spot_img
Monday, March 30, 2026
spot_img

ಕೆಂಚನೂರು: ಶ್ರೀ ಬ್ರಹ್ಮ, ಯಕ್ಷೆ ಸಹಪರಿವಾರ ದೇವಸ್ಥಾನ ಅಷ್ಟಬಂಧ ಪುನಃಪ್ರತಿಷ್ಠೆ ಧಾರ್ಮಿಕ ಸಭಾ ಕಾರ್ಯಕ್ರಮ ಸಂಪನ್ನ

ಕುಂದಾಪುರ: ಕೆಂಚನೂರು ಗ್ರಾಮದ ಪಡೂರು, ಭಟ್ರಮಕ್ಕಿ ಶ್ರೀ ಬ್ರಹ್ಮ, ಯಕ್ಷೆ ಸಹಪರಿವಾರ ದೇವಸ್ಥಾನ ಅಷ್ಟಬಂಧ ಪುನಃಪ್ರತಿಷ್ಠೆ ಕಾರ್ಯಕ್ರಮ ಮೇ.8ರಂದು ನಡೆಯಿತು.

ಮಧ್ಯಾಹ್ನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ನೆಂಪು ಸೀತಾರಾಮ ಶೆಟ್ಟಿ ಉದ್ಘಾಟಿಸಿದರು.
ದೇವಳದ ಅಧ್ಯಕ್ಷರಾದ ರವಿ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಗೋವಿಂದ ಬಾಬು ಪೂಜಾರಿ, ಸುಖಾನಂದ ಶೆಟ್ಟಿ ಬೈಂದೂರು, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಇದರ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ, ನೆಂಪು ಸಂತೋಷ ಶೆಟ್ಟಿ, ಹಟ್ಟಿಯಂಗಡಿ ಗ್ರಾ.ಪಂ. ಸದಸ್ಯ ರಾಜೀವ ಶೆಟ್ಟಿ, ಗಣೇಶ ಪೂಜಾರಿ, ಉದ್ಯಮಿ ಆನಂದ ಮೊಗವೀರ ನೆಂಪು, ಚಿತ್ತರಂಜನ್ ಹೆಗ್ಡೆ, ರಾಜೇಶ್ ಸಿ.ಎ., ಗೋವರ್ದನ್ ಜೋಗಿ, ವಿನಾಯಕ ಯುವಕ ಮಂಡಲದ ಅಧ್ಯಕ್ಷ ಜಗದೀಶ ನೆಂಪು ಉಪಸ್ಥಿತರಿದ್ದರು.

ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಂಸದ, ಮಾಜಿ ಸಚಿವರಾದ ಜಯಪ್ರಕಾಶ ಹೆಗ್ಡೆ ವಹಿಸಿದ್ದರು. ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಕೆರಾಡಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ, ಮರವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಎಂ.ನಾಯಕ್, ಗೋಪಾಲ ನಾಯ್ಕ್ ಶ್ಯಾರಾಳ, ಭಾಸ್ಕರ ಮೆಂಡನ್ ಬಳ್ಳಿಹಿತ್ಲು, ಸೀತಾರಾಮ ಶೆಟ್ಟಿ ನೆಂಪು, ಸುಬ್ಬಣ್ಣ ಶೆಟ್ಟಿ ಕೆಂಚನೂರು, ಸುದೇಶ ಶೆಟ್ಟಿ ಗುಲ್ವಾಡಿ, ದೇವಳದ ಅಧ್ಯಕ್ಷರಾದ ರವಿ ಗಾಣಿಗ ಕೆಂಚನೂರು, ಗೌರವಾಧ್ಯಕ್ಷರಾದ ಶೀನ ಗಾಣಿಗ ಚೂಡಿಕಟ್ಟೆ, ನರಸಿಂಹ ನಾಯ್ಕ್ ಹೊಸಟ್ಟಿ, ಕೋಶಾಧಿಕಾರಿ ರಾಘವೇಂದ್ರ ಭಟ್ರಮಕ್ಕಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನೆಂಪು ವಂದಿಸಿದರು. ಪ್ರವೀಣ್ ಗಂಗೊಳ್ಳಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ, ಭಜನಾ ಕಾರ್ಯಕ್ರಮ, ಭಕ್ತಿ ರಸಮಂಜರಿ, ರಾತ್ರಿ ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!