spot_img
Saturday, March 28, 2026
spot_img

ಬೈಂದೂರು ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರಾಗಿ ಎಂ. ಗೋವಿಂದ ಪುನರಾಯ್ಕೆ

ಬೈಂದೂರು :ಹಿರಿಯ ನಾಗರಿಕ ವೇದಿಕೆಯ ಮಾಸಿಕ ಸಭೆ ಬೈಂದೂರಿನ ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನಿವೃತ್ತ ಕನ್ನಡ ಪ್ರೌಢಶಾಲಾ ಭಾಷಾ ಶಿಕ್ಷಕ ಗೋವಿಂದ ಬಿಲ್ಲವ ಅವರು ಕನ್ನಡ ಭಾಷೆಯ  ಸೊಬಗು, ಸೊಗಡು , ಪ್ರಾದೇಶಿಕವಾಗಿ ಭಾಷಾವೈವಿಧ್ಯತೆಗಳು,  ಕವಿಗಳು  ಸಾಹಿತ್ಯ ವೈಚಾರಿಕತೆಯೊಂದಿಗೆ ವೈನೋದಿಕವನ್ನೂ ಬಳಸಿ ಕೊಂಡು ಭಾಷೆಯನ್ನು ಬೆಳೆಸುತ್ತಿದ್ದ ರೀತಿಯನ್ನು ಅತ್ಯಂತ ಸುಂದರವಾಗಿ ತಮ್ಮ ಉಪನ್ಯಾಸದ ಮೂಲಕ ಬಿಚ್ಚಿಟ್ಟರು.

ಇದೇ ಸಂದರ್ಭದಲ್ಲಿ    ಅಧ್ಯಕ್ಷ ಎಂ. ಗೋವಿಂದ  ಕಾರ್ಯದರ್ಶಿ ಸಂಜೀವ  ಆಚಾರ್, ಉಪಾಧ್ಯಕ್ಷ ಎ. ಶ್ರೀನಿವಾಸ ಅವರನ್ನು ಮುಂದಿನ ಸಾಲಿನ ಪದಾಧಿಕಾರಿಗಳಾಗಿ ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು.  ವೇದಿಕೆಯಲ್ಲಿ ಸ್ಥಾಪಕ ಅಧ್ಯಕ್ಷ ಹೆಚ್. ವಸಂತ ಹೆಗಡೆ ಅವರು ಉಪಸ್ಥಿತರಿದ್ದು ಶುಭಕೋರಿದರು. ನಿವೃತ್ತ  ಶಿಕ್ಷಕ ಭಾಸ್ಕರ್ ಶೆಟ್ಟಿ, ಕೆ. ಪುಂಡಲಿಕ ನಾಯಕ್ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹೆಚ್  ರಾಮ ಸೇರೆಗಾರ ಅವರು ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!