Sunday, September 8, 2024

ಮೇಕೋಡು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ‘ಚಂದ್ರಶ್ರೀ’ ಹಾಗೂ ಸಾಂದ್ರಶೀತಲೀಕರಣ ಘಟಕ ಉದ್ಘಾಟನೆ

ಬೈಂದೂರು, ಎ.28: ಹೈನುಗಾರಿಕೆ ಇವತ್ತು ಭರವಸೆಯಾಗಿ ಬೆಳೆಯುತ್ತಿದೆ. ದ.ಕ ಹಾಲು ಒಕ್ಕೂಟ ಇವತ್ತು 5.20 ಲಕ್ಷ ಲೀಟರ್ ಹಾಲು ಶೇಖರಿಸುತ್ತಿದೆ. ಅದನ್ನು 6 ಲಕ್ಷಕ್ಕೆ ಮುಟ್ಟಿಸುವ ಗುರಿ ಇದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಹಾಲು ಶೇಖರಿಸುವ ಒಕ್ಕೂಟವಾಗಿ, ಗುಣಮಟ್ಟದ ಹಾಲು ಸಂಗ್ರಹಣೆ, ಹೈನುಗಾರರಿಗೆ ಶೇ.100ರಷ್ಟು ಬ್ಯಾಂಕ್ ಮೂಲಕವೇ ಬಟವಾಡೆ ಹೀಗೆ ದ.ಕ ಹಾಲು ಒಕ್ಕೂಟದ ಸಾಧನೆಯ ಹಿನ್ನೆಲೆ ಪ್ರತಿಯೊಂದು ಹಾಲು ಉತ್ಪಾದಕರ ಸಂಘಗಳು. ಇನ್ನೂ ಹೆಚ್ಚು ಹಾಲು ಉತ್ಪಾದನೆಗೆ ಹೈನುಗಾರರು ಮನಸು ಮಾಡಬೇಕು ಎಂದು ದ.ಕ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಹೇಳಿದರು.

ಮೇಕೋಡು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಚಂದ್ರಶ್ರೀ ಹಾಗೂ 10 ಸಾವಿರ ಲೀಟರ್ ಸಾಮಾರ್ಥ್ಯದ ಸಾಂದ್ರಶೀತಲೀಕರಣ ಘಟಕ ಮತ್ತು ಹೈನುಗಾರರ ಸಮಾವೇಶ ಕಾರ್ಯಕ್ರಮದಲ್ಲಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಆರು ಗಂಟೆ ಜೀವಿತಾವಧಿಯ ಹಾಲನ್ನು ಸೂಕ್ತ ರೀತಿಯಲ್ಲಿ ವೈಜ್ಞಾನಿಕ ಕ್ರಮದಲ್ಲಿ ಸಂರಕ್ಷಿಸಬೇಕಾಗುತ್ತದೆ. ಹಾಗಾಗಿ ಸಾಂದ್ರಶೀತಲೀಕರಣ ಘಟಕದ ಅವಶ್ಯಕತೆ ಇರುತ್ತದೆ. ಮೇಕೋಡುವಿನಂತಹ ಗ್ರಾಮೀಣ ಪ್ರದೇಶದಲ್ಲಿ 10 ಸಾವಿರ ಲೀಟರ್ ಸಾಮರ್ಥ್ಯದ ಸಾಂದ್ರಶೀತಲೀಕರಣ ಘಟಕ ನಿರ್ಮಾಣ ಆಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಸಾಂದ್ರಶೀತಲೀಕರಣ ಘಟಕ ಉದ್ಘಾಟನೆ ಹಾಗೂ ಸ್ಥಳದಾನಿ ದಿ.ವೈ.ಚಂದ್ರಶೇಖರ ಶೆಟ್ಟಿ ಭಾವಚಿತ್ರ ಅನಾವರಣಗೊಳಿಸಿ ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಿ.ವೈ.ಚಂದ್ರಶೇಖರ ಶೆಟ್ಟಿಯವರ ಗ್ರಾಮೀಣಾಭಿವೃದ್ದಿ ಚಿಂತನೆಗಳು, ಅವರ ನೇರ ನಿಷ್ಠುರ ವ್ಯಕ್ತಿತ್ವ ಮಾದರಿಯಾದುದು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಪ್ರಕಾಶ್ಚಂದ್ರ ಶೆಟ್ಟಿಯವರು ಇವತ್ತು ರಾಜ್ಯದಲ್ಲಿಯೇ ೨ನೇಯ ೧೦ ಸಾವಿರ ಲೀಟರ್ ಸಾಮರ್ಥ್ಯದ ಸಾಂದ್ರಶೀತಲೀಕರಣ ಘಟಕವನ್ನು ಇಲ್ಲಿ ಆರಂಭಿಸುತ್ತಿರುವುದು ಸಂತಷದ ವಿಚಾರವಾಗಿದೆ ಎಂದರು.

