spot_img
Monday, March 23, 2026
spot_img

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಧರ್ಮ ರೂಢಿಸಿಕೊಳ್ಳಬೇಕು- ವಿಜಯಕುಮಾರ ಹೆಗ್ಡೆ

ಬೈಂದೂರು: ವಿದ್ಯಾರ್ಥಿಗಳು ಕಲಿಕೆಗೆ ಕೇವಲ ಓದು, ಬರೆಹವನ್ನು ಮಾತ್ರ ಅವಲಂಬಿಸಿದರೆ ಸಾಲದು. ಅದರ ಜತೆಗೆ ತಮ್ಮದೆ ನೆಲೆಯಲ್ಲಿ ಸಾಧ್ಯವಾಗುವ ವೈಜ್ಞಾನಿಕ ವಿಧಾನಗಳಾದ ಅವಲೋಕನ, ಪರಿಶೀಲನೆ, ವಿಶ್ಲೇಷಣೆ ಮತ್ತು ಪ್ರಯೋಗಗಳನ್ನೂ ಅನುಸರಿಸಬೇಕು ಎಂದು ಮರವಂತೆಯಲ್ಲಿ ಸಮುದ್ರದ ಅಲೆ ಬಳಸಿ ವಿದ್ಯುತ್ ಉತ್ಪಾದನೆ ಘಟಕ ಆರಂಭಿಸುತ್ತಿರುವ ಉಡುಪಿಯ ಸುಶಿ ಗ್ಲೋಬಲ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ವಿಜಯಕುಮಾರ ಹೆಗ್ಡೆ ಹೇಳಿದರು.

ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಅತಿಥಿಯಾಗಿದ್ದ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಮಾತನಾಡಿ, ಸಮುದಾಯದಲ್ಲಿ ಗಾಢವಾಗಿರುವ ನಂಬಿಕೆಗಳನ್ನು ಪ್ರಶ್ನಿಸಿ, ವಿವೇಕದ ಒರೆಗೆ ಹಚ್ಚಿ ಮೂಢನಂಬಿಕೆ ಎಂದು ಕಂಡು ಬಂದರೆ ಅನುಸರಿಸಬಾರದು. ವೈಜ್ಞಾನಿಕ ಮನೋಧರ್ಮವನ್ನು ರೂಢಿಸಿಕೊಳ್ಳವುದು ಸಂವಿಧಾನ ವಿಧಿಸಿರುವ ಮೂಲಭೂತ ಕರ್ತವ್ಯ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅನಿತಾ ಆರ್. ಕೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ಸ್ವಾಗತಿಸಿದರು. ಶಿಕ್ಷಕ ಸೀತಾರಾಮ ಬಿ. ನಿರೂಪಿಸಿ. ವಂದಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುನಾಥ ನಾಯಕ್, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಗಣೇಶ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ ಮಡಿವಾಳ ಇದ್ದರು. ವಿಜ್ಞಾನ ಪ್ರಕಲ್ಪದಲ್ಲಿ ರಾಷ್ಟ್ರ ಮಟ್ಟಕ್ಕೇರಿದ ವಿದ್ಯಾರ್ಥಿಗಳಾದ ಮಂಜುಶ್ರೀ, ಕೃತಿ, ಮಾರ್ಗದರ್ಶನ ಮಾಡಿದ ಶಿಕ್ಷಕಿಯರಾದ ಚೈತ್ರಾ ಶೆಟ್ಟಿ ಮತ್ತು ನಿರ್ಮಲಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಿಜ್ಞಾನ ಮಾದರಿಗಳ ಪ್ರದರ್ಶನ, ತಾರಾಲಯ ಗಮನ ಸೆಳೆದುವು. ೧೯೯೬-೯೭ರಲ್ಲಿ ೭ನೆ ತರಗತಿ ಮುಗಿಸಿದ ಕೆಲವು ವಿದ್ಯಾರ್ಥಿಗಳು ಶಾಲೆಗೆ ಲೆಕ್ಟನ್ ಕೊಡುಗೆಯಾಗಿತ್ತರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!