲ್ಲ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಪರೇಶ ಮೇಸ್ತ ವಿಷಯವನ್ನು ಇಟ್ಟುಕೊಂಡು ಜನರಿಗೆ ಸುಳ್ಳನ್ನು ನಂಬಿಸಿ ಗೆದ್ದ ಶಾಸಕರು, ತಮ್ಮದೇ ಪಕ್ಷದ ಕಾರ್ಯಕರ್ತ ಉದಯ ಗಾಣಿಗರನ್ನು ತಮ್ಮದೇ ಪಕ್ಷದ ಗ್ರಾ.ಪಂ.ಅಧ್ಯಕ್ಷ ಕೊಲೆ ಮಾಡಿದಾಗ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಾರೆ. ಬೇರೆ ಬೇರೆ ಕೊಲೆಗಳ ಸಂದರ್ಭದಲ್ಲಿ ಸಂತೃಸ್ತ ಕುಟುಂಬಕ್ಕೆ 25 ಲಕ್ಷ ಕೊಡುವ ಸರ್ಕಾರ ತಮ್ಮದೇ ಪಕ್ಷದ ಕಾರ್ಯಕರ್ತನ ಸಾವಿಗೆ ಏಕೆ ನ್ಯಾಯ ಒದಗಿಸಿಲ್ಲ? ಚುನಾವಣೆಯ ಸಂದರ್ಭ ಐದು ನದಿಗಳ ಜೋಡಣೆ, ವಿಮಾನ ನಿಲ್ದಾಣ, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಏನಾಯಿತು? ಬೈಂದೂರು ಸರ್ಕಾರಿ ಆಸ್ಪತ್ರೆಯನ್ನು 100 ಬೆಡ್ ಆಸ್ಪತ್ರೆ ಮಾಡಲಾಗಲಿಲ್ಲ ಎಂದರು.

ಬೈಂದೂರಿನಲ್ಲಿ ಶಾಸಕರ ಕಛೇರಿ ಆರಂಭಿಸಿ ಸಾರ್ವಜನಿಕರಿಗೆ ನಿತ್ಯ ಭೇಟಿಗೆ ಅವಕಾಶ ನೀಡಲಾಗಿತ್ತು. ಆದರೆ ಈ ಶಾಸಕರು ಶಾಸಕರ ಕಛೇರಿಯ ಬಣ್ಣ ಬದಲಾಯಿಸಿ, ರಾಷ್ಟ್ರೀಯ ಹಬ್ಬದ ದಿನಗಳಲ್ಲಷ್ಟೇ ಬಾಗಿಲು ತೆರೆಯಲು ಆರಂಭಿಸಿದರು. ಶಾಸಕರ ಕಛೇರಿಯಿಂದ ಸಾರ್ವಜನಿಕರನ್ನು ದೂರವಿಡುವ ಕೆಲಸ ಆಗಿದೆ ಎಂದು ದೂರಿದರು.

ಈಗ ಬಿಜೆಪಿಯೇ ಭರವಸೆ ಎಂದು ಘೋಷಣೆ ಆರಂಭಿಸಿದ್ದಾರೆ. ಅದು ಸರಿ, ಅವರು ಭರವಸೆ ಕೊಡುವುದಕ್ಕಾಗಿಯೇ ಇರುವುದು ಎಂದ ಅವರು, ಈಗ ನನ್ನಲ್ಲಿ ದುಡ್ಡಿಲ್ಲ, ಜನ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನ್ನಲ್ಲಿ ಹಣ ಇಲ್ಲ ನಿಜ, ದುಡ್ಡಿಲ್ಲದೇ ಈ ಚುನಾವಣೆ ಗೆಲ್ತೇನೆ. ಅಭಿವೃದ್ದಿ ತೂಕ ಮಾಡಿ ಜನ ಮತ ಹಾಕುತ್ತಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ ಗಫೂರ್, ಪಕ್ಷದ ಪ್ರಮುಖರಾದ ರಾಜು ಪೂಜಾರಿ, ರಘುರಾಮ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ದಿನೇಶ ಪುತ್ರನ್, ಮುರಳೀಧರ ಶೆಟ್ಟಿ, ಪ್ರಸನ್ನಕುಮಾರ್ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ವಾಸುದೇವ ಯಡಿಯಾಳ, ಮದನ್ ಕುಮಾರ್, ರೋಶನ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಅನಂತ ಮೊವಾಡಿ, ಉದಯ ಪೂಜಾರಿ, ಸಂತೋಷ್ ಕುಮಾರ್ ಶೆಟ್ಟ, ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ನಾಗಪ್ಪ ಕೊಠಾರಿ, ಸುಜನ್ ಶೆಟ್ಟಿ ಕುಂದಾಪುರ, ಅರುಣ್ ಹಕ್ಲಾಡಿ, ಗಣೇಶ್ ಪ್ರಸಾದ್ ಶೆಟ್ಟಿ, ಜಯರಾಮ್ ನಾಯ್ಕ್, ಸೈಯಾದ್ ಪುರ್ಖಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ವಂಡ್ಸೆ, ಆಲೂರು, ಹರ್ಕೂರು, ಗುಜ್ಜಾಡಿ ಮುಂತಾದ ಗ್ರಾಮಗಳಿಂದ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಸ್ವಾಗತಿಸಿ, ವಂಡ್ಸೆ ಗ್ರಾಮ ಪಂಚಾಯತಿ ಅಧ್ಯಕ್ಷ ಉದಯ ಕುಮಾರ ಶೆಟ್ಟಿ ವಂದಿಸಿದರು. ಸುನೀತ ಶೆಟ್ಟಿ ಕೊಕ್ಕರ್ಣೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!