Sunday, September 8, 2024

ಕುಂದಾಪುರ ನವೀಕೃತ ಆರ್.ಎನ್.ಶೆಟ್ಟಿ ಸಭಾಭವನ ಉದ್ಘಾಟನೆ: ಆರ್.ಎನ್ ಶೆಟ್ಟಿ ಪುತ್ಥಳಿ ಅನಾವರಣ

ಸಂಘ ಸಂಸ್ಥೆಗಳು ನಿರಂತರ ಚಟುವಟಿಕೆಯಿಂದ ಕೂಡಿರಬೇಕು-ಕೆ.ಪ್ರತಾಪಚಂದ್ರ ಶೆಟ್ಟಿ
ಕುಂದಾಪುರ, ಅ.1: ಸಂಘ-ಸಂಸ್ಥೆಗಳು ನಿರಂತರವಾಗಿ ಚಟುವಟಿಕೆಯಿಂದ ಸಮಾಜಮುಖಿಯಾಗಿ ಕೂಡಿರಬೇಕು. ಇವತ್ತು ಬಂಟರ ಸಂಘ, ಸಭಾಂಗಣ ನಿರ್ಮಾಣಕ್ಕೆ ನೆರವಾದವರನ್ನು ಸ್ಮರಿಸುವ ನಿಟ್ಟಿನಲ್ಲಿ ಆರ್.ಎನ್ ಶೆಟ್ಟಿಯವರ ಪುತ್ಥಳಿ ಸ್ಥಾಪನೆ ಮಾಡಿರುವುದು, ದಾನಿಗಳ ಹೆಸರನ್ನು ಶಾಶ್ವತವಾಗಿ ಇರಿಸಿರಿಸುವುದು ಅರ್ಥಪೂರ್ಣವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಅವರು ಬಂಟರ ಯಾನೆ ನಾಡವರ ಮಾತೃ ಸಂಘ ರಿ., ಮಂಗಳೂರು ಇದರ ಕುಂದಾಪುರ ತಾಲೂಕು ಸಮಿತಿ ವತಿಯಿಂದ ನವೀಕೃತ ಆರ್.ಎನ್.ಶೆಟ್ಟಿ ಸಭಾಭವನ ಉದ್ಘಾಟನೆ, ಪುತ್ಥಳಿ ಅನಾವರಣ, ದಿ.ಯಡ್ತರೆ ಮಂಜಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಆಶಕ್ತರಿಗೆ ಸಹಾಯಧನ ವಿತರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಂಟರ ಯಾನೆ ನಾಡವರ ಮಾತೃ ಸಂಘ ರಿ., ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಆರ್.ಎನ್.ಶೆಟ್ಟಿಯವರ ಸೋದರ ಸಂಬಂಧಿ ಎನ್.ಐ ಶೆಟ್ಟಿ ಸಭಾಂಗಣ ಉದ್ಘಾಟಿಸಿದರು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಪುತ್ಥಳಿ ಅನಾವರಣ ಮಾಡಿದರು.

