spot_img
Monday, March 23, 2026
spot_img

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ’ಭುಗಿಲು’

ಚಂದ್ರಕಾಂತ್ ಕೊಡಪಾಡಿ ನಿರ್ದೇಶನದ ಸಿನಿಮಾ

ಸ್ವಾತಂತ್ರ್ಯಪೂರ್ವದ ನೈಜ ಘಟನೆಯ ಸ್ಫೂರ್ತಿಯಿಂದ ಕುಂದಾಪ್ರ ಭಾಷೆಯಲ್ಲಿ ಚಿತ್ರಣಗೊಂಡ ’ಭುಗಿಲು’ ಚಲನಚಿತ್ರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಸ್ವಾತಂತ್ರ್ಯ ಹೋರಾಟದ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಒತ್ತು ನೀಡಿರುವ ಈ ಚಿತ್ರವನ್ನು ನಟ, ನಿರ್ದೇಶಕ, 2,700ಕ್ಕೂ ಹೆಚ್ಚು ಚಲನಚಿತ್ರಕ್ಕೆ ಧ್ವನಿ ನೀಡಿರುವ ನಿರ್ದೇಶಕ ಚಂದ್ರಕಾಂತ್ ಕೊಡ್ಪಾಡಿ ಅವರು ೧೯೩೫ರ ಅಂದಿನ ವಾತಾವರಣಕ್ಕೆ ಪೂರಕವಾಗಿ ಚಿತ್ರಣಕ್ಕೆ ಹೈ-ಟೆಕ್ ಸ್ಪರ್ಶ ನೀಡಿ, ಪತ್ರಕರ್ತ ಮಂಜುನಾಥ್ ಚಂದ್‌ನವರ ’ಕಾಡ ಸೆರಗಿನ ಸೂಡಿ’ ಎಂಬ ಕಾದಂಬರಿಯನ್ನು ತಮ್ಮ ಚಿತ್ರಕ್ಕೆ ಆರಿಸಿಕೊಂಡಿದ್ದಾರೆ. ಕುಂದಾಪುರ-ಬೈಂದೂರು ತಾಲೂಕಿನ ಸುತ್ತ-ಮುತ್ತ ನಡೆಯುವ ಈ ಕಥೆಯ ನಾಯಕ ’ತನಿಯ’ (ನಿರ್ದೇಶಕ ಚಂದ್ರಕಾಂತ್‌ನವರು ಪಾತ್ರವನ್ನು ನಿರ್ವಹಿಸಿದ್ದಾರೆ) ಚಿತ್ರದ ಮುಕ್ಕಾಲು ಭಾಗವನ್ನು ಆವರಿಸಿಕೊಂಡು ಚಿತ್ರದ ಉದ್ದಗಲಕ್ಕೂ ವಿಜೃಂಭಿಸುತ್ತಾನೆ.