ಶಾಶ್ವತ ಫಲಕವನ್ನು ದ.ಕ ಹಾಲು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಕೊಡವೂರು ರವಿರಾಜ್ ಹೆಗ್ಡೆ ಉದ್ಘಾಟಿಸಿದರು. ಗೋದಾಮನ್ನು ಕರ್ನಾಟಕ ಹಾಲು ಮಹಾಮಂಡಳ ನಿ, ಬೆಂಗಳೂರು ಇದರ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ ಉದ್ಘಾಟಿಸಿದರು.

ಮೇಕೋಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ., ಉಪ್ಪುಂದ ಇದರ ಅಧ್ಯಕ್ಷರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಾಧ್ಯಾಪಕ ವಿಶ್ವನಾಥ ಶೆಟ್ಟಿ ಅವರು ದಿ.ವೈ.ಚಂದ್ರಶೇಖರ ಶೆಟ್ಟರ ಸಂಸ್ಮರಣೆ ಮಾಡಿದರು. ದ.ಕ ಹಾಲು ಒಕ್ಕೂಟದ ನಿರ್ದೇಶಕರಾದ ನರಸಿಂಹ ಕಾಮತ್ ಸಾಣೂರು, ಸ್ಮಿತಾ ಆರ್.ಶೆಟ್ಟಿ, ಸುಚರಿತ ಶೆಟ್ಟಿ, ನಾರಾಯಣ ಪ್ರಕಾಶ, ವ್ಯವಸ್ಥಾಪಕ ನಿರ್ದೇಶಕರಾದ ಡಾ.ನಿತ್ಯಾನಂದ ಭಕ್ತ, ಹೇರೂರು ಗ್ರಾ.ಪಂ. ಅಧ್ಯಕ್ಷ ಸುರೇಶ್ ನಾಯ್ಕ, ದ.ಕ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ, ಮಾಜಿ ನಿರ್ದೇಶಕರಾದ ಸೋಮಶೇಖರ ಶೆಟ್ಟಿ ಕೆಂಚನೂರು, ಗೋಪಾಲಕೃಷ್ಣ ಕಾಮತ್ ಸಿದ್ಧಾಪುರ, ಟಿ.ಸೂರ್ಯ ಶೆಟ್ಟಿ, ಅಶೋಕ ಕುಮಾರ್ ಚೇರ್ಕಾಡಿ, ಉಡುಪಿ ಜಿ.ಪಂ.ಮಾಜಿ ಉಪಾಧ್ಯಕ್ಷೆ ಮಮತಾ ಆರ್.ಶೆಟ್ಟಿ, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಗುರುರಾಜ ಹೆಬ್ಬಾರ್, ಮೇಕೋಡು ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕುಶಲ್ ಕುಮಾರ್, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ದ.ಕ ಹಾಲು ಒಕ್ಕೂಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಎಸ್.ಪ್ರಕಾಶ್ಚಂದ್ರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ದ.ಕ ಹಾಲು ಒಕ್ಕೂಟ ಮಂಗಳೂರು ಇದರ ವಿಸ್ತರಣಾಧಿಕಾರಿ ರಾಜಾರಾಮ್ ಕಾರ್ಯಕ್ರಮ ನಿರ್ವಹಿಸಿ, ಮೇಕೋಡು ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕುಶಲ್ ಕುಮಾರ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ ಸಾರಥ್ಯದಲ್ಲಿ ಗಾನ ನಾಟ್ಯ ಹಾಸ್ಯ ವೈಭವ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!