spot_img
Sunday, March 29, 2026
spot_img

ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್‍ಸ್ ಕಾಲೇಜಿಗೆ ಮೂರು ರ್‍ಯಾಂಕ್

ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್/ ಅಕ್ಟೋಬರ್ 2021 ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್‍ಸ್ ಕಾಲೇಜಿಗೆ ಮೂರು ರ್‍ಯಾಂಕ್‌ಗಳು ದೊರಕಿವೆ.

ವಾಣಿಜ್ಯ ಪದವಿಯಲ್ಲಿ ಕುಂದಾಪುರದ ಪ್ರದೀಪ ಸಿ.ಶಾನುಭಾಗ್ ಮತ್ತು ರಾಜೇಶ್ವರಿ ಇವರ ಪುತ್ರಿ ವೈಷ್ಣವಿ ಪಿ.ಶಾನುಭಾಗ್ ಇವರಿಗೆ ಏಳನೇ ರ್‍ಯಾಂಕ್ ದೊರೆತಿದೆ.

ಕಂಪ್ಯೂಟರ್ ವಿಜ್ಞಾನ ಪದವಿಯಲ್ಲಿ ಬೈಂದೂರು ತಾಲೂಕಿನ ಯಡ್ತೆರೆ ಗ್ರಾಮದ ಹೆನ್ರಿ ರೊಡ್ರಿಗಸ್ ಮತ್ತು ಗ್ರೆಟಾ ರೊಡ್ರಿಗಸ್ ಅವರ ಪುತ್ರಿ ಸೊಲಿಟಾ ರೊಡ್ರಿಗಸ್ ಅವರಿಗೆ ಮೂರನೇ ರ್‍ಯಾಂಕ್ ಮತ್ತು ಕುಂದಾಪುರ ತಾಲೂಕಿನ ಹಾಲಾಡಿಯ ಸುಕುಮಾರ ಶೆಟ್ಟಿ ಮತ್ತು ಸುಜಾತ ಅವರ ಪುತ್ರಿ ಸೌಜನ್ಯ ಅವರಿಗೆ ಹತ್ತನೇ ರ್‍ಯಾಂಕ್ ದೊರೆತಿದೆ.

ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿಯವರು ಅಭಿನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!