spot_img
Friday, July 24, 2026
spot_img

ಕುಂದಾಪುರ ವಲಯದ ಪಾಲನಾ ಮಂಡಳಿಯ ಸಭೆ ಹಾಗೂ ತರಬೇತಿ ಕಾರ್ಯಕ್ರಮ

ತಲ್ಲೂರಿನ ಸಂತ ಫ್ರಾನ್ಸಿಸ್ ಅಸ್ಸಿಸಿ ಚರ್ಚಿನ ಸಭಾಂಗಣದಲ್ಲಿ ಕುಂದಾಪುರ ವಲಯದ ಪಾಲನಾ ಮಂಡಳಿಯ ಸಭೆ ಹಾಗೂ ತರಬೇತಿ ಕಾರ್ಯಕ್ರಮ 2026ರ ಜುಲೈ 19ರಂದು ನಡೆಯಿತು.
ಈ ತರಬೇತಿ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ಅತೀ ವಂದನೀಯ ಫಾ. ಸ್ಟೀಫನ್ ಡಿಸೋಜಾ ಅವರು ಆಗಮಿಸಿ “ಮಹೋನ್ನತ ಮಾನವೀಯತೆ” ವಿಷಯದ ಕುರಿತು ಮಾರ್ಗದರ್ಶನ ನೀಡಿದರು.
ತಮ್ಮ ಉಪನ್ಯಾಸದಲ್ಲಿ ಅವರು ಪೋಪ್ ಲಿಯೋ XIV ಅವರ ಮೊದಲ ಎನ್‌ಸೈಕ್ಲಿಕಲ್, “ಮಹೋನ್ನತ ಮಾನವೀಯತೆ” ಕುರಿತು ವಿವರಿಸುತ್ತಾ, ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ವ್ಯಕ್ತಿಯ ಘನತೆಯನ್ನು ಕಾಪಾಡುವ ಅಗತ್ಯತೆ ಕುರಿತು ತಿಳಿಸಿದರು. ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು, ಸವಾಲುಗಳು, ಮಾನವ ಮೌಲ್ಯಗಳ ರಕ್ಷಣೆ ಹಾಗೂ ತಂತ್ರಜ್ಞಾನವನ್ನು ಜವಾಬ್ದಾರಿಯಿಂದ ಮತ್ತು ನೈತಿಕತೆಯಿಂದ ಬಳಸುವ ಮಹತ್ವವನ್ನು ಅವರು ಮನದಟ್ಟುಗೊಳಿಸಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ಕುಂದಾಪುರ ವಲಯದ ಎಲ್ಲಾ ಧರ್ಮಗುರುಗಳು, ಧರ್ಮಭಗಿನಿಯರು, ಪ್ರತಿ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು, 20 ಆಯೋಗಗಳ ಸಂಯೋಜಕರು, ತಲ್ಲೂರು ಚರ್ಚಿನ ಕ್ರೈಸ್ತ ಶಿಕ್ಷಣ ಶಿಕ್ಷಕರು ಹಾಗೂ ಸಾಮಾಜಿಕ ಸಂವಹನ ಆಯೋಗದ ಸದಸ್ಯರು ಭಾಗವಹಿಸಿದ್ದರು. ಒಟ್ಟು 58 ಮಂದಿ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃತಕ ಬುದ್ಧಿಮತ್ತೆಯು ಮಾನವ ಘನತೆಯನ್ನು ಹೇಗೆ ಕಾಪಾಡಲು ಸಹಕಾರಿಯಾಗುತ್ತದೆ ಎಂಬುದನ್ನು ತಿಳಿದುಕೊಂಡರು.
ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾದ ಅ| ವಂ| ಫಾ. ಪೌಲ್ ರೇಗೋ ಸ್ವಾಗತಿಸಿದರು.ವಲಯದ ಪಾಲನಾ ಮಂಡಳಿಯ ಕಾರ್ಯದರ್ಶಿ ಜೆನಿಫ್ ರೀಮಾ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!