spot_img
Monday, March 23, 2026
spot_img

ದುರ್ಗಾ ವಾರಿಯರ್ಸ್ ಮಡಿಲಿಗೆ ಮಹಾವಿಷ್ಣು ಟ್ರೋಫಿ-2022

ಕುಂದಾಪುರ: ಜಾಡಿ ಮೈದಾನದಲ್ಲಿ ಭಾನುವಾರ ಜರುಗಿದ ದೇವಲ್ಕುಂದ ಪ್ರೀಮಿಯರ್ ಲೀಗ್-2022 ರ ಸೂಪರ್ ಸಿಕ್ಸ್ ಪಂದ್ಯಾಟದಲ್ಲಿ ದುರ್ಗಾ ವಾರಿಯರ್ಸ್ ಬಾಳಿಕೆರೆ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಎರಡು ದಿನಗಳ ಕಾಲ ಜಾಡಿಯ ಮೈದಾನದಲ್ಲಿ ಬಗ್ವಾಡಿ, ದೇವಲ್ಕುಂದ, ಬಾಳಿಕೆರೆ ಆಟಗಾರರಾಗಿ ನಡೆದ ಡಿಪಿ‌ಎಲ್ ಸೀಸನ್-2 ಕ್ರಿಕೆಟ್ ಪಂದ್ಯಾಟದಲ್ಲಿ ಜಯಂತ್ ಕುಂದರ್ ಹಾಗೂ ಪ್ರಥ್ವಿರಾಜ್ ಶೆಟ್ಟಿ ಮಾಲೀಕತ್ವದ ದುರ್ಗಾ ವಾರಿಯರ್ಸ್ ತಂಡವು ಸೋನು ಶೆಟ್ಟಿ ಮಾಲೀಕತ್ವದ ಎಮ್.ಸಿ.ಸಿ ತಂಡದ ವಿರುದ್ದ ಗೆಲುವು ಸಾಧಿಸಿ ಮಹಾವಿಷ್ಣು ಟ್ರೋಫಿ-2022 ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಚಾಂಪಿಯನ್ ಆಗಿ ಹೊರಹೊಮ್ಮಿದ ದುರ್ಗಾ ವಾರಿಯರ್ಸ್ ತಂಡಕ್ಕೆ ಒಂದು ಲಕ್ಷ ನಗದು ಹಾಗೂ ಶಾಶ್ವತ ಫಲಕ ಮತ್ತು ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡ ಎಮ್ ಸಿ ಸಿ ತಂಡಕ್ಕೆ ಅರವತ್ತು ಸಾವಿರ ನಗದು ಹಾಗೂ ಶಾಶ್ವತ ಫಲಕಗಳನ್ನು ನೀಡಿ ಗೌರವಿಸಲಾಯಿತು.

ಫೈನಲ್ ಪಂದ್ಯಾಟದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ದುರ್ಗಾ ವಾರಿಯರ್ಸ್ ನ ರೋಶನ್ ಪೂಜಾರಿ, ಉತ್ತಮ ದಾಂಡಿಗ ಬಗ್ವಾಡಿ ಸೂಪರ್‌ಕಿಂಗ್ಸ್ ನ ವಿಶ್ವಾಸ್ ಶೆಟ್ಟಿ, ಉತ್ತಮ ಎಸೆತಗಾರ ಎಮ್ ಸಿ ಸಿ ಯ ಸಚಿನ್, ಉತ್ತಮ ಕ್ಷೇತ್ರರಕ್ಷಕ ಎಮ್ ಸಿ ಸಿ ಯ ಸವಿನ್ ಶೆಟ್ಟಿ, ಉತ್ತಮ ಗೂಟರಕ್ಷಕ ದುರ್ಗಾ ವಾರಿಯರ್ಸ್ ನ ಪ್ರಥ್ವಿರಾಜ್ ಶೆಟ್ಟಿ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಎಮ್ ಸಿ ಸಿ ತಂಡದ ಸೋನು ಶೆಟ್ಟಿ ಪಡೆದುಕೊಂಡರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕಟ್ ಬೇಲ್ತೂರು ಪಂಚಾಯತ್ ಅಧ್ಯಕ್ಷ ನಾಗರಾಜ್ ಪುತ್ರನ್, ಉದ್ಯಮಿ ರಾಮಣ್ಣ ಶೆಟ್ಟಿ, ಪಂಚಾಯತ್ ಸದಸ್ಯ ರಾಮ ಶೆಟ್ಟಿ, ಡಿಪಿ‌ಎಲ್ ನ ರಕ್ಷಿತ್ ಶೆಟ್ಟಿ, ದೀಪಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!