spot_img
Thursday, March 26, 2026
spot_img

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ: ಮಹಿಳಾ ದಿನಾಚರಣೆ, ಅರಸಿನ ಕುಂಕುಮ, ಸಾಂಸ್ಕೃತಿಕ ವೈಭವ

ಮುಂಬಯಿ: ಮಹಿಳೆಯರು ಬಿಡುವು ಇಲ್ಲದ ತನ್ನ ಕಾರ್ಯ ಚಟುವಟಿಕೆಗಳ ನಡುವೆ ಬಿಡುವು ಮಾಡಿಕೊಂಡು ಸಂಘ ಸಂಸ್ಥೆಗಳಲ್ಲಿ ದುಡಿಯುತ್ತಿರುವುದು ಪ್ರಶಂಸನೀಯ. ನಮ್ಮ ಆಚರಣೆಗಳು ಕೇವಲ ಇಲ್ಲಿಗೆ ಸೀಮಿತವಾಗಿರದೆ ಮುಂದಿನ ಪೀಳಿಗೆಗೂ ತಿಳಿಯುವಂತಾಗಲಿ ಹಾಗೇಯೇ ನಮ್ಮ ಸಮುದಾಯದ ಯುವಜನರು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಅದಕ್ಕಾಗಿ ಪೋಷಕರು ವಿದ್ಯೆಗೆ ಹೆಚ್ಚಿನ ಮಹತ್ವ ನೀಡಿ ತಮ್ಮ ಮಕ್ಕಳಿಗೆ ಉನ್ನತ ವ್ಯಾಸಂಗ ಮಾಡಿಸುವುದರೊಂದಿಗೆ ಸಂಪ್ರದಾಯ, ಸಂಸ್ಕಾರ, ಆಚಾರ-ವಿಚಾರಗಳನ್ನು ತಿಳಿಸಿ ಹೇಳಬೇಕು ಒಟ್ಟಿನಲ್ಲಿ ಸಮುದಾಯ ಬಾಂಧವರು ಇನ್ನೂ ಹೆಚ್ಚಿನ ಉನ್ನತ ಸ್ಥಾನ ಮಾನ ಪಡೆಯುವಂತಾಗಬೇಕು ಎಂದು ಸಮಾಜಸೇವಕಿ ಯಶೋದಾ ಎನ್. ಪೂಜಾರಿ ನುಡಿದರು.

