Sunday, September 8, 2024

ಸಾಧನಾ ಮರವಂತೆ: ಸ್ಥಳೀಯ ಕವಿಗಳ ಸಮ್ಮಿಲನ-ಭಾವ ಸಂಸ್ಫುರಣ


ಮರವಂತೆ :ಕಾವ್ಯ ಅಂದರೆ ಅನುಭವಜನ್ಯ ಅನುಭಾವವನ್ನು ಉತ್ಕೃಷ್ಟವೆನಿಸುವ ಪದಗಳ ಮೂಲಕ ಅಭಿವ್ಯಕ್ತಿಗೊಳಿಸುವುದು. ಶ್ರೇಷ್ಠ ಕವಿಗಳ ಕವನಗಳಲ್ಲಿ ಇದಕ್ಕೆ ಉದಾಹರಣೆಗಳು ಲಭಿಸುತ್ತವೆ ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಶುಭಾ ಮರವಂತೆ ಹೇಳಿದರು.

ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ಸಾಧನಾ ಸಮಾಜ ಸೇವಾ ವೇದಿಕೆಯ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಭಾನುವಾರ ನಡೆದ ಸ್ಥಳೀಯ ಕವಿಗಳ ಸಮ್ಮಿಲನ-ಭಾವ ಸಂಸ್ಫುರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕವಿಯಾಗಿ ಪ್ರವರ್ಧಮಾನಕ್ಕೆ ಬರಬೇಕಾದರೆ ಅವರಲ್ಲಿ ಪದಸಮೃದ್ಧಿ ಇರಬೇಕು. ಪೂರ್ವಕವಿಗಳ ಕಾವ್ಯಗಳ ಅಧ್ಯಯನ ನಡೆಸಿ ಅವರ ಶ್ರೇಷ್ಠ ಕವನಗಳಲ್ಲಿ ಬಳಸಿದ ಭಾಷೆ, ಉಪಮೆ, ರೂಪಕಗಳ ಪರಿಣಾಮಕಾರಿತ್ವವನ್ನು ಅರಿತಿರಬೇಕು. ವಿಷಯವನ್ನು ಮೌನವಾಗಿ ಧ್ಯಾನಿಸಿ ಕವಿತೆ ತಂತಾನೆ ಹುಟ್ಟುವ ಸ್ಥಿತಿಯನ್ನು ಸಿದ್ಧಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಸಾಧನಾ ಸ್ಥಾಪಕ ಅಧ್ಯಕ್ಷ, ಸದಸ್ಯರಾದ ಎಸ್. ಜನಾರ್ದನ, ಎಂ. ಅಣ್ಣಪ್ಪ ಬಿಲ್ಲವ, ತಮ್ಮಯ್ಯ ಅಕ್ಸಾಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಧನ್ಯತಾ ಶ್ಯಾನುಭಾಗ್ ಮತ್ತು ವಿನಯಾ ಶ್ಯಾನುಭಾಗ್ ಪ್ರಾರ್ಥನೆ ಹಾಡಿದರು. ಕೋಶಾಧಿಕಾರಿ ಶೇಷಗಿರಿ ಆಚಾರ್ಯ ಸ್ವಾಗತಿಸಿದರು. ಎಸ್. ಜನಾರ್ದನ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ದೇವಿದಾಸ ಶ್ಯಾನುಭಾಗ್ ವಂದಿಸಿದರು. ಜತೀಂದ್ರ ಮರವಂತೆ ನಿರೂಪಿಸಿದರು. ಅಧ್ಯಕ್ಷ ಚಂದ್ರ ಖಾರ್ವಿ ವೇದಿಕೆಯಲ್ಲಿ ಇದ್ದರು.

ಭಾವ ಸಂಸ್ಫುರಣ ಕವಿ ಗೋಷ್ಠಿಯಲ್ಲಿ ಮಹಾಬಲ ಕೆ, ಶಯದೇವಿಸುತೆ, ಮಂಜುನಾಥ ಮರವಂತೆ, ಸುಶೀಲಾ ಮರವಂತೆ, ಸತೀಶ ಪಿ. ಮಧ್ಯಸ್ಥ, ರಾಘವೇಂದ್ರ ಆಚಾರ್ಯ, ನಾಗವೇಣಿ ಪ್ರಭಾಕರ, ಅನಿತಾ ಆರ್. ಕೆ, ಎಂ. ಪ್ರಕಾಶ ಪಡಿಯಾರ್, ಕರುಣಾಕರ ಮರವಂತೆ, ಲೋಲಾಕ್ಷಿ ಉಮೇಶ ಖಾರ್ವಿ, ಸುನೀತಾ ಮರವಂತೆ, ರವಿ ಮಡಿವಾಳ ತಮ್ಮ ಸ್ವರಚಿತ ಕವನಗಳನ್ನು ಸಾದರಪಡಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!