ದಿ.ಯಡ್ತರೆ ಮಂಜಯ್ಯ ಶೆಟ್ಟಿ ಸಂಸ್ಮರಣ ಪ್ರಶಸ್ತಿಯನ್ನು ಮಂಗಳೂರು ತೇಜಸ್ವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಎಂ.ಶಾಂತಾರಾಮ ಶೆಟ್ಟಿಯವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಎಂ.ಶಾಂತಾರಾಮ ಶೆಟ್ಟಿಯವರು ಪ್ರಶಸ್ತಿಗಳು ಸಣ್ಣ ಪ್ರಾಯದವರಿಗೆ ಸಲ್ಲಿಕೆಯಾದಾಗ ಅವರನ್ನು ಹುರಿದುಂಬಿಸಿದಂತಾಗುತ್ತದೆ. ಆದರೆ ಇವತ್ತು ನನಗೆ ಈ ಪ್ರಶಸ್ತಿ ಲಭಿಸಿದೆ. ಬಹಳ ಧನ್ಯತೆ ತಂದುಕೊಟ್ಟಿದೆ. ಹಲವು ಪ್ರಶಸ್ತಿಗಳು ಲಭಿಸಿದರೂ ಕೂಡಾ ಈ ಪ್ರಶಸ್ತಿ ನನಗೆ ಹೆಚ್ಚಿನ ಮಹತ್ವದ್ದಾಗಿದೆ ಎಂದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಬೆಂಗಳೂರು ಸೌತ್ ಫೀಲ್ಡ್ ಪೈಂಟ್ಸ್ ಇದರ ಆಡಳಿತ ನಿರ್ದೇಶಕ ಎಂ.ಶಿವರಾಮ ಹೆಗ್ಡೆ, ಗಿಳಿಯಾರು ಕುಶಲ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಉದಯಕುಮಾರ್ ಹೆಗ್ಡೆ, ಬಂಟರ ಯಾನೆ ನಾಡವರ ಮಾತೃ ಸಂಘದ ಜೊತೆ ಕಾರ್ಯದರ್ಶಿ ಸಂಪಿಗೇಡಿ ಸಂಜೀವ ಶೆಟ್ಟಿ, ಬಂಟರ ಸಂಘ ಬೆಂಗಳೂರು ಇದರ ಗೌರವ ಕಾರ್ಯದರ್ಶಿ ಬಿ.ಆನಂದರಾಮ್ ಶೆಟ್ಟಿ, ಬಂಟರ ಸಂಘ ಬೆಂಗಳೂರು ಇದರ ಕೋಶಾಧಿಕಾರಿ ಅಮರನಾಥ ಶೆಟ್ಟಿ ಮಂದರ್ತಿ, ಯುವ ಬಂಟರ ಸಂಘದ ಅಧ್ಯಕ್ಷ ಡಾ.ಅಂಪಾರು ನಿತ್ಯಾನಂದ ಶೆಟ್ಟಿ, ಕೊಣ್ಕೆ ಸಂಜೀವ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ರೈ ಮಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರದ ಕ್ಷೇತ್ರದ ಸಾಧನೆಗಾಗಿ ಬಿ.ಅಪ್ಪಣ್ಣ ಹೆಗ್ಡೆ, ಶಿಕ್ಷಣ ಕ್ಷೇತ್ರದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಕೆ.ರಾಜೀವ ಶೆಟ್ಟಿ ಅಸೋಡು, ವೃತ್ತಿಸೇವೆಯಲ್ಲಿ ಹಿರಿಯ ನ್ಯಾಯವಾದಿ ಎ.ಬಿ ಶೆಟ್ಟಿ ಕುಂದಾಪುರ, ವೈದ್ಯಕೀಯ ಸೇವೆಯಲ್ಲಿ ನಿವೃತ್ತ ತಾಲೂಕು ವೈದ್ಯಾಧಿಕಾರಿ ಡಾ.ಎ.ವಸಂತಕುಮಾರ ಶೆಟ್ಟಿ, ಸಮಾಜಸೇವೆಯಲ್ಲಿ ರೆಡ್‌ಕ್ರಾಸ್ ಕುಂದಾಪುರ ಘಟಕದ ಸಭಾಪತಿ ಎಸ್.ಜಯಕರ ಶೆಟ್ಟಿ, ಕೃಷಿಯಲ್ಲಿ ಸದಾಶಿವ ಶೆಟ್ಟಿ ಕಟ್ಟೆಮನೆ ತೊಂಬಟ್ಟು ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾದ ಸೋಮಶೇಖರ ಶೆಟ್ಟಿ ಕೆಂಚನೂರು, ಸಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ, ಚಿತ್ತರಂಜನ ಹೆಗ್ಡೆ ಹರ್ಕೂರು, ರೋಹಿತ್ ಕುಮಾರ್ ಶೆಟ್ಟಿ ಬ್ರಹ್ಮಾವರ, ಸುಪ್ರಿತಾ ದೀಪಕ್ ಶೆಟ್ಟಿ ನೈಲಾಡಿ, ನಾಮ ನಿರ್ದೇಶಕ ಸದಸ್ಯರಾದ ಕೃಷ್ಣಪ್ರಸಾದ್ ಅಡ್ಯಂತಾಯ, ಶಿವರಾಮ ಶೆಟ್ಟಿ ಮಲ್ಯಾಡಿ, ರಮೇಶ ಶೆಟ್ಟಿ ಗುಲ್ವಾಡಿ ಉಪಸ್ಥಿತರಿದ್ದರು.

ಬಂಟರ ಯಾನೆ ನಾಡವರ ಮಾತೃ ಸಂಘ ಕುಂದಾಪುರ ತಾಲೂಕು ಸಮಿತಿಯ ಸಂಚಾಲಕ ಸುಧಾಕರ ಶೆಟ್ಟಿ ಆವರ್ಸೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಸಂಚಾಲಕ ವಿಕಾಸ್ ಹೆಗ್ಡೆ ಕೋಳ್ಕೆರೆ ವಂದಿಸಿದರು. ಉಪನ್ಯಾಸಕ ಅಕ್ಷಯ ಹೆಗ್ಡೆ ಮೊಳಹಳ್ಳಿ ಮತ್ತು ಮನೋರಾಜ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!