ತನಿಯನ ಅಮಾಯಕತೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಬ್ರಿಟಿಷ್ ಎಸ್.ಐ. ಅಧಿಕಾರಿಯು ಆತನ ಮುಗ್ಧತೆಯನ್ನು ದುರುಪಯೋಗಿಸಿಕೊಳ್ಳುತ್ತಾನೆ. ನಂತರ ದಿನಗಳಲ್ಲಿ ಗಾಂಧೀಜಿಯವರು ದೇಣಿಗೆ ಸಂಗ್ರಹಿಸಲು ಕುಂದಾಪುರಕ್ಕೆ ಬರುತ್ತಾರೆ. ಅಂದಹಾಗೆ, ಕುಂದಾಪುಕ್ಕೆ ಭೇಟಿ ನೀಡುವ ಮುನ್ನ ನಡೆದ ಘಟನೆಯ ಸ್ಫೂರ್ತಿಯನ್ನು ಈ ಚಿತ್ರಕ್ಕೆ ಬಳಸಿಕೊಂಡಿರುವುದರಿಂದ ಚಿತ್ರದ ನಡುವೆ ಕೆಲವು ಕುತೂಹಲಕಾರಿ ತಿರುವು ಮೂಡಿಸುತ್ತವೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ತನಿಯಾ ಅಹಿಂಸೆಯ ಮಾರ್ಗದಲ್ಲಿ ನಡೆಯುವ ಈ ಚಿತ್ರದಲ್ಲಿ ತನಿಯಾ ಹತ್ಯೆಗಾಗಿ ಬಳಸುವ ಆಯುಧ ಯಾವುದು? ಆತ ಮುಂದೇನಾಗುತ್ತಾನೆ? ಅಂದಿನ ಕಾಲಕ್ಕೆ ಕಾಣಿಸಿಕೊಳ್ಳುವ ಕಾಯಿಲೆಗೆ ಔಷಧ ಪ್ರಯೋಗವೇನು? ಎಲ್ಲವನ್ನು ತೆರೆ ಮೇಲೆ ನೀವು ನೋಡಿ ಆನಂದಿಸಿ ಎನ್ನುವುದು ನಿರ್ದೇಶಕರ ಮಾತು. ಚಿತ್ರವನ್ನು ಸಂಪೂರ್ಣವಾಗಿ ಕರಾವಳಿಯಲ್ಲಿ ಚಿತ್ರೀಕರಿಸಿದ ಚಂದ್ರಕಾಂತ್‌ನವರಲ್ಲಿ ಆಯ್ಕೆಯ ಹಾಗು ಚಿತ್ರದ ಬಗ್ಗೆ ಚುಟುಕಾಗಿ ಹೇಳಿ ಅಂದೆ.

