spot_img
Saturday, March 28, 2026
spot_img

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಹೊರೆಕಾಣಿಕೆ ಸಮರ್ಪಣೆ ಶುಭಾರಂಭ

ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಿಯ ದೇವಸ್ಥಾನ ಲೋಕಾರ್ಪಣೆಯ ಅಂಗವಾಗಿ ಹಸಿರು ಹೊರೆಕಾಣಿಕೆ ಇಂದಿನಿಂದ ಶುಭಾರಂಭ ಕಂಡಿದೆ. ಇಂದಿನ ಶುಭ ಮಹೂರ್ತದಿಂದ ಮೊದಲ ಬಾರಿಗೆ 520 ಚೀಲ (13 ಟನ್) ಅಕ್ಕಿಯನ್ನು ಹೈದ್ರಾಬಾದ್-ಕರ್ನಾಟಕ ಭಾಗದಿಂದ ಕರ್ನಾಟಕ ರಾಜ್ಯ ಗಂಗಾಮತ ಸಂಘದ ರಾಜ್ಯಾಧ್ಯಕ್ಷರಾದ ಬಿ. ಮೌಲಾಲಿ ಮತ್ತು ಅವರ ಪುತ್ರರಾದ ಬಿ. ರಾಘವೇಂದ್ರರವರು ನಾಡೋಜ ಜಿ. ಶಂಕರ್‌ರವರ ಸಮ್ಮುಖದಲ್ಲಿ ಸಮರ್ಪಿಸಿದರು.

ವಿಶೇಷವಾಗಿ ಹೈದ್ರಾಬಾದ್ ಕರ್ನಾಟಕದಿಂದ 63 ಲಕ್ಷ ರೂ. ಮೌಲ್ಯದ ಅಕ್ಕಿ, ಸಕ್ಕರೆ, ಬೆಲ್ಲ, ಬೇಳೆ ಮತ್ತಿತರೆ ಸಾಮಾಗ್ರಿಗಳನ್ನು ಹೊರಕಾಣಿಕೆಯಾಗಿ ಸಲ್ಲಿಸಲಾಯಿತು. ಅದೇ ರೀತಿ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಮಲೆನಾಡಿನ ಗಂಗಾಮತಸ್ಥರೂ ಅತೀ ಉತ್ಸಾಹದಿಂದ ಹೊರೆಕಾಣಿಕೆ ಅರ್ಪಿಸಲು ಮುಂದಾಗಿರುವುದು ಮೊಗವೀರ-ಗಂಗಾಮತ ಸುಮುದಾಯದ ಇತಿಹಾಸದಲ್ಲಿಯೇ ಒಂದು ಹೊಸ ಮನ್ವಂತರಕ್ಕೆ ಕಾರಣವಾಗುವಂತಿದೆ.

ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಸುಭಾಶ್‌ಚಂದ್ರ ಕಾಂಚನ್. ಗೌ.ಪ್ರ ಕಾರ್ಯದರ್ಶಿ ಸುಧಾಕರ್ ಕುಂದರ್, ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಅಪ್ಪಿ ಸಾಲ್ಯಾನ್, ಭರತ್ ಕುಮಾರ್ ಎರ್ಮಾಳ್, ಗಂಗಾಧರ ಸುವರ್ಣ, ಮನೋಜ್ ಕಾಂಚನ್, ಸಂಜೀವ ಮೆಂಡನ್, ಅರ್ಚಕರಾದ ರಾಘವೇಂದ್ರ ಉಪಾಧ್ಯಾಯರು ಹಾಗೂ ಮತ್ತಿತರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!