Saturday, July 27, 2024

ಅಪ್ರಾಪ್ತರಿಗೆ ವಸತಿಗೃಹದ ಕೊಠಡಿ ನೀಡಿದಲ್ಲಿ ಪರವಾನಗಿ ರದ್ದು

ಉಡುಪಿ:ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಬಾಲನ್ಯಾಯ ಕಾಯ್ದೆ ಹಾಗೂ ಫೋಕ್ಸೋ ಕಾಯ್ದೆಯನ್ವಯ ಸೂಕ್ತ ಕಾನೂನು ಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ‌ ಅಪ್ರಾಪ್ತ ಮಕ್ಕಳಿಗೆ ಕೊಠಡಿ ನೀಡಬಾರದು. ಜಿಲ್ಲೆಯ ನೋಂದಾಯಿತ‌ ಎಲ್ಲಾ ವಸತಿಗೃಹಗಳಲ್ಲಿ ಕೊಠಡಿಗಳನ್ನು ಒದಗಿಸುವ ಸಂದರ್ಭದಲ್ಲಿ‌ ಅಪ್ರಾಪ್ತ ಮಕ್ಕಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿಯೇ ಕೊಠಡಿಗಳನ್ನು ಒದಗಿಸಬೇಕು.
ಒಂದು ವೇಳೆ ದಾಖಲೆಗಳನ್ನು ಪಡೆಯದೇ, ಪರಿಶೀಲಿಸದೇ ವಸತಿಗೃಹಗಳ ಕೊಠಡಿಗಳನ್ನು ಒದಗಿಸಿದ್ದಲ್ಲಿ ಅಂತಹ ವಸತಿಗೃಹಗಳ ಪರವಾನಗಿಯನ್ನು ರದ್ದು ಪಡಿಸಲಾಗುವುದು‌ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ‌ ಅಧ್ಯಕ್ಷರಾದ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
21,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!