Sunday, September 8, 2024

ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಲ್ಲಿ ವಿಪಕ್ಷ ಸದಸ್ಯರನ್ನು ಕಡೆಗಣಿಸಿಲ್ಲ, ಅಭಿವೃದ್ದಿಗೆ ಸಮಾನ ಆಧ್ಯತೆ ನೀಡಿದ್ದೇವೆ-ಸುಲತ ಎಸ್.ಹೆಗ್ಡೆ

ಸಾಲಿಗ್ರಾಮ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಭಿವೃದ್ಧಿಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಆಡಳಿತ ಪಕ್ಷದಿಂದ ವಿಪಕ್ಷ ಸದಸ್ಯರುಗಳಿಗೆ ಯಾವುದೇ ಅನುದಾನ ನೀಡುವುದಿಲ್ಲ ಎನ್ನುವ ವಿಪಕ್ಷ ಸದಸ್ಯರ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರನ್ನು ಸಮಾನವಾಗಿ ಪರಿಗಣಿಸಲಾಗುತ್ತಿದೆ ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತ ಎಸ್.ಹೆಗ್ಡೆ ಹೇಳಿದ್ದಾರೆ.

ಅವರು ಸಾಲಿಗ್ರಾಮದಲ್ಲಿ ಶುಕ್ರವಾರ ಸಂಜೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಸಾಲಿಗ್ರಾಮ ಪಟ್ಟಣ ಪಂಚಾಯತ್ ವಿವಿಧ ಅಭಿವೃದ್ಧಿ ಕಾಮಗಾರಿ ನಿರ್ವಹಿಸುವ ಬಗ್ಗೆ ಸರ್ಕಾರದಿಂದ ಅನುದಾನ ನಿಗಧಿಯಾದ ಸಂದರ್ಭದಲ್ಲಿಯೂ ಸರ್ಕಾರದ ಸುತ್ತೋಲೆಯಂತೆ ಕೌನ್ಸಿಲ್ ಸಭೆಯಲ್ಲಿ ವಿಷಯವನ್ನು ಮಂಡಿಸಿ ಎಲ್ಲಾ ಸದಸ್ಯರಿಗೂ ಸಮನಾಗಿ ಅನುದಾನ ಹಂಚಿಕೆ ಮಾಡಿ ಸದಸ್ಯರು ಸೂಚಿಸಿರುವ ಕಾಮಗಾರಿಯನ್ನು ಟೆಂಡರ್ ಕರೆದು ಕಾಮಗಾರಿ ನಿರ್ವಹಿಸಲಾಗುತ್ತಿದೆ. ಪ್ರತಿ ಬಾರಿಯು ಅನುದಾನ ಹಂಚಿಕೆಯನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದ್ದು ಶಾಸಕರ ವಿಶೇಷ ಅನುದಾನ, ನಗರೋತ್ಥಾನ ಮತ್ತು ಪ್ರಾಕೃತಿಕ ವಿಕೋಪ ಅನುದಾನವನ್ನು ಸಹ ಶಾಸಕರ ಮಾರ್ಗದರ್ಶನದಂತೆ ವಿಪಕ್ಷ ಮತ್ತು ಪಕ್ಷೇತರರನ್ನು ಕಡೆಗಣಿಸದೇ ಅನುದಾನವನ್ನು ಹಂಚಿಕೆ ಮಾಡಲಾಗಿದೆ ಎಂದರು.

ಸ್ಥಾಯಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವಾಗಲೂ ಕೂಡಾ ಆಡಳಿತ ಪಕ್ಷದ ಸದಸ್ಯರಿದ್ದಾಗಲು ಸಹ ವಿಪಕ್ಷದವರನ್ನು ಕಡಿಗಣಿಸದೇ ರವೀಂದ್ರ ಕಾಮತ್‌ರವರನ್ನು ಸ್ಥಾಯಿ ಸಮಿತಿ ಸದಸ್ಯರಾಗಿ ಎರಡು ಬಾರಿ ಆಯ್ಕೆ ಮಾಡಲಾಗಿದೆ. ಅವರು ಸೂಚಿಸಿರುವ ವಿಷಯಗಳನ್ನು ಅಗತ್ಯಕ್ಕನುಗುಣವಾಗಿ ಸಾಮಾನ್ಯ ಸಭೆಗೆ ಮಂಡಿಸಿ ವಾರ್ಡ್ ಕಾಮಗಾರಿ ನಡೆಸಲಾಗಿದೆ ಎಂದರು.

