spot_img
Saturday, April 18, 2026
spot_img

ಗಾನ ಮಾಧುರ್ಯಕ್ಕೆ ಅವಕಾಶ ಕಲ್ಪಿಸುವ ಕಾರ್ಯಕ್ಕೆ ಶ್ಲಾಘನೆ-ಸುಜಯೀಂದ್ರ ಹಂದೆ

ತೆಕ್ಕಟ್ಟೆ: ಸಾಂಸ್ಕೃತಿಕ ಕಾರ್ಯಕ್ರಮ ಸಾರ್ಥಕತೆ ಹೊಂದುವುದು ಕಲೆಯನ್ನು ಪೋಷಿಸಿದಾಗ, ಕಲೆಯನ್ನು ಬೆಳೆಸಿದಾಗ. ಆ ನೆಲೆಯಲ್ಲಿ ಯಶಸ್ವೀ ಕಲಾ ವೃಂದ ಸಾಂಸ್ಕೃತಿಕ ನಿಧಿಗಾಗಿ ಆಯೋಜಿಸಿಕೊಂಡ ಕಾರ್ಯಕ್ರಮದಲ್ಲಿ ಹಲವು ಕಲಾವಿದರು ಹಾಡುವಂತೆ ಮಾಡಿದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕಲಾವಿದ, ಉಪನ್ಯಾಸಕ ಸುಜಯೀಂದ್ರ ಹಂದೆ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಂದಾಪುರ ಗಾಂಧಿ ಮೈದಾನದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಆಯೋಜಿಸಿದ ಪೆರ್ಡೂರು ಮೇಳದ ಯಕ್ಷಗಾನ ’ಸಮೀರ ಸಂಭೂತಂ’ ಕಾರ್ಯಕ್ರಮದಲ್ಲಿ ಡಿಸೆಂಬರ್ 24ರಂದು ಸ್ಪರ್ಧಿಗಳಿಗೆ ಬಹುಮಾನ ನೀಡಿ ಹಂದೆಯವರು ಮಾತನ್ನಾಡಿದರು.

ಕಲೆಯನ್ನು ಪ್ರೋತ್ಸಾಹಿಸುವ ನೆಲೆಯಲ್ಲಿ ಸ್ಪರ್ಧಾತ್ಮಕವಾಗಿ ವಿಭಿನ್ನ ಕಾರ್ಯವೆಂಬಂತೆ ಸಾಮಾಜಿಕ ಜಾಲತಾಣದ ಮುಖೇನ ಪ್ರಸಾದ್ ಮೊಗೆಬೆಟ್ಟು ವಿರಚಿತ ಪದ್ಯವೊಂದನ್ನು ಬಿಡುಗಡೆ ಮಾಡಲಾಗಿತ್ತು. ’ಸಮೀರ ಸಂಭೂತಂ’ ಶಿರೋನಾಮೆಯ ಯಕ್ಷಗಾನಕ್ಕೆ ಸರಿಹೊಂದಿಸಿದ ಸಾಹಿತ್ಯವೊಂದಕ್ಕೆ ಅನೇಕರು ಹಾಡಿ ಕಳುಹಿಸಿದ್ದರು. 22 ಆಯ್ಕೆಯ ಸ್ಪರ್ಧಿಗಳನ್ನು ಆಯ್ದು ಎರಡು ಬಹುಮಾನ ನೀಡಲಾಗಿತ್ತು. ಶ್ರೇಯಾ ನಾಗರಾಜ್ ಹಾಗೂ ಸುವರ್ಣ ಕುಂದಾಪುರ ಸ್ಪರ್ಧೆಯ ವಿಜೇತರು ಎಂದು ಖ್ಯಾತ ನ್ಯಾಯವಾದಿ ಸತೀಶ್ಚಂದ್ರ ಕಾಳಾವರ್‍ಕರ್ ಪ್ರಸ್ತಾಪಿಸಿದರು.

ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಅನಂತ್ ನಾಯಕ್ ತೆಕ್ಕಟ್ಟೆ, ವಿಶ್ವನಾಥ ಆಚಾರ್ ತೆಕ್ಕಟ್ಟೆ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೋಟ ಸುದರ್ಶನ ಉರಾಳ, ಗೌರವಾಧ್ಯಕ್ಷ ಗೋಪಾಲ ಪೂಜಾರಿ ಕೊಮೆ, ಕಾರ್ಯದರ್ಶಿ ವೆಂಕಟೇಶ ವೈದ್ಯ ಸ್ಪರ್ಧಾ ವಿಜೇತರು ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪೆರ್ಡೂರು ಮೇಳದ ರಂಗಸ್ಥಳದಲ್ಲಿ ಕಥಕ್ಕಳಿ, ತೆಂಕು, ಬಡಗು ಯಕ್ಷಗಾನ ’ಸಮೀರ ಸಂಭೂತಂ’ ರಂಗ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!