spot_img
Tuesday, April 14, 2026
spot_img

ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಕವಿಗೋಷ್ಠಿ

ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ವಿದ್ಯಾರ್ಥಿ ಕವಿಗೋಷ್ಠಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರ ವಹಿಸಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಪುಂಡಲೀಕ ನಾಯಕ್ ನಾಯ್ಕನಕಟ್ಟೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ವಿದ್ಯಾರ್ಥಿ ಸ್ವ ರಚಿಸಿ ವಾಚಿಸಿದ ಕವನಗಳನ್ನು ವಿಮರ್ಶಿಸಿ ವಿದ್ಯಾರ್ಥಿ ಪ್ರತಿಭೆಗಳನ್ನು ಕೊಂಡಾಡಿದರು. ಭವಿಷ್ಯದಲ್ಲಿ ನೀವು ಯಾವುದೇ ಉನ್ನತ ಉದ್ಯೋಗ ಪಡೆದರು ಈ ನೆಲದ ಭಾಷೆಯ ಅಭಿಮಾನ ನಿಮಗಿರಲಿ ಹಾಗೂ ನಿಮ್ಮ ಬರೆವಣಿಗೆಯ ಸಾಮರ್ಥ್ಯ ಇನ್ನು ಹೆಚ್ಚಿಸುವಂತೆ ಕರೆ ನೀಡಿದರು.

ಸಮಾರಂಭದಲ್ಲಿ ಜನತಾ ಪ್ರೌಢಶಾಲೆ ಹೆಮ್ಮಾಡಿಯ ಮುಖ್ಯ ಶಿಕ್ಷಕರಾದ ಮಂಜು ಕಾಳಾವರ,ಕಾಲೇಜಿನ ಉಪಪ್ರಾಂಶುಪಾಲರು,ಬೋಧಕ,ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶಿಫಾಲಿ, ಭೂಷಣ್, ಪ್ರಣವ್ ಅಡಿಗ, ವರ್ಷಾ ರವಿಶಂಕರ್ ಸೃಜನ್, ಐಶ್ವರ್ಯ ವೈದ್ಯ, ದರ್ಶನ್, ಸಾಲ್ವಿನ್ ಮನೋಜ್, ಪಲ್ಲವಿ,ಶಶಿಕಲಾ ಹಾಗೂ ಉನ್ನತಿ ಗೌಡ ಕವಿಗೋಷ್ಠಿಯಲ್ಲಿ   ತಾವು ಸ್ವರಚಿಸಿದ ಕವನಗಳನ್ನು ವಾಚಿಸಿದರು.

ಕನ್ನಡ  ಉಪನ್ಯಾಸಕರಾದ ಉದಯ್ ನಾಯ್ಕ್ ರವರು ಅತಿಥಿಗಳನ್ನು ಪರಿಚಯಿಸಿ, ವಿದ್ಯಾರ್ಥಿಗಳಾದ ವರ್ಣಾ ಪ್ರಾರ್ಥಿಸಿ, ಶ್ರೀಧರ ಹೆಗ್ಡೆ ಸ್ವಾಗತಿಸಿ, ರಕ್ಷಿತಾ ಹಾಗೂ ಧನ್ಯ  ಕಾರ್ಯಕ್ರಮ ನಿರೂಪಿಸಿ, ನಿಖಿಲ್  ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!