ನಗರೋತ್ಥಾನದಿಂದ ಬಿಡುಗಡೆಯಾದ ಅನುದಾನದಲ್ಲಿ ಸದಸ್ಯರಾದ ರವೀಂದ್ರ ಕಾಮತ್‌ರವರು ಸೂಚಿಸಿರುವ ಕಾಮಗಾರಿಯನ್ನೇ ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸಿ ಟೆಂಡರ್ ಕರೆದು ಕಾಮಗಾರಿ ನಿರ್ವಹಿಸಲು ಪ್ರಾರಂಭಿಸಲಾಗಿತ್ತು ಆದರೆ ಈ ಮಧ್ಯೆ ಅ ವಾರ್ಡಿನಲ್ಲಿ ಸಾರ್ವಜನಿಕರು ಲಿಖಿತವಾಗಿ ಮನವಿ ಸಲ್ಲಿಸಿ ಈ ಹಿಂದೆ ಕಾಂಕ್ರೀಟೀಕರಣ ಮುಕ್ತಾಯವಾದ ರಸ್ತೆಯ ಮುಂದಿನಭಾಗದಲ್ಲಿ ಸ್ವಲ್ಪ ಕಾಮಗಾರಿಯನ್ನು ಬಾಕಿ ಉಳಿಸಿಕೊಂಡು ಈ ರಸ್ತೆಯ ಕೊನೆಯಭಾಗದಿಂದ ಕಾಮಗಾರಿ ಪ್ರಾರಂಭಿಸಲು ಉದ್ದೇಶಿಸಿದ್ದು ಪ್ರಸ್ತುತ ಕಾಂಕ್ರೀಟ್ ಮುಕ್ತಾಯವಾದ ನಂತರದಿಂದ ಕಾಂಕ್ರೀಟೀಕರಣ ಕಾಮಗಾರಿ ಪ್ರಾರಂಭಿಸಬೇಕು ಎಂದು ಪ್ರಸ್ತುತ ನಿರ್ವಹಿಸಲು ಉದ್ದೇಶಿಸಿರುವ ಕಾಮಗಾರಿಗೆ ಆಕ್ಷೇಪಣೆ ಇರುವುದಾಗಿ ಮನವಿ ಸಲ್ಲಿಸಿದ್ದರು. ಈ ಮನವಿ ಬಗ್ಗೆ ಮುಖ್ಯಾಧಿಕಾರಿಗಳು ಇಂಜೀನಿಯರ್ ರೊಂದಿಗೆ ಸ್ಥಳ ಪರಿಶೀಲನೆ ಮಾಡಲಾಗಿದ್ದು ಕಾಂಕ್ರೀಟ್ ರಸ್ತೆ ಮುಕ್ತಾಯದಿಂದ 40 ಮೀ ಅಂತರದ ರಸ್ತೆಯನ್ನು ಮಧ್ಯದಲ್ಲಿ ಬಾಕಿ ಉಳಿಸಿಕೊಂಡು ರಸ್ತೆ ಮುಂದುವರಿಸಲು ಹಾಗು ಅದರ ನಂತರ 200 ಮೀ ಅಂತರ ಬಿಟ್ಟು ಕಾಂಕ್ರೀಟ್ ಕಾಮಗಾರಿ ನಿರ್ವಹಿಸಲು ರಸ್ತೆ ಅಗದಿರುವುದು ಕಂಡು ಬಂದಿರುತ್ತದೆ. ಅಲ್ಲಿನ ಸಾರ್ವಜನಿಕರು ತಕರಾರು ಸಲ್ಲಿಸಿರುವುದರಿಂದ ಈ ವಿಷಯವನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಈ ರೀತಿ ಕಾಮಗಾರಿ ನಿರ್ವಹಿಸಿದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವುದರಿಂದ ಶಾಸಕರೊಂದಿಗೆ ಚರ್ಚಿಸಿ ರಸ್ತೆಯನ್ನು ಮುಂದುವರಿಸಲು ತೀರ್ಮಾನಿಸಲಾಗಿತ್ತು ಹೊರತು ಕಾಮಗಾರಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಿರುವುದಿಲ್ಲ ಎಂದರು.

ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯವನ್ನು 4 ಆಟೋ ಟಿಪ್ಪರ್ ಮೂಲಕ ಸಂಗ್ರಹಿಸಲಾಗುತ್ತದೆ. ಖಾಸಗಿ ಸ್ಥಳ, ನಿವೇಶನದಲ್ಲಿರುವ ಕಸವನ್ನು ಹೊರತು ಪಡಿಸಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಸೇರಿದ ಸ್ಥಳದಲ್ಲಿನ ಕಸವನ್ನು ವಿಲೇ ಮಾಡಲಾಗುತ್ತದೆ. ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ನಾಮ ನಿರ್ದೇಶನ ಸದಸ್ಯರಿಗೆ ಯಾವುದೇ ಅನುದಾನ ಹಂಚಿಕೆ ಮಾಡಿರುವುದಿಲ್ಲ ಎಂದರು.

ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಡಳಿತ ಕುಂಠಿತಗೊಂಡಿದೆ ಎನ್ನುವ ಆರೋಪ ಸುಳ್ಳು. ಶಾಸಕರು ಸಾಲಿಗ್ರಾಮ ಪೇಟೆ ಅಭಿವೃದ್ದಿಗೆ 26 ಲಕ್ಷಕ್ಕೂ ಹೆಚ್ಚು ಅನುದಾನ ನೀಡಿದ್ದಾರೆ. ರೂ. 6 ಕೋಟಿಯಲ್ಲಿ ಪಾರಂಪಳ್ಳಿ ಸೇತುವೆ, ರೂ.5.5 ಕೋಟಿಯಲ್ಲಿ ತೋಡ್ಕಟ್ಟು ಸೇತುವೆ ನಿರ್ಮಾಣ ಹಂತದಲ್ಲಿದೆ. ಅಲ್ಲದೇ ರೂ. 13.50 ಕೋಟಿಯಲ್ಲಿ ಗುಂಡ್ಮಿ ಬಳಿ ಸೇತುವೆಯ ಕಾಮಗಾರಿ ಮುಕ್ತವಾಗಿದೆ ಎಂದರು.

ಸಾಲಿಗ್ರಾಮ ಪ.ಪಂನಲ್ಲಿ ಕಳೆದ 13ವರ್ಷಗಳಿಂದ ಬಿಜೆಪಿ ಆಡಳಿತದಲ್ಲಿದ್ದು ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಿದ್ದರಿಂದ ಪುನಃ ಅಡಳಿತಕ್ಕೆ ಜನ ಅವಕಾಶ ನೀಡಿದ್ದಾರೆ ಎಂದರು.

ಸದಸ್ಯರಾದ ರಾಜು ಪೂಜಾರಿ ಕಾರ್ಕಡ ಮಾತನಾಡಿ, ರವೀಂದ್ರ ಕಾಮತ್ ಅವರನ್ನು ಯಾವ ಹಂತದಲ್ಲಿಯೂ ಕಡೆಗಣಿಸಿಲ್ಲ. ರಸ್ತೆ ಕಾಮಗಾರಿಗೆ ಸ್ಥಳೀಯರು ಆಕ್ಷೇಪಣೆ ಸಲ್ಲಿಸಿರುವುದರಿಂದ ಸಮಸ್ಯೆಯಾಗಿದೆ. ಸ್ಥಳೀಯರನ್ನು ವಿಶ್ವಾಸಕ್ಕೆ ತಗೆದುಕೊಳ್ಳದೇ ಇರುವುದರಿಂದ ಹೀಗಾಗಿದೆ. ಈ ರಸ್ತೆಗೆ ತಗೆದಿರಿಸಲಾದ ಅನುದಾನವನ್ನು ಬೇರೆ ಕಡೆಗೆ ಸ್ಥಳಾಂತರಿಸಿರುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಅನುಸೂಯ ಆನಂದರಾಮ, ಸದಸ್ಯರಾದ ಸಂಜೀವ ದೇವಾಡಿಗ, ಭಾಸ್ಕರ ಬಂಗೇರ, ಸುಕನ್ಯಾ ಶೆಟ್ಟಿ, ಗಿರಿಜಾ, ನಾಮ ನಿರ್ದೇಶಿತ ಸದಸ್ಯರಾದ ಕರುಣಾಕರ, ವಸಂತ ಕಾಂಚನ್, ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಂದ್ರ, ಎಸ್.ಸಿ ಮೋರ್ಚಾದ ಮಾದವ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!