ಕಳೆದ ಸಲ ಆಯ್ಕೆಯಾಗಬೇಕಿದ್ದ ಈ ಚಿತ್ರ ಕೋವಿಡ್ ಕಾರಣದಿಂದ ಈ ಸಲ ಆಯ್ಕೆಯಾಗಿದೆ. ೩೫ ಲಕ್ಷ ರೂಪಾಯಿ ಬಜೆಟ್‌ನಲ್ಲಿ ರೆಡಿಯಾದ ಚಿತ್ರದ ಲೊಕೇಶನ್‌ಗಾಗಿ ತುಂಬಾ ಪರದಾಡಿದೆ. ದೊಡ್ಡ ದೊಡ್ಡ ಚಿತ್ರಗಳ ಪೈಪೋಟಿಗಳ ನಡುವೆ ನಮ್ಮ ಪ್ರಾಂತ್ಯದ ’ಭುಗಿಲು’ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗುವ ಕಾನ್ಫಿಡೆನ್ಸ್ಸ್ ನನಗಿಲ್ಲ. ದೇವರ ದಯಾದಿಂದ ಪ್ರಶಸ್ತಿಗೆ ಆಯ್ಕೆಯಾದರೆ ಚಿತ್ರಕ್ಕೆ ಸಬ್ಸಿಡಿ ಹಾಕು ಒಟಿಟಿಯಲ್ಲಿ ಪ್ರದರ್ಶನಕ್ಕೆ ಅವಕಾಶವಿದ್ದು ನನಗೆ ಹಾಕಿರುವ ಬಂಡವಾಳಕ್ಕೆ ಮೋಸವಿಲ್ಲ ಅನ್ನುತ್ತಾರೆ. ಕುಂದಾಪ್ರ ಭಾಷೆಯ ಸೊಗಡನ್ನು ರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವಂತೆ ಮಾಡಿರುವ ಶ್ರಮಕ್ಕೆ ಯಶಸ್ಸು ದೊರೆಯಬಹುದು ಅನ್ನುವ ನಿರೀಕ್ಷೆಯಲ್ಲಿರುವ ಚಂದ್ರಕಾಂತನವರು ’ಭುಗಿಲು ಎಂದರೆ ಕೆಂಡವನ್ನು ಪೂ…. ಅಂತ ಉರಿಸಿದರೆ ಆಗುವ ಬೆಂಕಿಯೇ ಭುಗಿಲು’ ಅನ್ನುವುದನ್ನು ಟ್ರೇಲರ್‌ನಲ್ಲಿ ಧ್ವನಿಗೂಡಿಸಿದ್ದಾರೆ. ಚಿತ್ರದಲ್ಲಿ ಕಲಾವಿದರ ಆಯ್ಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿರುವ ನಿರ್ದೇಶಕರು, ಹಿರಿಯ ನಟ ರಮೇಶ್ ಭಟ್, ಬ್ರಿಟೀಷ್ ಅಧಿಕಾರಿಯಾಗಿ ಪೋಲೆಂಡಿನ ಪೀಟರ್ ಗ್ರಾಬಿಕ್ಷಿ, ಮೂಡಲ ಮನೆ ಧಾರಾವಾಹಿ ಖ್ಯಾತಿಯ ನಮಿತಾ ದೇಸಾಯಿ, ಚಂದ್ರಕಲಾ ರಾವ್, ಲಾವಣ್ಯ ಬೈಂದೂರಿನ ಗಣೇಶ್ ಕಾರಂತ, ಶ್ರೀರಾಜ್ ಕೊಠಾರಿ, ಶ್ರೀನಿವಾಸ ಗಂಗೊಳ್ಳಿ, ಸತೀಶ್ ಕಂಚಗೋಡು, ನಾಯಕವಾಡಿ ಟಿಕ್-ಟಾಕ್ ಕಲಾವಿದ ನಾಗರಾಜ್ ಗಾಣಿಗ, ಗಿರೀಶ್ ಬೈಂದೂರು, ಲಕ್ಷ್ಮಣ ಕೊರ್ಗಿ, ಶ್ರೀಪಾದ ಹೆಗಡೆ, ಪ್ರದೀಪ್‌ಚಂದ್ರ ಕುತ್ವಾಡಿ, ನಾಗರಾಜ್ ಬೈಂದೂರು ಮುಂತಾದ ಕಲಾವಿದರು ಅಭಿನಯಿಸಿರುವ ಈ ಚಿತ್ರಕ್ಕೆ ರವಿ ಬಸ್ರೂರುನವರ ಸಹೋದರ ರಾಧಾಕೃಷ್ಣ ಬಸ್ರೂರು ಸಂಗೀತ ನೀಡಿದರೆ, ಸತ್ಯನಾ ಕೊಡೇರಿ ಕಲಾ ನಿರ್ದೇಶಕರಾಗಿದ್ದಾರೆ. ಸಾಹಿತ್ಯದಲ್ಲಿ ಡಾ. ನಾಗೇಂದ್ರ ಪ್ರಸಾದ್ ಹಾಗೂ ಕೋ. ಶಿವರಾಮ ಕಾರಂತರು ಸಹನಿರ್ಮಾಪಕರಾಗಿ, ಸುಶೀಲಚಂದ್ರ, ಪ್ರಸನ್ನ ಕೊಡ್ಪಾಡಿಯವರು ಕೈ ಜೋಡಿಸಿದರೆ. ಸಂಕಲನದಲ್ಲಿ ಗುರುದತ್ತ ಸವಕೂರ್ ಕತ್ತರಿ ಪ್ರಯೋಗ ಮಾಡಿದ್ದಾರೆ. ಆದರೆ ಏನೇ ಹೇಳಿ ಕುಂದಾಪ್ರ ಕನ್ನಡವನ್ನು ಮತ್ತೆ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿದ ಚಂದ್ರಕಾಂತ್ ಕೊಡ್ಪಾಡಿಯವರು ಇಲ್ಲಿ ಗೌರವಯುತ ಉನ್ನತ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಹಾಗಾಗಿ ಆರ್ಟ್ ಮತ್ತು ಕಮರ್ಶಿಯಲ್ ಹೊರ ಬಂದಿರುವ ಈ ’ಭುಗಿಲು’ ಚಲನಚಿತ್ರವು ಪ್ರಶಸ್ತಿಗೆ ಆಯ್ಕೆಯಾಗಿಯೂ ಚಿತ್ರಮಂದಿರದಲ್ಲೂ ಕೂಡಾ ಯಶಸ್ವಿಯಾಗಿ ಮುನ್ನಡೆಯಲಿ ಅನ್ನುವ ಶುಭ ಹಾರೈಕೆ ನಮ್ಮ ಪತ್ರಿಕೆಯದು.

-ವಿಜಯ ಪಿ ಗಂಗೊಳ್ಳಿ

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!