spot_img
Monday, April 20, 2026
spot_img

ಮರವಂತೆ ಶ್ರೀ ಮಹಾರಾಜ ಸ್ವಾಮಿ ದೇವಸ್ಥಾನದಲ್ಲಿ ಅಭಾರಿ ಮಹೋತ್ಸವ

ಮರವಂತೆ: ಒಂದೆಡೆ ಸಮುದ್ರ, ಇನ್ನೊಂದೆದೆ ನದಿ ನಡುವೆ ಶ್ರೀ ಮಹಾರಾಜ ಸ್ವಾಮಿ ದೇವಸ್ಥಾನ. ಇದು ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುವ ಮರವಂತೆ ವಿಶೇಷ. ಇಂತಹ ಪುರಾಣ ಪ್ರಸಿದ್ಧ ಮರವಂತೆ ಶ್ರೀ ಮಹಾರಾಜ ಸ್ವಾಮಿ ದೇವಸ್ಥಾನದಲ್ಲಿ ತಲೆತಲಾಂತದಿಂದ ಬಲು ಅಪರೂಪದ ಅಭಾರಿ ಸೇವೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಧಾರ್ಮಿಕವಾಗಿ ವಿಶಿಷ್ಠ ನಂಬಿಕೆಯನ್ನು ಹೊಂದಿರುವ ಈ ಅಭಾರಿ ಮಹೋತ್ಸವ ವಿಶೇಷವಾದ ಹಿನ್ನೆಲೆ ಇದೆ.

ಉದ್ಯೋಗ, ಉದ್ದಿಮೆಯಲ್ಲೂ ವಿಶೇಷವಾಗಿ ಮೀನುಗಾರರ ಸಂರಕ್ಷಕನಾಗಿ ಇಂದಿಗೂ ಎಂದಿಗೂ ಪ್ರಸಿದ್ಧನಾಗಿರುವ ದೇವತೆ ಶ್ರೀ ವರಾಹ ಸ್ವಾಮಿ. ಇಂತಹ ಪವಿತ್ರ ಸಾನಿಧ್ಯದಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದ ವಿಶೇಷ ಸಂಪ್ರದಾಯವೇ ಅಭಾರಿ ಸೇವೆ! ಹಿಂದೆ ಪ್ರತೀ ವರ್ಷವೂ ಅಭಾರಿ ಕೊಡುವ ಪ್ರಕ್ರಿಯೆ ನೆಡೆಯುತ್ತಿತ್ತು. ಕಾಲಕ್ರಮೇಣ ಅದು ನಶಿಸಿತು. ಬಳಿಕ ೧೯೭೬ ಪುನಃ ಆರಂಭಿಸಲಾಯಿತು. ಇತ್ತೀಚೆಗೆ ಮೂರು ವರ್ಷಗಳಿಗೊಮ್ಮೆ ನಡೆಸಲ್ಪಡುವ ಆಭಾರಿ ಮಹೋತ್ಸವ ನಡೆಸುತ್ತ ಬರಲಾಗಿದೆ. ಆ ಪ್ರಯುಕ್ತ ಫೆ.11ರಂದು ಅಭಾರಿ ಸಮಿತಿ ನಾಡ-ಹಡವು ಸೇನಾಪುರ ಇವರ ನೇತೃತ್ವದಲ್ಲಿ ಸಂಪನ್ನಗೊಂಡಿತು.

ಧಾರ್ಮಿಕವಾಗಿ ವಿಶೇಷ ನಂಬಿಕೆ, ಸಂಪ್ರದಾಯ ಹೊಂದಿರುವ ಅಭಾರಿ ಮಹೋತ್ಸವದ ಪ್ರಯುಕ್ತ ಮೂರ್ತಿತ್ರಯರ ಸನ್ನಿಧಿಯಲ್ಲಿ ಚಂಡಿಕಾ ಹೋಮ, ವಿಷ್ಣು ಹವನ, ಗಂಗಾಧರ ದೇವರಿಗೆ ರುದ್ರಾಭಿಷೇಕ ಇತ್ಯಾದಿ ಧಾರ್ಮಿಕ ವಿಧಿವಿಧಾನಗಳು ವಿದ್ಯುಕ್ತವಾಗಿ ಜರುಗಿದವು. ಬಳಿಕ ಅನ್ನಸಂತರ್ಪಣೆಗೆ ಸಿದ್ಧಪಡಿಸಿದ ಅನ್ನದ ರಾಶಿಗೆ ಪೂಜೆ ಸಲ್ಲಿಸಲಾಯಿತು. ಸಾಂಪ್ರಾದಾಯಿಕ ನಡೆಸಿಕೊಂಡು ಬರುವ ಒಂದು ಮುಡಿ ಅಕ್ಕಿಯ ನೈವೇಧ್ಯವನ್ನು ಶ್ರೀ ದೇವರ ಎದುರು ಭಾಗದಲ್ಲಿ ಹರಿಯುವ ಸೌಪರ್ಣಿಕಾ ನದಿಯ ನೆಗಳನ ಗುಂಡಿಗೆ ಸಕಲ ಮಂಗಳವಾದ್ಯ ಘೋಷಣೆಗಳೊಂದಿಗೆ ಸಮರ್ಪಿಸಲಾಯಿತು. ನೆಗಳನ ಗುಂಡಿಗೆ ಅಭಾರಿ ಸಲ್ಲಿಸುವ ಪ್ರಕ್ರಿಯೆ ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ನೆರೆದಿದ್ದರು. ಬಳಿಕ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ನಡೆಯಿತು.

ವೇ.ಮೂ.ಕೇಶನಾನಂದ ಅಡಿಗರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸತೀಶ ಎಂ.ನಾಯಕ್ ನಾಡ, ಅಭಾರಿ ಮಹೋತ್ಸವ ಸಮಿತಿ ಅಧ್ಯಕ್ಷರಾದ ನರಸಿಂಹ ಪೂಜಾರಿ ಪಡುಕೋಣೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಅಭಾರಿ ಸಮಿತಿಯ ಸದಸ್ಯರು, ನಾಡ, ಮರವಂತೆ, ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹತ್ತು ಸಮಸ್ತರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!