Sunday, September 8, 2024

ಮೂಡ್ಲಕಟ್ಟೆಯಲ್ಲಿ ಜೆಸಿಐ ಪಾರ್ಕ್ ಉದ್ಘಾಟನೆ

ಕುಂದಾಪುರ: ಜೇಸಿಐ ಕುಂದಾಪುರ ಸಿಟಿ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಎಮ್. ಐ. ಟಿ ಇಂಜಿನಿಯರಿಂಗ್ ಕಾಲೇಜು ಮೂಡ್ಲಕಟ್ಟೆಯಲ್ಲಿ ಉದ್ಯಾನವನ ಸೃಷ್ಟಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು 

    ಕಾಲೇಜಿನ ಪ್ರಾಂಗಣದ  ಸಾವಿರ ಚದರ ಅಡಿ ಖಾಲಿ ಜಾಗವನ್ನು ಶುದ್ಧಗೊಳಿಸಿ ನಲವತ್ತಕ್ಕೂ ಹೆಚ್ಚು ವಿವಿಧ ರೀತಿಯ ಹೂವಿನ,ಹಣ್ಣಿನ, ಹಾಗೂ ಅಲಂಕಾರಿಕ ಗಿಡಗಳನ್ನು ನೆಟ್ಟು ಸುಂದರವಾದ ಉದ್ಯಾನವನವನ್ನು ಸೃಷ್ಟಿಸಲಾಯಿತು.

    ಈ ಜೆಸಿಐ ಉದ್ಯಾನವನದ ಉದ್ಘಾಟನೆಯನ್ನು ಅರಣ್ಯ ಇಲಾಖೆಯ ವಲಯ ಅಧಿಕಾರಿಗಳಾದ ತುಳಸಿ ರವರು ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಕೇವಲ ಪರಿಸರ ದಿನದಂದು ಮಾತ್ರವಲ್ಲದೆ ಉಳಿದ ದಿನಗಳಲ್ಲಿಯೂ ಸಹ ಪರಿಸರದ ಬಗ್ಗೆ ಕಾಳಜಿ ಇಡುವ ಮೂಲಕ ಮುಂದಿನ ಪೀಳಿಗೆಗೆ ಶುಭ್ರವಾದ ಪರಿಸರವನ್ನು ನೀಡುವುದರ ಮೂಲಕ ನಮ್ಮೆಲ್ಲರ ಕರ್ತವ್ಯವನ್ನು ನಿರ್ವಹಿಸುವಂತೆ ಮನವಿ ಮಾಡಿದರು.ಜೆಸಿಐ ಸಂಸ್ಥೆಯ ಈ ಪರಿಸರ ಮುಖಿ ಕಾರ್ಯಕ್ರಮಕ್ಕೆ ಸಂಸ್ಥೆಯನ್ನು ಅಭಿನಂದಿಸಿದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ನರ್ಸಿಂಗ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಹಕಾರ ನೀಡಿದರು.

ಕಾರ್ಯಕ್ರಮದಲ್ಲಿ ಜೇಸಿಐ ಕುಂದಾಪುರ ಸಿಟಿ ಘಟಕದ ಅಧ್ಯಕ್ಷ  ಅಭಿಲಾಷ್ ಬಿಎ, ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ ಗೋ ಗ್ರೀನ್ ಸಂಯೋಜಕಿ  ಡಾ. ಸರೋಜಾ ಎಂ    ವಿಜಯ ಭಂಡಾರಿ  ಮಹಾರುದ್ರ  ನಾಗರಾಜ್ ಪಟವಾಲ್ ಮೂಡ್ಲಕಟ್ಟೆ  ಎಮ್. ಐ. ಟಿ ಕಾಲೇಜ್ ನ ವಿದ್ಯಾರ್ಥಿ ನಾಯಕಿ ರಂಜಿತಾ ಇನ್ನಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!