spot_img
Sunday, March 29, 2026
spot_img

ಚಿಣ್ಣರ ಪ್ರತಿಭೆಗಳಿಗೆ ಪುಷ್ಠಿ ಕೊಡುವ ಶಿಬಿರ ರಜಾರಂಗು: ಉಪೇಂದ್ರ ಸೋಮಯಾಜಿ

ತೆಕ್ಕಟ್ಟೆ: ಚಿಣ್ಣರಲ್ಲಿ ಒಂದಷ್ಟು ಶಕ್ತಿ ಇದೆ, ಪ್ರತಿಭೆ ಇದೆ. ಆದರೆ ಇಂತಹ ಹಲವುಗಳು ಮಕ್ಕಳಲ್ಲಿ ಇದೆ ಎನ್ನುವುದು ಚಿಣ್ಣರಿಗೆ ಗೊತ್ತಾಗುವುದಿಲ್ಲ. ಇದನ್ನು ಪೋಷಕರು ಕಂಡು ಬೆಳೆಸಬೇಕು. ಅದನ್ನು ಸ್ವಚ್ಛಂದವಾಗಿ ಹಾರಾಡಲು ಬಿಡಬೇಕು. ಆಗಲೇ ಮಕ್ಕಳ ಬದುಕು ಉಜ್ವಲವಾಗುವುದಕ್ಕೆ ಸಾಧ್ಯ. ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಬಹಳ ಎತ್ತರಕ್ಕೆ ಏರಿದ್ದಾರೆ. ನಿಮ್ಮ ಪ್ರತಿಭೆಗಳು ಅನಾವರಣಗೊಳ್ಳಬೇಕು ಎಂದು ಹಿರಿಯ ಸಾಹಿತಿ ಉಪೇಂದ್ರ ಸೋಮಯಾಜಿ ನುಡಿದರು.

ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ನೇತೃತ್ವದಲ್ಲಿ ನಡೆಯುವ ತೆಕ್ಕಟ್ಟೆ ಹಯಗ್ರೀವದ ಸಮೀಪದಲ್ಲಿನ ರಜಾರಂಗು-೨೨ ಶಿಬಿರದ ಮೂರನೇ ದಿನದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ ಉಪೇಂದ್ರ ಸೋಮಯಾಜಿ ಮಾತನ್ನಾಡಿದರು.

ಪ್ರಸಿದ್ಧ ರಂಗ ಸಾಹಿತಿ ಶ್ರೀಪಾದ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ರಂಗ ಚಟುವಟಿಕೆಗಳ ತುಂಬಿದ ಅನುಭವವನ್ನು ಚಿಣ್ಣರೊಂದಿಗೆ ಚೆಲ್ಲಿದರು. ಬೇಳೂರು ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ, ಚಿಣ್ಣರು ಸ್ವಾಗತಿಸಿ, ವರದಿ ವಾಚನ ಮಾಡಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!