spot_img
Monday, March 23, 2026
spot_img

ಕ್ರೀಡಾಕೂಟದ ಮೂಲಕ ಸಮಾಜ ಒಂದುಗೂಡಿಸುವುದು ಉತ್ತಮ ಸಂಸ್ಕೃತಿ-ಗೃಹ ಸಚಿವ ಅರಗ ಜ್ಞಾನೇಂದ್ರ

ಕುಂದಾಪುರ: ಕ್ರೀಡೆಯ ಮೂಲಕ ಸಮಾಜವನ್ನು ಒಂದುಗೂಡಿಸುವುದು ಅಪರೂಪ. ಅದು ಒಳ್ಳೆಯ ಸಂಸ್ಕೃತಿ. ಕ್ರೀಡಾಕೂಟದ ಮೂಲಕ ಸಮಾಜದ ಬಾಂಧವ್ಯ ಇನ್ನಷ್ಟು ಶಕ್ತಿಶಾಲಿಯಾಗಲಿ. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ದೇವಾಡಿಗ ಸಮಾಜ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಹೇಳಿದರು.

ಕುಂದಾಪುರ ಗಾಂಧಿ ಮೈದಾನದಲ್ಲಿ ಬೈಂದೂರು ವಲಯದ ದೇವಾಡಿಗ ಸಮಾಜ ಬಾಂಧವರಿಗಾಗಿ ಸುರೇಶ್ ಡಿ.ಪಡುಕೋಣೆ ಇವರ ಸವಿನೆನಪಿನಲ್ಲಿ ನಡೆಯುತ್ತಿರುವ ದೇವಾಡಿಗರ ಕ್ರೀಡಾಕೂಟ-2022 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇವಾಡಿಗ ಈ ಸಮಾಜದ ಅವಶ್ಯಕತೆಗಳಿಗೆ ಸ್ಪಂದನೆ ನೀಡುತ್ತೇನೆ. ಸುರೇಶ್ ಡಿ.ಪಡುಕೋಣೆ ಇವರ ಸವಿನೆನಪಿನಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದರು.

ಈ ಸಂದರ್ಭದಲ್ಲಿ ಸಚಿವರನ್ನು ಸನ್ಮಾನಿಸಲಾಯಿತು. ದೇವಾಡಿಗ ಕ್ರೀಡಾಕೂಟ ಸಮಿತಿ-2022ರ ಅಧ್ಯಕ್ಷರಾದ ಎನ್.ರಮೇಶ ದೇವಾಡಿಗ ವಂಡ್ಸೆ ಅಧ್ಯಕ್ಷತೆ ವಹಿಸಿದ್ದರು.

ಎಲ್.ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ನಾಗರಾಜ ಡಿ.ಪಡುಕೋಣೆ, ಏಕನಾಥೇಶ್ವರಿ ಟ್ರಸ್ಟ್‌ನ ವಿಶ್ವಸ್ಥರಾದ ರಘುರಾಮ ದೇವಾಡಿಗ, ಕ್ರೀಡಾಕೂಟ ಸಮಿತಿಯ ಕಾರ್ಯಾಧ್ಯಕ್ಷರಾದ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ, ಉದ್ಯಮಿಗಳಾದ ಚಂದ್ರಶೇಖರ ದೇವಾಡಿಗ, ಗಣೇಶ ದೇವಾಡಿಗ, ಶ್ರೀನಿವಾಸ ದೇವಾಡಿಗ, ತೀರ್ಥಳ್ಳಿ ದೇವಾಡಿಗ ಸಮಾಜದ ಪ್ರಮುಖರಾದ ಸಂತೋಷ್ ದೇವಾಡಿಗ, ಗಣೇಶ ದೇವಾಡಿಗ, ಸದಾನಂದ ಮೊದಲಾದವರು ಉಪಸ್ಥಿತರಿದ್ದರು.

ರವಿ ದೇವಾಡಿಗ ಉಪ್ಪಿನಕುದ್ರು ಸ್ವಾಗತಿಸಿ, ಎನ್.ರಮೇಶ ದೇವಾಡಿಗ ವಂದಿಸಿದರು. ಪತ್ರಕರ್ತ ಕೆ.ಸಿ ರಾಜೇಶ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!