spot_img
Saturday, March 28, 2026
spot_img

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಭಾರತೀಯ ಸಿನಿಮಾ ಸ್ಪರ್ಧೆ ಪ್ರವೇಶಿಸಿದ ‘ಆ 90 ದಿನಗಳು’

ಕುಂದಾಪುರ: ಮಾ.3ರಿಂದ ನಡೆಯಲಿರುವ 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರತಿಷ್ಠಿತ ಭಾರತೀಯ ಸಿನಿಮಾ ಸ್ಪರ್ಧೆಗೆ ಮಾಲ್ವಿಕ ಮೋಶನ್ ಪಿಚ್ಚರ್ಸ್ ನಿರ್ಮಾಣದ ಚಿತ್ರ ಆ 90 ದಿನಗಳು ಆಯ್ಕೆಯಾಗಿದೆ.

55 ರಾಷ್ಟ್ರಗಳ 200 ಚಿತ್ರಗಳು ಇದರಲ್ಲಿ ಭಾಗವಹಿಸಲಿರುವ ಸ್ಪರ್ಧೆಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗುಲ್ವಾಡಿ ಟಾಕೀಸ್ ಅರ್ಪಿಸುವ ರೊನಾಲ್ಡ್ ಲೋಬೊ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶನದ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥೆ ಹೊಂದಿರುವ ಆ 90 ದಿನಗಳು ಸಿನಿಮಾ ಸ್ಥಾನ ಪಡೆದಿದೆ.

ಈ ಸಿನಿಮಾದಲ್ಲಿ ರತಿಕ್ ಮುರ್ಡೇಶ್ವರ್, ಭವ್ಯ, ರಾಧ ಭಗವತಿ, ಕೃತಿಕ ದಯಾನಂದ್, ಜೋ ಸೈಮನ್, ಪ್ರದೀಪ್ ಪೂಜಾರಿ, ಅಮೀರ್ ಹಂಝ, ಪಕೀರ್ ಸಲಾಂ, ರವಿ ಕಿರಣ್ ಮುರ್ಡೇಶ್ವರ ಮುಂತಾದವರು ಅಭಿನಯಿಸಿದ್ದಾರೆ. ಸಹ ನಿರ್ಮಾಪಕರಾಗಿ ಗಿರೀಶ ಶೆಟ್ಟಿಗಾರ್, ನವೀನ ವಿಲಿಯಮ್ಸ್ ಬರ್ಬೋಜ, ತಾಂತ್ರಿಕ ನಿರ್ದೇಶನ: ಬಿ ಶಿವಾನಂದ್, ಛಾಯಾಗ್ರಹಣ: ಪಿ.ವಿ.ಆರ್ ಸ್ವಾಮಿ ಗೂಗಾರ ದೊಡ್ಡಿ, ಸಂಗೀತ: ಕೃಷ್ಣ ಬಸ್ರೂರು, ಸಂಕಲನ: ನಾಗೇಶ ಓ, ಕಲರಸ್ಟ್: ಎ ಗುರು ಪ್ರಸಾದ್, ಸೌಂಡ್ ಡಿಸೈನರ್: ಬಾಲಕೃಷ್ಣ, ಸಾಹಿತ್ಯ: ಪ್ರಮೋದ ಮರವಂತೆ, ಗಾಯಕರು: ಅರ್ಫಾಝ್ ಉಳ್ಳಾಲ್, ಶಶಿಕಲ ಸುನೀಲ್ ಮುಂತಾದವರು ತಾಂತ್ರಿಕ ವರ್ಗದಲ್ಲಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!