Sunday, September 8, 2024

ಭಾಗವತ ಧಾರೇಶ್ವರರಿಗೆ ಉಡುಪ ಪ್ರಶಸ್ತಿ

ಕೋಟ : ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕರಲ್ಲೋರ್ವರಾದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಬರಹಗಾರ, ಕ್ರೀಡಾಪಟು ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ ಉಡುಪ ಪ್ರಶಸ್ತಿ 2022 ಕ್ಕೆ ಈ ಬಾರಿ ಖ್ಯಾತ ಯಕ್ಷಗಾನ ಭಾಗವತ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಧಾರೇಶ್ವರರು ಭಾಜನರಾಗಿದ್ದಾರೆ.

1978ರಿಂದ ಸುಮಾರು ನಾಲ್ಕು ದಶಕಕ್ಕೂ ಮೀರಿ ಅಮೃತೇಶ್ವರಿ, ಪೆರ್ಡೂರು, ಶಿರಸಿ ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ ಧಾರೇಶ್ವರರು ಆಟ ಕೂಟಗಳಲ್ಲಿ ಸಮರ್ಥ ರಂಗ ನಿರ್ದೇಶನಮಾಡಿದವರು. ಗುರು ನಾರಣಪ್ಪ ಉಪ್ಪೂರರ ಶಿಷ್ಯರಾಗಿ ಪುರಾಣ ಪ್ರಸಂಗ ಹಾಗೂ ನವೀನ ಪ್ರಸಂಗಗಳಲ್ಲಿ ಯಕ್ಷ ಪರಂಪರೆಯೊಂದಿಗೆ ತಮ್ಮದೇ ಸ್ವಂತಿಕೆಯ ಛಾಪು ಮೂಡಿಸಿದವರು. ಯಕ್ಷಗಾನ ಕ್ಷೇತ್ರಕ್ಕೆ ಕಾಲಿಡುವ ಮೊದಲು ನಾಟಕ ರಂಗದಲ್ಲಿ ಗುರುತಿಸಿಕೊಂಡ ಧಾರೇಶ್ವರರು ಮೂಲತಃ ಗೋಕರ್ಣದವರು. ಸಂಗೀತ ಕ್ಷೇತ್ರದಲ್ಲಿ ಪರಿಣಿತರಾದ ಇವರು ಪಾತ್ರ ದೃಶ್ಯ ಸಂದರ್ಭಾನುಸಾರ ಹೊಸ ರಾಗಗಳನ್ನು ಯಕ್ಷಗಾನೀಯವಾಗಿ ಪರಿಚಯಿಸಿದವರು.

ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧ್ರ ಹಂದೆ, ಟ್ರಸ್ಟ್ ನ ಕಾರ್ಯಾಧ್ಯಕ್ಷ ಮಹೇಶ ಉಡುಪ, ಅಧ್ಯಕ್ಷ ಬಲರಾಮ ಕಲ್ಕೂರ, ಸದಸ್ಯ ಜನಾರ್ದನ ಹಂದೆ ಎಚ್. ರನ್ನು ಒಳಗೊಂಡ ಆಯ್ಕೆ ಸಮಿತಿಯ ಆಶಯದಂತೆ ಪ್ರಸಂಗ ರಚಯಿತರು, ರಂಗ ನಿರ್ದೇಶಕರೂ, ಸಮರ್ಥ ಭಾಗವತರೂ ಆಗಿರುವ ಧಾರೇಶ್ವರರಿಗೆ ಮುಂಬರುವ ಜನವರಿ 23 ರಂದು ಕೋಟದ ಪಟೇಲರ ಮನೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಉಡುಪ ಪ್ರಶಸ್ತಿ ನೀಡಲಾಗುವುದು ಎಂದು ಕಾರ್ಯದರ್ಶಿ ಎಚ್, ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!