Sunday, September 8, 2024

ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಪೂರಕ-ಡಾ. ರಮೇಶ್ ಶೆಟ್ಟಿ

ಕುಂದಾಪುರ: ಎಕ್ಸಲೆಂಟ್ ಪಿ.ಯು ಕಾಲೇಜು ಮತ್ತು ಶಾಲೆಯಲ್ಲಿ ಮಕ್ಕಳ ಸೃಜನಶೀಲ ಚಟುವಟಿಕೆಗೆ ವೇದಿಕೆ ಕಲ್ಪಿಸಲು ಶಾಲಾ ಭಿತ್ತಿಫಲಕವನ್ನು ವಿಶೇಷವಾಗಿ ಉದ್ಘಾಟಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿಯವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಕುವೆಂಪುರವರ ಕವಿವಾಣಿಯಂತೆ ಶಾಲಾ ಕಾಲೇಜಿನಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಠ್ಯೇತರ ಚಟುವಟಿಕೆ ಪೂರಕ ಎಂದು ಹೇಳಿದರು.

ಮುಖ್ಯಶಿಕ್ಷಕಿ ಸುರೇಖಾರವರು ಮಕ್ಕಳ ಮುದ್ದಾದ ಚಿತ್ರಕಲೆ, ಕವನ, ಲೇಖನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್‍ಯಕ್ರಮವನ್ನು ಕನ್ನಡ ಶಿಕ್ಷಕರಾದ ಶರತ್ ಕುಮಾರ್ ನಿರೂಪಿಸಿದರು. ಶಿಕ್ಷಕರಾದ ನಾಗರಾಜ ಶೆಟ್ಟಿ, ಗಿರೀಶ್, ಗುರುಪ್ರಸಾದ್, ವಿನುತಾ, ಪ್ರೇಮಾ, ಅನುಪಮಾ, ಸುದಕ್ಷಿಣಾ, ಪ್ರಕಾಶ್ ಪದ್ಮಿನಿ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!