ಅವರು ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಮಹಿಳಾ ಸಮಿತಿಯ ಸಂಯೋಜನೆಯಲ್ಲಿ ಮಾರ್ಚ್ 13 ರಂದು ಥಾಣೆ ಪಶ್ಚಿಮದಲ್ಲಿರುವ ರೋಟರಿ ಕ್ಲಬ್ ಸಭಾಗೃಹದಲ್ಲಿ ಜರಗಿದ ಮಹಿಳಾ ದಿನಾಚರಣೆ, ಅರಸಿನ ಕುಂಕುಮ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ಮಾತನಾಡುತ್ತಾ ಇಂದು ಕಾರ್ಯಕ್ರಮಕ್ಕೆ ದೂರ ದೂರದ ಪ್ರದೇಶಗಳಿಂದ ತಾವೆಲ್ಲರೂ ಆಗಮಿಸಿದ್ದೀರಿ ನಿಮಗೆ ಈ ಸಂಘದ ಮೇಲೆ ಇರುವ ಅಭಿಮಾನ ನೋಡಿ ಸಂತೋಷವಾಯಿತು ಸದಸ್ಯರೆಲ್ಲರು ನಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡುವುದರೊಂದಿಗೆ ನಮ್ಮ ಹಲವಾರು ಯೋಜನೆ ಮತ್ತು ಯೋಚನೆಗಳ ಕನಸು ನನಸಾಗಲು ತಾವೆಲ್ಲರು ಸಹಕಾರ ನೀಡಬೇಕು ಇಂದಿನ ಆಧುನಿಕತೆಯ ಭರಾಟೆಯಲ್ಲಿ ಸಂಪ್ರದಾಯ ಸಂಸ್ಕಾರಗಳು ಕಣ್ಮರೆಯಾಗುತ್ತಿರುವ ಸಮಯದಲ್ಲಿ ಸಂಸ್ಕಾರ ಬಿಂಬಿಸುವ ಇಂತಹ ಕಾರ್ಯಕ್ರಮವನ್ನು ನಮ್ಮ ಸಂಘದ ಮಹಿಳಾ ಸಮಿತಿಯವರು ಆಯೋಜಿಸಿರುವುದು ಅಭಿನಂದನೀಯ. ಮಕ್ಕಳು ಸಂಸ್ಕಾರ ಸಂಸ್ಕೃತಿಗಳನ್ನು ಮೈ ಗೂಡಿಸಿಕೊಂಡು ಬೆಳೆದರೆ ಒಬ್ಬ ಉತ್ತಮ ನಾಗರಿಕರಾಗುತ್ತಾರೆ ಯುವ ಜನತೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಸಮುದಾಯ ಸಂಘಟನೆಗಳು ಸದೃಢವಾಗುತ್ತದೆ, ಸಂಘಟನೆ ಬಲಗೊಂಡರೆ ಸದಸ್ಯರಿಗೆ ಇನ್ನೂ ಹೆಚ್ಚಿನ ಸದುಪಯೋಗ ಆಗುತ್ತದೆ. ಮಾತೃ ಪ್ರಧಾನ ಕುಟುಂಬವಾದ ನಮ್ಮಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವಿದೆ ಮಹಿಳೆಯೆ ಕುಟುಂಬದ ಮೂಲಾಧಾರವಾಗಿದ್ದು ಎಲ್ಲವನ್ನು ಸಮತೋಲನದಲ್ಲಿ ನಿರ್ವಹಿಸುವ ನೈಪುಣ್ಯತೆ ಅವರಲ್ಲಿದೆ ಹೆಣ್ಣು ಸಂಸಾರದ ಕಣ್ಣು ಎಂಬಂತೆ ಒಂದು ಕುಟುಂಬದ ಶ್ರೇಯಸ್ಸಿಗೆ ಮಹಿಳೆಯರ ಕೊಡುಗೆ ಅಪಾರ ಇಂದು ಸಾಧನಶೀಲ ಮಹಿಳೆಯರ ಸಾಧನೆಗಳನ್ನು ಮೆಲಕು ಹಾಕಿ ಮಹಿಳಾ ದಿನಾಚರಣೆ ಆಚರಿಸುವುದರೊಂದಿಗೆ ಅವರ ಸಾಧನೆಗಳು ನಿಮಗೆಲ್ಲ ಸ್ಫೂರ್ತಿ ಆಗಲಿ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಗರಸೇವಕಿ ನ್ಯಾಯವಾದಿ ಅಪರ್ಣಾ ಎನ್. ಗೌತೆ ಮಾತನಡುತ್ತಾ ಸಮಾನತೆ ಎನ್ನುವುದು ಮನೆಯಿಂದಲೇ ಆರಂಭವಾಗಬೇಕು ಮಗ-ಮಗಳು ಅಥವಾ ಸೊಸೆ-ಮಗಳು ಎಂಬ ಯಾವ ಬೇಧ ಭಾವ ಇಲ್ಲದೆ ನಾವು ನೆಡೆದುಕೊಂಡರೆ ಇಂತಹ ಆಚರಣೆಗಳು ಸಾರ್ಥಕವಾಗುತ್ತದೆ ನಾನು ನ್ಯಾಯವಾದಿ ಮತ್ತು ನಗರಸೇವಕಿಯಾಗಲು ನನ್ನ ಕುಟುಂಬದ ಸಹಕಾರ ಮರೆಯುವಂತಿಲ್ಲ ತಂದೆ ತಾಯಿಗಳು ತಮ್ಮ ಮಕ್ಕಳಲ್ಲಿ ಯಾವುದೇ ತಾರತಮ್ಯ ಮಾಡದೆ ಅವರನ್ನು ಸರಿ ಸಮನಾಗಿ ನೋಡಿದರೆ ಮಕ್ಕಳಲ್ಲಿ ಕೂಡ ಅಂತಹ ಮನೋಭಾವ ವೃದ್ಧಿಯಾಗುತ್ತದೆ ಇದರಿಂದ ಸುಂದರವಾದ ಸಮಾಜ ನಿರ್ಮಾಣವಾಗುತ್ತದೆ ಅರಸಿನ ಕುಂಕುಮ ಎನ್ನುವುದು ಸ್ತ್ರೀಯರ ಸೌಭಾಗ್ಯದ ಸಂಕೇತ ಎಂದರು

