spot_img
Monday, April 13, 2026
spot_img

ಪಿ‌ಎಫ್‌ಐ ಸಂಘಟನೆಯನ್ನು ಬೇರು ಸಹಿತ ಕಿತ್ತು ಹಾಕಬೇಕು-ಪ್ರಮೋದ್ ಮುತಾಲಿಕ್

ಕುಂದಾಪುರ, ಅ.1: ಪಿ‌ಎಫ್‌ಐ ಸಂಘಟನೆಯ ವಿರುದ್ಧ ಕೇಂದ್ರ ಸರ್ಕಾರ ಯೋಗ್ಯ ಕ್ರಮವನ್ನೇ ತಗೆದುಕೊಂಡಿದೆ. ದೇಶದ ಸುರಕ್ಷತೆಯ ದೃಷ್ಟಿಯಿಂದ ದಿಟ್ಟ ಹೆಜ್ಜೆ ಇಟ್ಟಿರುವುದು ಬಹಳ ಒಳ್ಳೆಯ ಬೆಳವಣಿಗೆ. ಪಿ‌ಎಫ್‌ಐ ಜಾಲ ದೊಡ್ಡ ಪ್ರಮಾಣದಲ್ಲಿದ್ದು, ಆಳವಾಗಿ ಬೇರು ಬಿಟ್ಟಿದ್ದು ಇನ್ನೂ ಆಳವಾಗಿ ತನಿಖೆಯಾಗಬೇಕು, ಅದನ್ನು ಬುಡ ಸಹಿತ ಕಿತ್ತು ಹಾಕುವ ಕೆಲಸ ಆಗಬೇಕು ಎಂದು ಶ್ರೀರಾಮ ಸೇವೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ಅವರು ಕುಂದಾಪುರದ ಹೋಟೆಲ್ ಶರೋನ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಕೊಲೆಯಾದ ಪ್ರವೀಣ್ ನೆಟ್ಟಾರು ಪತ್ನಿಗೆ ಸಿ.ಎಂ. ಕಛೇರಿಯಲ್ಲಿ ನೌಕರಿ ಕಲ್ಪಿಸಿರುವ ಬಗ್ಗೆ ಆದೇಶವಾಗಿರುವುದನ್ನು ಸ್ವಾಗತಿಸುತ್ತೇವೆ. ಸರ್ಕಾರವನ್ನು ಅಭಿನಂದಿಸುತ್ತೇವೆ. ಆದರೆ ಅವರಿಗೆ ಪುತ್ತೂರು ಭಾಗದಲ್ಲಿಯೇ ಅವರಿಗೆ ಖಾಯಂ ನೌಕರಿ ಕೊಡಬೇಕಿತ್ತು. ಗುತ್ತಿಗೆ ಆಧಾರದ ನೌಕರಿಯಲ್ಲಿ ಯಾವಾಗ ಬೇಕಾದರೂ ರದ್ದು ಮಾಡಬಹುದು, ಅಲ್ಲಿ ಅಭದ್ರತೆ ಕಾಡುತ್ತದೆ. ಹಾಗಾಗಿ ಖಾಯಂ ನೌಕರಿ ಕೊಡಬೇಕು ಎಂದು ಆಗ್ರಹಿಸುತ್ತೇವೆ ಎಂದರು.

ಪರೇಶ ಮೇಸ್ತ ಕೊಲೆ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆಯಿಂದ ನಿರೀಕ್ಷಿತ ಪ್ರಯೋಜನವಾಗಿಲ್ಲ. ತನಿಖಾ ಸಂಸ್ಥೆ ಸರಿಯಾಗಿ ತನಿಖೆ ನಡೆಸಿಲ್ಲ. ಪರೇಶ ಮೇಸ್ತನ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಹಾಗೂ ಪರೇಶ ಮೇಸ್ತ, ರುದ್ರೇಶ ಅವರ ಕುಟುಂಬಗಳು ಅತಂತ್ರವಾಗಿದೆ. ಈ ರೀತಿ ಕೊಲೆಯಾದ ಸಂತೃಸ್ತ ಕುಟುಂಬಗಳ ಆರ್ಥಿಕ ಸ್ಥಿತಿಗತಿಯನ್ನು ಸರ್ಕಾರ ಗಮನಿಸಿ ಸೂಕ್ತ ಭದ್ರತೆ ಒದಗಿಸಬೇಕು ಎಂದರು.

ರಾಜ್ಯದ ಕೆಲವಡೆ ಸಂಭವಿಸಿದ ಅಸ್ಪ್ರಶ್ಯತೆ ಆಚರಣೆಯನ್ನು ಖಡಾಖಂಡಿತವಾಗಿ ವಿರೋಧಿಸುತ್ತೇವೆ. ಈ ಬಗ್ಗೆ ಸೂಕ್ತ ಕ್ರಮವಾಗಬೇಕು. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ನನಸಾಗಬೇಕಾದರೆ ಅಸ್ಪ್ರಶ್ಯತೆ ಆಚರಣೆ ಸಂಪೂರ್ಣವಾಗಿ ನಿವಾರಣೆಯಾಗಬೇಕು ಎಂದರು.

ಇವತ್ತು ಇಲಾಖೆಗಳು ದ್ವಂದ್ವ ನಿಲುವು ಅನುಸರಿಸುತ್ತಿವೆ. ಕುಂದಾಪುರದ ಹಳೆ ಬಸ್ ನಿಲ್ದಾಣದ ಬಳಿ ರಸ್ತೆ ಅಭಿವೃದ್ದಿ ಮಾಡಲು ಕೆಲವರು ಅಡ್ಡಿ ಪಡಿಸುತ್ತಿದ್ದಾರೆ. ಕೂಡಲೇ ಈ ರಸ್ತೆಯನ್ನು ಅಭಿವೃದ್ದಿ ಪಡಿಸಬೇಕು. ಅಡ್ಡಿಪಡಿಸುವ ಯತ್ನಗಳು ಆದರೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಬೇಕು ಎಂದರು.

ಶ್ರೀರಾಮ ಸೇನೆ ಸಂಘಟನಾ ದೃಷ್ಟಿಯಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಪ್ರವಾಸ ಕೈಗೊಂಡಿದೆ. ಉಡುಪಿ ಜಿಲ್ಲೆಯಾಧ್ಯಂತ ಪ್ರವಾಸ ಮಾಡುತ್ತೇವೆ. ಶ್ರೀರಾಮ ಸೇನೆ ರಾಜಕೀಯ ಉದ್ದೇಶ ಇಟ್ಟುಕೊಂಡ ಸಂಘಟನೆಯಲ್ಲ, ಹಿಂದುತ್ವದ ವಿಚಾರದಲ್ಲಿ ರಾಜಿ ಇಲ್ಲ ಎಂದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ವಿಭಾಗೀಯ ಅಧ್ಯಕ್ಷ ಮೋಹನ್ ಭಟ್, ಜಿಲ್ಲಾ ಅಧ್ಯಕ್ಷ ಜಯರಾಮ ಅಂಬೆಕಲ್ಲು, ಶ್ರೀರಾಮ ಸೇನೆ ಮುಖಂಡರಾದ ರಾಮಕೃಷ್ಣ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್ ಪೂಜಾರಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!