spot_img
Monday, March 23, 2026
spot_img

ಮುಂಬಯಿ: ಎ.10ಕ್ಕೆ ಶ್ರೀ ಮಣಿಕಂಠ ಯಕ್ಷ ಕಲಾಕೇಂದ್ರ ದಶಮಾನೋತ್ಸವ

ಮುಂಬಯಿ : ಶ್ರೀ ಮಣಿಕಂಠ ಯಕ್ಷ ಕಲಾಕೇಂದ್ರ ಮುಂಬಯಿ ಇದರ ದಶಮಾನೋತ್ಸವ ಎಪ್ರಿಲ್ 10 ಮಧ್ಯಾಹ್ನ 2.30ಕ್ಕೆ ದಿ.ಮರಾಠಾ ಸುರೇಶ್ ಶೆಟ್ಟಿ ವೇದಿಕೆ, ಕಾಮ್‌ಗಾರ್ ಕಲ್ಯಾಣ ಭವನ, ಕನ್ನಯ್‌ವಾರ್ ನಗರ, ವಿಕ್ರೋಲಿ ಪೂರ್ವ ಮುಂಬಯಿ ಇಲ್ಲಿ ನಡೆಯಲಿದೆ.

ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಹೂವಿನಕೋಲು ಮತ್ತು ಯಕ್ಷಗಾನ ಪೂರ್ವರಂಗ ಹಾಗೂ ಶ್ರೀದೇವಿ ದರ್ಶನ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಟೆಲ್ ಉದ್ಯಮಿ, ವಿಶ್ವ ಹಿಂದೂ ಪರಿಷತ್ ಥಾಣೆ ಘಟಕ ಅಧ್ಯಕ್ಷರಾದ ಪೊಲ್ಯ ಉಮೇಶ್ ಶೆಟ್ಟಿ ವಹಿಸಲಿದ್ದಾರೆ. ಮೆನಿಪೋಲ್ಡ್ ಕೋ-ಆಫ್ ಕ್ರೆಡಿಟ್ ಸೊಸೈಟಿ ಎಂ.ಡಿ ಸುರೇಶ್ ಭಂಡಾರಿ ವೇದಿಕೆಯನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮವನ್ನು ಬಂಟರ ಸಂಘ ಮುಂಬಯಿ ಇದರ ವಿಶ್ವಸ್ಥರಾದ ಶಾಂತಾರಾಮ ಶೆಟ್ಟಿ ಉದ್ಘಾಟಿಸಲಿದ್ದಾರೆ.

ಈ ಸಂದರ್ಭದಲ್ಲಿ ಯಕ್ಷಗುರು ಬಾಲಕೃಷ್ಣ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ|ಸುನೀತಾ ಎಂ.ಶೆಟ್ಟಿ, ಕರ್ನಾಟಕ ಮಲ್ಲ ಪತ್ರಿಕೆ ಸಂಪಾದಕರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಪಾಲೆತ್ತಾಡಿ ಅವರನ್ನು ಸನ್ಮಾನಿಸಲಾಗುವುದು. ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ರೀ ಮಣಿಕಂಠ ಯಕ್ಷ ಕಲಾಕೇಂದ್ರ ಅಧ್ಯಕ್ಷರಾದ ದೇವಲ್ಕುಂದ ಭಾಸ್ಕರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!