spot_img
Monday, April 20, 2026
spot_img

ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಅನ್ಯಾಯ-ಕೆ.ವಿಕಾಸ್ ಹೆಗ್ಡೆ

kundapura: ಈ ಬಾರಿಯ ರಾಜ್ಯ ಬಜೆಟ್ ಉಡುಪಿ ಜಿಲ್ಲೆಗೆ ಅತ್ಯಂತ ನೀರಸದಾಯಕವಾಗಿದೆ. ಐದು ಜನ ಶಾಸಕರು ಐವರೂ ಆಡಳಿತ ಪಕ್ಷದ ಶಾಸಕರು ಅದರಲ್ಲಿ ಇಬ್ಬರು ಕ್ಯಾಬಿನೆಟ್ ಸಚಿವರು, ಇಷ್ಟೆಲ್ಲಾ ಇದ್ದು ನಮ್ಮ ಜಿಲ್ಲೆಗೆ ವಿಶೇಷ ಯಾವುದೇ ಯೋಜನೆ, ಕಾರ್ಯಕ್ರಮಗಳು ಇಲ್ಲಾ ರಾಜ್ಯಕ್ಕೆ ಘೋಷಣೆಯಾದ ಯೋಜನೆ, ಕಾರ್ಯಕ್ರಮಗಳ ಪಾಲು ಸಾಧನೆ ಅಲ್ಲ ಜಿಲ್ಲೆಯ ಅಗತ್ಯತೆಗಳಾದ ವಾರಾಹಿ ನೀರಾವರಿ ಯೋಜನೆಗೆ ವಿಶೇಷ ಅನುದಾನ, ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಇದರ ಪುನರ್ ನಿರ್ಮಾಣಕ್ಕೆ ವಿಶೇಷ ಅನುದಾನ, ಬಹು ಬೇಡಿಕೆಯ ಸರ್ಕಾರಿ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ಕಾಲೇಜು ಮಂಜೂರಾತಿ, ಪ್ರವಾಸೋದ್ಯಮದ ಉತ್ತೇಜನಕ್ಕೆ ವಿಶೇಷ ಕಾರ್ಯಕ್ರಮ, ಉದ್ಯೋಗ ಸೃಷ್ಟಿಗೆ ಯೋಜನೆ, ಕುಂದಾಪುರಕ್ಕೆ ಉಪ ಸಾರಿಗೆ ಆಯುಕ್ತರ ಕಛೇರಿ, ಆರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ ಕ್ಷೇತ್ರಗಳಲ್ಲಿ ಹೊಸ ಹೊಸ ಯೋಜನೆಗಳು, ಮೂರ್ತೆದಾರರು, ಮೀನುಗಾರರಿಗೆ ವಿಶೇಷ ಕಾರ್ಯಕ್ರಮ ಯಾವುದೂ ಇಲ್ಲ, ಇನ್ನು ಮೀನುಗಾರಿಕಾ ಬೋಟ್ಗಳಿಗೆ ಸಬ್ಸಿಡಿ ಸೀಮೆ‌ಎಣ್ಣೆಯನ್ನು ಹೆಚ್ಚು ಮಾಡುವುದನ್ನು ಬಿಟ್ಟು ಪೆಟ್ರೋಲ್ ಎಂಜಿನ್ ಗೆ ಉತ್ತೇಜನ ನೀಡುವುದು ದುಬಾರಿ ಪೆಟ್ರೋಲ್ ಬೆಲೆಗೆ ಮೀನುಗಾರರು ಮತ್ತಷ್ಟು ತೊಂದರೆಗೆ ಸಿಲುಕುವಂತೆ ಮಾಡುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಕೆ.ವಿಕಾಸ್ ಹೆಗ್ಡೆ ಬಜೆಟ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ರಾಜ್ಯದ ಒಟ್ಟಾರೆ ಬಜೆಟ್‌ನಲ್ಲಿ ನಮ್ಮ ಜಿಲ್ಲೆಗೆ ಬರುವ ಪಾಲಿನ ಲೆಕ್ಕ ನಾಳೆ ಕೊಡುವುದು ಬೇಡ. ಅಂದರೆ ನಮ್ಮ ಜಿಲ್ಲೆಯ ಸಚಿವರು ಹಾಗೂ ಶಾಸಕರುಗಳ ಇಚ್ಛಾಶಕ್ತಿಯ ಕೊರತೆ, ನಿಷ್ಕ್ರಿಯತೆ ಈ ಬಜೆಟ್ ನಲ್ಲಿ ಎದ್ದು ಕಾಣುತ್ತಿದೆ, ಇನ್ನಾದರೂ ಎಚ್ಚೆತ್ತುಕೊಂಡು ಬಜೆಟ್ ಮೇಲೆ ಚರ್ಚೆಯಾಗುವಾಗ ಜಿಲ್ಲೆಯ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಿ ಕೊನೆಗೆ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳ ಉತ್ತರದಲ್ಲಿ ಉಡುಪಿ ಜಿಲ್ಲೆಯ ನಾಗರಿಕರ, ಜನಸಾಮಾನ್ಯರ ಬೇಡಿಕೆಗಳನ್ನು ಘೋಷಿಸುವಂತಾದರೂ ಮಾಡಿ ಎಂದು ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!