Friday, April 19, 2024

ಸರಕಾರಿ ಪದವಿಪೂರ್ವ ಕಾಲೇಜು ಕುಂದಾಪುರ: ದ್ವಿತೀಯ ಪಿಯುಸಿಯಲ್ಲಿ 93 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್

ಕುಂದಾಪುರ: ಸರಕಾರಿ ಪದವಿಪೂರ್ವ ಕಾಲೇಜು ಕುಂದಾಪುರ, ಉಡುಪಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಸಂಸ್ಥೆಯಾಗಿದ್ದು ಗುಣಮಟ್ಟದ ಶಿಕ್ಷಣವನ್ನು ಈ ವಿದ್ಯಾಸಂಸ್ಥೆ ನೀಡುತ್ತಿದ್ದು ಹಿಂದುಳಿದ ಹಾಗೂ ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ವಿವಿಧ ಸಂಯೋಜನೆಗಳಿದ್ದು ಪ್ರತಿ ವರ್ಷವೂ ಉತ್ತಮ ಫಲಿತಾಂಶವನ್ನು ದಾಖಲಿಸುತ್ತಾ ಬಂದಿದೆ.

2021-22ರ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 78% ಫಲಿತಾಂಶ ಲಭಿಸಿದ್ದು, ಒಟ್ಟು ಪರೀಕ್ಷೆಗೆ 776 ವಿದ್ಯಾರ್ಥಿಗಳು ಹಾಜರಾಗಿದ್ದು, 93 ವಿದ್ಯಾರ್ಥಿಗಳು ವಿಶೇಷ ದರ್ಜೆಯಲ್ಲಿ (ಡಿಸ್ಟಿಂಕ್ಷನ್), ಪ್ರಥಮ ದರ್ಜೆಯಲ್ಲಿ 325 ವಿದ್ಯಾರ್ಥಿಗಳು, ದ್ವಿತೀಯ ದರ್ಜೆಯಲ್ಲಿ 104 ವಿದ್ಯಾರ್ಥಿಗಳು ಹಾಗು ಉಳಿದ ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ನಿಖಿತಾ, ವಿಜ್ಞಾನ ವಿಭಾಗದಲ್ಲಿ ಸೃಜನ್ ಎಸ್.ಪದ್ಮಶಾಲಿ, ಕಲಾ ವಿಭಾಗದಲ್ಲಿ ದಿವ್ಯ ಸೋಮ ಮರಾಠಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!