spot_img
Monday, April 6, 2026
spot_img

ಮರವಂತೆ: ಸಮುದ್ರಕ್ಕೆ ಬಿದ್ದ ಕಾರು: ನಾಪತ್ತೆಯಾಗಿದ್ದ ರೋಷನ್ ಮೃತದೇಹ ಪತ್ತೆ

ಕುಂದಾಪುರ: ಜು. 3ರ ಬೆಳಿಗ್ಗಿನ ಜಾವ 2 ಗಂಟೆ ಸುಮಾರಿಗೆ ಕುಂದಾಪುರದಿಂದ ಕುಮಟಾ ಕಡೆ ಸಾಗುತ್ತಿದ್ದ ಕಾರು ಮರವಂತೆಯಲ್ಲಿ ಸಮುದ್ರಕ್ಕೆ ಬಿದ್ದ ಪರಿಣಾಮ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ರೋಷನ್ ಆಚಾರ್ ಅವರ ಮೃತದೇಹ ಸೋಮವಾರ ತ್ರಾಸಿ ಹೊಸಪೇಟೆ ಬಳಿ ಪತ್ತೆಯಾಗಿದೆ.

ಅಪಘಾತ ಸಂದರ್ಭ ನೀರಿನಲ್ಲಿ ಕೊಚ್ಚಿ ಹೋಗಿದ್ದ ರೋಷನ್‌ಗಾಗಿ ವ್ಯಾಪಕ ಶೋಧ ಆದಿತ್ಯವಾರದಿಂದಲೇ ಆರಂಭಗೊಂಡಿತ್ತು. ಸೋಮವಾರವೂ ಕಾರ್ಯಾಚರಣೆ ಮುಂದುವರಿದಿದ್ದು ಶವ ಪತ್ತೆಯಾಗಿದೆ.

ಶನಿವಾರ ತಡರಾತ್ರಿ ಕೆಂಪು ಬಣ್ಣದ ಸ್ವಿಪ್ಟ್ ಕಾರಿನಲ್ಲಿ ಬೀಜಾಡಿಯ ವಿರಾಜ್ ಆಚಾರ್ ಹಾಗೂ ಅವರ ಸಂಬಂಧಿಕರಾದ ಕಾರ್ತಿಕ, ರೋಷನ್, ಹಾಗೂ ಸಂದೇಶನೊಂದಿಗೆ ಕುಂದಾಪುರದಿಂದ ಕುಮಟಾ ಕಡೆಗೆ ಹೊರಟಿದ್ದರು, ಮರವಂತೆಯ ವರಹ ಮಹಾರಾಜಸ್ವಾಮಿ ದೇವಸ್ಥಾನದ ಬಳಿ ತಲುಪುವಾಗ ಕಾರನ್ನು ಚಲಾಯಿಸುತ್ತಿದ್ದ ವಿರಾಜ್‌ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಪಟ್ಟಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಅರಬ್ಬಿ ಸಮುದ್ರಕ್ಕೆ ಬಿದ್ದಿತು. ಪಲ್ಟಿಯಾದ ರಭಸಕ್ಕೆ ಕಾರಿನಲ್ಲಿದ್ದ ಕಾರ್ತಿಕ ಆಚಾರ್ ಹಾಗೂ ಸಂದೇಶ ರವರಿಗೆ ಪೆಟ್ಟಾಗಿದ್ದು, ಚಾಲಕ ವಿರಾಜ್ ಆಚಾರ್ ಕಾರಿನಲ್ಲಿಯೇ ಮೃತಪಟ್ಟಿದ್ದರು. ರೋಶನ್ ಆಚಾರ್‌ ಸಮುದ್ರದ ನೀರಿನಲ್ಲಿ ನಾಪತ್ತೆಯಾಗಿದ್ದರು.

ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!