spot_img
Monday, March 23, 2026
spot_img

ಶಿರೂರು: ಭೀಕರ ಅಪಘಾತ, ನಾಲ್ವರ ದುರ್ಮರಣ-ದನ ಅಡ್ಡ ಬಂದಿರುವುದರಿಂದ ಚಾಲಕನ ನಿಯಂತ್ರಣ ತಪ್ಪಿತೇ?

ಬೈಂದೂರು: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹಡಿನಬಾಳದ ರೋಗಿಯನ್ನು ಉಡುಪಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬರುತ್ತಿದ್ದ ಅಂಬುಲೆನ್ಸ್ ಶಿರೂರು ಟೋಲ್ ಪ್ಲಾಜಾದ ಬಳಿ ನಿಯಂತ್ರಣ ಕಳೆದುಕೊಂಡು ಟೋಲ್ ಪ್ಲಾಝಾದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಂಬುಲೆನ್ಸ್ ಒಳಗಿದ್ದ ರೋಗಿ ಸೇರಿ ನಾಲ್ವರು ಸಾವನ್ನಪ್ಪಿ, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ನಡೆದಿದೆ.

ಹೊನ್ನಾವರ ಪರಿಸರದ ಗಜಾನನ ನಾಯ್ಕ್ ಎನ್ನುವ ರೋಗಿಯನ್ನು ಅಂಬುಲೆನ್ಸ್‌ನಲ್ಲಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಅಂಬುಲೆನ್ಸ್ ನಲ್ಲಿ ರೋಗಿಯ ಸಂಬಂಧಿಕರು ಇದ್ದರು. ಅಂಬುಲೆನ್ಸ್ ಅತೀ ವೇಗವಾಗಿ ಬರುತ್ತಿದ್ದು ಶಿರೂರು ಟೋಲ್‌ಗೇಟ್ ಬಳಿ ಬರುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡಿದೆ. ಅಂಬುಲೆನ್ಸ್ ದೂರದಲ್ಲಿ ಬರುತ್ತಿರುವುದನ್ನು ಗಮನಿಸಿದ ಟೋಲ್ ಸಿಬ್ಬಂದಿ ಬ್ಯಾರಿಕೇಡ್‌ನ್ನು ಬದಿಗೆ ಸರಿಸಿ ಅಂಬ್ಯುಲೆನ್ಸ್ ಸಂಚಾರಕ್ಕೆ ಸುಗಮ ಮಾಡಿಕೊಡುವುದರೊಳಗೆ ವೇಗವಾಗಿ ಬಂದ ಅಂಬುಲೆನ್ಸ್ ಕಂಬಕ್ಕೆ ಢಿಕ್ಕಿ ಹೊಡೆದ ರಭಸಕ್ಕೆ ಅಂಬುಲೆನ್ಸ್ ಪಲ್ಟಿಯಾಗಿದೆ. ಅಂಬ್ಯುಲೆನ್ಸ್‌ನ ಹಿಂಭಾಗದ ಬಾಗಿಲು ತೆರೆದುಕೊಂಡಿದೆ.

ಅಂಬುಲೆನ್ಸ್‌ನಲ್ಲಿ ರೋಗಿ ಗಜಾನನ ಲಕ್ಷ್ಮಣ ನಾಯ್ಕ (36ವ), ಲೋಕೇಶ ಮಾಧವ ನಾಯ್ಕ್, (38ವ) ಅವರ ಪತ್ನಿ ಜ್ಯೋತಿ ನಾಯ್ಕ (32ವ) ಮಂಜುನಾಥ ನಾಯ್ಕ್ (42ವ) ಮೃತ ಪಟ್ಟಿದ್ದಾರೆ. ಅಂಬುಲೆನ್ಸ್ ಚಾಲಕ ರೋಶನ್ ರೊಡ್ರಿಗಸ್, ಬ್ಯಾರಿಕೇಡ್ ಸರಿಸಲು ಹೋಗಿದ್ದ ಟೋಲ್ ಸಿಬ್ಬಂದಿ ಸಂಬಾಜೆ, ಶಶಾಂತ ನಾಯ್ಕ್, ಗೀತಾ, ಗಣೇಶ ಗಾಯಗೊಂಡಿದ್ದಾರೆ. ಗಾಯಗೊಂಡಿದ್ದಾರೆ.
ಅಂಬುಲೆನ್ಸ್ ಅತಿ ವೇಗವಾಗಿ ಹೋಗುತ್ತಿದ್ದು ಟೋಲ್ ಬಳಿ ದನವನ್ನು ತಪ್ಪಿಸುವ ತಪ್ಪಿಸುವ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡು ಟೋಲ್ ಸಂಗ್ರಹಣ ಕೇಂದ್ರದ ಕಂಬಕ್ಕೆ ಅಪ್ಪಳಿಸಿತ್ತು. ಮಳೆಯಿಂದ ಕಾಂಕ್ರೇಟ್ ರಸ್ತೆ ಜಾರುತ್ತಿದ್ದುದು, ರಸ್ತೆಯಲ್ಲಿ ಮಲಗಿದ ದನವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ಈ ಅಪಘಾತ ಮತ್ತು ಟೋಲ್ ದಾರಿಯ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!