spot_img
Tuesday, April 14, 2026
spot_img

ಕುಂದಾಪುರ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿ ಜನ್ಮದಿನಾಚರಣೆ

ಕುಂದಾಪುರ, ನ.19: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನ.19ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆ ನಡೆಯಿತು.

ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷರಾದ ಶಿವರಾಮ ಶೆಟ್ಟಿ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಭೂ ಮಸೂದೆ, ಬ್ಯಾಂಕ್ ರಾಷ್ಟ್ರೀಕರಣ, 20 ಅಂಶಗಳ ಕಾರ್ಯಕ್ರಮಗಳ ಮೂಲಕ ದೇಶದ ಎಲ್ಲಾ ವರ್ಗದ ಜನರ ಏಳಿಗೆಗೆ ಶ್ರಮಿಸಿದ್ದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ವಹಿಸಿದ್ದರು.

ಇಂದಿರಾ ಗಾಂಧಿಯವರು ದೇಶಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಕಿಸಾನ್ ಘಟಕದ ಅಧ್ಯಕ್ಷ ಭಾಸ್ಕರ್ ಶೆಟ್ಟಿ ಮತ್ತು ಹಿರಿಯರಾದ ಕಾಳಪ್ಪ ಪೂಜಾರಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಚಂದ್ರಶೇಖರ್ ಶೆಟ್ಟಿ ಮೊಳಹಳ್ಳಿ, ಮಹಿಳಾ ಬ್ಲಾಕ್ ಅಧ್ಯಕ್ಷ ದೇವಕಿ ಸಣ್ಣಯ್ಯ ,ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಅಬ್ದುಲ್ಲಾ ಕೋಡಿ, ಮಂಜಿತ್ ನಾಗರಾಜ್, ಕೋಣಿ ಪಂಚಾಯತ್ ಉಪಾಧ್ಯಕ್ಷ ಅಶೋಕ್ ಭಂಡಾರಿ, ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಚಂದ್ರಶೇಖರ್ ಖಾರ್ವಿ, ಶ್ರೀಧರ್ ಶೇರಿಗಾರ, ಜಿಲ್ಲಾ ಕಾಂಗ್ರೆಸ್ ಸೋಶಿಯಲ್ ಮೀಡಿಯ ಅಧ್ಯಕ್ಷ ರೋಷನ್ ಶೆಟ್ಟಿ , ಸುಭಾಷ್ ಪೂಜಾರಿ, ಘಟಕಗಳ ಅಧ್ಯಕ್ಷರಾದ ಧರ್ಮ ಪ್ರಕಾಶ್, ಅಶ್ವತ್ ಕುಮಾರ್, ಮುನಫ್ ಕೋಡಿ, ರೇವತಿ ಶೆಟ್ಟಿ, ಗಣಪತಿ ಶೇಟ್ ಕೇಶವ್ ಭಟ್, ಸ್ಟೀವನ್ ಡಿಕೋಸ್ಟ, ಕುಮಾರ ಖಾರ್ವಿ, ಕೋಡಿ ಪ್ರಭಾಕರ್, ಸದಾನಂದ ಖಾರ್ವಿ, ಜ್ಯೋತಿ ನಾಯಕ್, ಸವಿತಾ ಸಿಕ್ವೆರಾ, ಅಭಿಜಿತ್ ಪೂಜಾರಿ, ಸು ಜನ್ ಶೆಟ್ಟಿ, ಪ್ರಭಾಕರ್ ಕಡ್ಗಿ ಮನೆ, ವಿವೇಕಾನಂದ, ರಾಕೇಶ್ ಶೆಟ್ಟಿ ,ವಿಟ್ಟಲ್ ಕಾಂಚನ್, ಕೆ ಪಿ ಅರುಣ್ ಪಟೇಲ್, ದಿನೇಶ್ ಬೆಟ್ಟ, ಸಚಿನ್ ಕುಮಾರ್ ,ಜೋಸೆಫ್ ರೆಬೆಲ್ಲೊ, ವೇಣುಗೋಪಾಲ್, ಸಂಪತ್ ಶೆಟ್ಟಿ, ಲಕ್ಷ್ಮಣ, ಸತೀಶ್ ಶೆಟ್ಟಿ, ಶಶಿರ, ಗುರುರಾಜ್, ರಮ್ಶೀದ್, ನಾಗರಾಜ್, ಫೈರೋಜ್, ಸಂಗೀತ ಇನ್ನಿತರರು ಉಪಸ್ಥಿತರಿದ್ದರು.

ಹೇರಿಕುದ್ರು ಗಂಗಾಧರ ಶೆಟ್ಟಿ ಸ್ವಾಗತಿಸಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿ, ಅಶೋಕ್ ಸುವರ್ಣ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!