Sunday, September 8, 2024

ಕೆರೆಕಟ್ಟೆ ಪುಣ್ಯ ಕ್ಷೇತ್ರದಲ್ಲಿ ಸಂತ ಅಂತೋನಿಯವರ ಪುಣ್ಯಸ್ಮರಣೆಯ ಸಂಭ್ರಮದ ಹಬ್ಬ: ನಿರಾಶ್ರಿತರ ಆಶ್ರಮಕ್ಕೆ ಶಿಲಾನ್ಯಾಸ

ಹೊಸಂಗಡಿ: ಕುಂದಾಪುರ ತಾಲೂಕಿನ ಹೊಸಂಗಡಿ, ಕೆರೆಕಟ್ಟೆ ಸಂತ ಅಂತೋನಿಯವರ ಪ್ರಸಿದ್ದ ಪುಣ್ಯ ಕ್ಷೇತ್ರದಲ್ಲಿ ಸಂತ ಅಂತೋನಿಯವರ ಪುಣ್ಯಸ್ಮರಣೆಯ ಹಬ್ಬವನ್ನು ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಫೆ.15 ರಂದು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ನಿರಾಶ್ರಿತರ ಆಶ್ರಮಕ್ಕೆ ಶಿಲಾನ್ಯಾಸವನ್ನು ನೇರವೆರಿಸಲಾಯಿತು.

ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ಅತಿ ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಹಬ್ಬದ ಪ್ರಯುಕ್ತ ದಿವ್ಯ ಬಲಿದಾನವನ್ನು ಅರ್ಪಿಸಿದರು.

ಶಿರ್ವ ವಲಯ ಪ್ರಧಾನ ಅ|ವಂ|ಡಾ| ಲೆಸ್ಲಿ ಡಿಸೋಜ ದೇವರ ವಾಕ್ಯವನ್ನು ಪಠಿಸಿ, ಸರ್ವ ಶಕ್ತ ದೇವರಿಗೆ ಅಸಾಧ್ಯವಾದುದು ಎಂಬುದೇ ಇಲ್ಲ. ಅಬ್ರಹಾಂ, ಅವನ ಮಗ ಜಾಕೋಬ್ ಮತ್ತು ಅವನ ಮಗ ಐಸಾಕ್ ದೇವರಲ್ಲಿ ಬಲವಾದ ನಂಬಿಕೆಯನ್ನು ಹೊಂದಿದ್ದರು, ಅಬ್ರಹಾಮನಿಗೆ ದೇವರಲ್ಲಿ ಬಲವಾದ ನಂಬಿಕೆ ಇತ್ತು ಶತಾಯುಷಿಯಾದ ಅವನಿಗೆ, ಮತ್ತು ೯೦ ವರ್ಷದ ಹೆಂಡತಿ ಸಾರಳಿಗೆ ಪುತ್ರನನ್ನು ಕರುಣಿಸಿ ತನಗೆ ಅಸಾಧ್ಯವಾದುದು ಏನೂ ಇಲ್ಲವೆಂದು ತೋರಿಸಿಕೊಡುತ್ತಾನೆ. ದೇವರು ಪುನ: ಅಬ್ರಾಂಮನನ್ನು ಪರೀಕ್ಷೆ ಮಾಡಲಿಕ್ಕಾಗಿ, ನಿನ್ನ ಮಗನನ್ನು ನನಗೆ ಬಲಿದಾನ ಅರ್ಪಿಸಬೇಕೆಂದು ಅಜ್ಞಾಪಿಸುತ್ತಾನೆ, ಆದರೆ ದೇವರ ಮೆಲೆ ಅಪಾರ ನಂಬಿಕೆಯಿಟ ಅಬ್ರಾಂಮ್ ತನ್ನ ಒಬ್ಬನೆ ಒಬ್ಬ ಪುತ್ರನನ್ನು ಬಲಿದಾನ ನೀಡಲು ಮುಂದಾಗುತ್ತಾನೆ, ಆದರೆ ದೇವರು ಆತನನ್ನು ತಡೆದು, ಅಬ್ರಾಹಾಂಮನ ಸಂತತಿಯನ್ನು ಆಕಾಶದ ತಾರೆಗಳಂತೆ ಹೆಚ್ಚಿಸಿದನು. ಅವರ ನಂಬಿಕೆಯಂತೆ ನಮ್ಮ ನಂಬಿಕೆಯಾಗಲಿ. ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ. ಸಂತ ಅಂತೋನಿಯವರು ದೇವರ ಮೇಲೆ ಅಚಲ ನಂಬಿಕೆಯುಳ್ಳವರು, ಸಂತ ಅಂತೋನಿಯವರು ಪ್ರವಚನ ನೀಡುವಲ್ಲಿ ಅತ್ಯಂತ ಖ್ಯಾತರಾಗಿದ್ದರು ಎಂದರು.