ಗೌರವ ಅತಿಥಿ ಶುಭಾ ದಾಮೋದರ್ ಕೋಟ್ಯಾನ್ ಮತ್ತು ಜಲಜಾ ಎ. ಕೋಡಿ ಹಾಗೂ ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷೆ ದೀಪಾ ವೈ. ಪೂಜಾರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ, ಉದ್ಘಾಟಕರಾದ ಯಶೋದಾ ಎನ್. ಪೂಜಾರಿ, ಮುಖ್ಯ ಅತಿಥಿ ನಗರಸೇವಕಿ ಅಪರ್ಣಾ ಎನ್. ಗೌತೆ, ಶುಭಾ ಡಿ. ಕೋಟ್ಯಾನ್, ಜಲಜಾ ಎ. ಕೋಡಿ, ನ್ಯಾಯವಾದಿ ಶಕುಂತಲಾ ಎ. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಕೋಶಾಧಿಕಾರಿ ಶ್ರೀಧರ ವಿ. ಪೂಜಾರಿ, ಮಹಿಳಾ ಸಮಿತಿಯ ಕಾರ್ಯಾಧ್ಯೆಕ್ಷೆ ಮಲ್ಲಿಕಾ ಎಸ್. ಪೂಜಾರಿ, ಕಾರ್ಯದರ್ಶಿ ಗಿರಿಜಾ ಬಿ. ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷೆ ದೀಪಾ ವೈ. ಪೂಜಾರಿ, ಧಾರ್ಮಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ನಾಗರಾಜ್ ಎನ್. ಪೂಜಾರಿ ಉಪಸ್ಥಿತರಿದ್ದರು.

ಸಂಘದ ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ ಮಾಜಿ ಕಾರ್ಯಾಧ್ಯಕ್ಷೆ ಬೇಬಿ ಆರ್. ಪೂಜಾರಿ ಮತ್ತು ಮಾಜಿ ಉಪಕಾರ್ಯಾಧ್ಯಕ್ಷೆ ಸುಶೀಲ ಎಸ್. ಪೂಜಾರಿ ಮಹಿಳಾ ದಿನಾಚರಣೆ ಹಾಗೂ ಅರಸಿನ ಕುಂಕುಮದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು
ಉಪಕಾರ್ಯಾಧ್ಯಕ್ಷೆ ಯಶೋದಾ ಎಸ್. ಪೂಜಾರಿ, ಜೊತೆ ಕಾರ್ಯದರ್ಶಿ ಕುಸುಮ ಎ. ಪೂಜಾರಿ, ಸದಸ್ಯರಾದ ಸುಮತಿ ಎಸ್. ಪೂಜಾರಿ, ಸುಶೀಲ ಆರ್. ಪೂಜಾರಿ, ಗಿರಿಜಾ ಕೆ. ಹೊಕ್ಕೋಳಿ, ವಿಜಯಾ ಎಮ್. ಚಂದನ್, ಕಮಲ ಎಮ್. ಪೂಜಾರಿ ಮತ್ತು ಆಡಳಿತ ಮಂಡಳಿ, ಉಪಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು

ಮಹಿಳಾ ಸಮಿತಿಯ ಕಾರ್ಯದರ್ಶಿ ಗಿರಿಜಾ ಬಿ.. ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಶಾರದಾ ಬಿ. ಪೂಜಾರಿ ವಂದಿಸಿದರು.

ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಸದಸ್ಯರು ಮತು ಸದಸ್ಯರ ಮಕ್ಕಳು ಗಾನ-ನೃತ್ಯದ ಮೂಲಕ ನೆರೆದ ಸದಸ್ಯರ ಮನ ರಂಜಿಸಿದರೆ ಯುವ ಅಭ್ಯುದಯ ಸಮಿತಿಯ ಆಯೋಜನೆಯಲ್ಲಿ ಸೂಪರ್ ಮಿನಿಟ್ ಗೇಮ್ಸ್ ನೆರವೇರಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!