Sunday, September 8, 2024

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯಲ್ಲಿ ಗಾಂಧೀಜಿ-ಶಾಸ್ತ್ರೀಜಿ ಜನ್ಮ ದಿನಾಚರಣೆ

ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್‌ಬಹುದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯನ್ನು ಅತ್ಯಂತ ಶೃದ್ಧಾಪೂರ್ವಕವಾಗಿ ಆಚರಿಸಲಾಯಿತು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ, ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಮಾತನಾಡಿ ಗಾಂಧೀಜಿ ಮತ್ತು ಶಾಸ್ತ್ರೀಜಿಯವರು ಈ ದೇಶದ ಪ್ರಗತಿಗಾಗಿ ಹಗಲಿರುಳು ದುಡಿದವರು. ಅವರ ನಿಸ್ವಾರ್ಥ ಸೇವೆ ಮತ್ತು ಅವರ ಆದರ್ಶಗಳು ಇಂದಿಗೂ ಜನಮಾನಸದಲ್ಲಿ ಹಸಿರಾಗಿವೆ. ಶಿಕ್ಷಣ ಕ್ಷೇತ್ರಕ್ಕಂತೂ ಇವರ ತತ್ವ ಸಂದೇಶಗಳು ಅತ್ಯಂತ ಅನಿವಾರ್ಯವಾಗಿದ್ದು, ದೇಶದಲ್ಲಿ ವಿದ್ಯಾಭ್ಯಾಸಗೈಯುತ್ತಿರುವ ವಿದ್ಯಾರ್ಥಿ ಸಮೂಹಕ್ಕೆ ಗಾಂಧಿ ತತ್ವಗಳನ್ನು ತಿಳಿಸಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅಹಿಂಸೆಯ ಮಂತ್ರದೊಂದಿಗೆ ಗಾಂಧಿ ಇಡೀ ದೇಶವನ್ನೇ ಬದಲಿಸಿದಂತೆ, ಸತ್ಯ, ಅಹಿಂಸೆ, ತ್ಯಾಗ ಭಾವನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟು, ತನ್ಮೂಲಕ ಅವರ ವ್ಯಕ್ತಿತ್ವ ವಿಕಸನಕ್ಕೆ ಅನುವು ಮಾಡಿಕೊಡಬೇಕು ಎಂದರು.

ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಮಾತನಾಡಿ ಗಾಂಧಿ ಕೇವಲ ಒಬ್ಬ ವ್ಯಕ್ತಿ ಮಾತ್ರವಲ್ಲ, ಅವರು ಭಾರತದ ಬೃಹತ್ ಶಕ್ತಿ. ಇವರ ತೇಜಸ್ಸು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರದೆ, ಇಡೀ ವಿಶ್ವಕ್ಕೆ ಇವರೊಬ್ಬ ಅನುಕರಣೀಯ ವ್ಯಕ್ತಿಯಾಗಿದ್ದರು. ಮುಖವಾಡದ ಬದುಕಿಗೆ ಮಾರುಹೋಗದೆ ಬದುಕಿದ್ದಷ್ಟು ದಿನವೂ ಸತ್ಯ ಶುದ್ಧರಾಗಿ ಬಾಳಿ ಬದುಕಿ, ಇತರರಿಗೆ ಮಾದರಿಯಾದವರು. ಸರಳತೆ, ಶುದ್ಧತೆಯ ಸಾಕಾರ ಮೂರ್ತಿಯಾಗಿ ನಮ್ಮೆಲ್ಲರಿಗೂ ಆದರ್ಶಪ್ರಾಯರಾದವರು. ಈ ದಿವ್ಯ ಚೇತನಗಳ ಜನ್ಮ ಜಯಂತಿ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ, ಅವರ ತತ್ವ ಆದರ್ಶಗಳ ಅನುಷ್ಠಾನಕ್ಕೆ ಮುನ್ನುಡಿಯಾಗಬೇಕು ಎಂದು ಕರೆಕೊಟ್ಟರು.

ಶಿಕ್ಷಕರಾದ ಶ್ರೀಮಧು ಮತ್ತು ತಂಡದವರು ಗಾಂಧೀಜಿಯವರಿಗೆ ಪ್ರಿಯವಾಗಿದ್ದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಶಾಲಾ ಆಡಳಿತಾಧಿಕಾರಿಗಳಾದ ವೀಣಾರಶ್ಮಿ ಎಂ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಜಾತ ಸದಾರಾಮ್, ಆಪ್ತಸಮಾಲೋಚಕಿ ಹೇಮಾಮಾಲಿನಿ ಮತ್ತು ಶಿಕ್ಷಕ ವೃಂದದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಹಶಿಕ್ಷಕ ಮಹಾದೇವ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!