ಅದಕ್ಕೂ ಮೊದಲು ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ಅತಿ ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಪ್ರಸ್ತಾವಿಸಿ ಸಂತ ಅಂತೋನಿಯವರು ಅನೇಕ ಪವಾಡ ಮಾಡಿದ ಶ್ರೇಷ್ಟರು. ಅವರು ದೇವರ ವಾಕ್ಯಗಳನ್ನು ಪ್ರವಚನ ಮಾಡಲು ಸುಪ್ರಸಿದ್ದರು. ಅದಕ್ಕಾಗಿ ದೇವರು ಅವರಿಗೆ ಅಮರವಾದ ನಾಲಿಗೆಯನ್ನು ನೀಡಿದ್ದರು. ಅವರ ಸತ್ತು ೩೫ ವರ್ಷದ ನಂತರ ಅವರ ಶವವನ್ನು ಹೊರ ತೆಗೆದು ಪರೀಕ್ಷೆ ಮಾಡಿದಾಗ ಅವರ ದೇಹದ ಎಲ್ಲಾ ಭಾಗಗಳು ಕೊಳೆತರೂ, ಅವರ ನಾಲಿಗೆ ಮಾತ್ರ ಎನೊಂದು ಕೆಡದೆ, ಜೀವವಿತ್ತು, (ಅದೇ ನಾಲಿಗೆಯ ಚಿಕ್ಕ ಭಾಗ ಅವಶೇಷದದ ರೂಪದಲ್ಲಿ ಈ ಕೆರೆಕಟ್ಟೆಯ ಪುಣ್ಯ ಕ್ಷೇತ್ರದಲ್ಲಿ ಇದೆ) ಈ ಕೆರೆಕಟ್ಟೆಯಲ್ಲಿ ಜೂನ್ ೧೩, ೨೦೧೩ ರಂದು ಸಂತ ಅಂತೋನಿಯವರ ನಡೆದ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರವೆಂದು ಅಧಿಕೃತವಾಗಿ ಘೋಷಿಸಲಾಯಿತು ಎಂದು ತಿಳಿಸಿದದು.

ಅವರು ಹಬ್ಬದ ಕೊನೆಯ ಭಾಗದಲ್ಲಿ ನಿರ್ಗತಿಕರ ಆಶ್ರಮಕ್ಕೆ ಅವರು ಶಿಲಾನಾಸ್ಯನ ಗೈದು ಆಶಿರ್ವಚನ ನೀಡಿದರು. ಅವರನ್ನು ಪುಣ್ಯಕ್ಷೇತ್ರದ ಪರವಾಗಿ ಸನ್ಮಾನಿಸಲಾಯಿತು. ಕುಂದಾಪುರ ವಲಯ ಪ್ರಧಾನ ಅ|ವಂ| ವಂದನೀಯ ಫಾ. ಸ್ಟ್ಯಾನಿ ತಾವ್ರೊ, ಮಂಗಳೂರು ಧರ್ಮಪ್ರಾಂತ್ಯದಲ್ಲಿ ಸಂತ ಅಂತೋನಿಯವರ ನಿರ್ಗತಿಕರ ಆಶ್ರಮದಂತೆ ಕೆರೆಕಟ್ಟೆಯ ಸಂತ ಅಂತೋನಿ ನಿರ್ಗತಿಕರ ಆಶ್ರಮ ಬೆಳೆಯಲಿ ಎಂದರು. ಈ ಸಂದರ್ಭದಲ್ಲಿ ನಿರ್ಗತಿಕರ ಆಶ್ರಮಮದ ಸಮಿತಿಯ ಪಿಲಿಫ್ ಡಿಕೋಸ್ತಾ ಉಪಸ್ಥಿರಿದ್ದರು.

ಕುಂದಾಪುರ ರೋಜರಿ ಮಾತಾ ಚರ್ಚಿನ ಗಾಯನ ತಂಡವು ದೇವರ ಸ್ತುತಿ ಗೀತೆಗಳನ್ನು ಹಾಡಿ ದಿವ್ಯ ಬಲಿದಾನಕ್ಕೆ ಸಹಕರಿಸಿತು. ಈ ಪುಣ್ಯ ಕ್ಷೇತ್ರಕ್ಕೆ ದಾನ ನೀಡಿದವರನ್ನು ಸನ್ಮಾನಿಸಲಾಯಿತು. ಹಬ್ಬದ ಬಲಿ ಪೂಜೆಯಲ್ಲಿ ಕುಂದಾಪುರ ವಲಯದ ಹೆಚ್ಚಿನ ಧರ್ಮಗುರುಗಳು, ಇತರ ವಲಯದ ಧರ್ಮಗುರುಗಳು ಸಹಬಲಿದಾನವನ್ನು ಅರ್ಪಿಸಿದರು. ಧರ್ಮಭಗಿನಿಯವರು ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿದ್ದು ಇತರ ಜಿಲ್ಲೆಯವರು ಭಾಗವಹಿಸಿದ್ದ ಹಬ್ಬದಲ್ಲಿ, ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ವಂದಿಸಿದರು. ಉಡುಪಿ ಧರ್ಮಪ್ರಾಂತ್ಯದ ನಿಲಯದ ಧರ್ಮಗುರು ವಂ| ಸಿರಿಲ್ ಲೋಬೊ ಹಬ್ಬದ ಕಾರ್ಯಕ್ರಮಕ್ಕೆ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!