spot_img
Saturday, March 28, 2026
spot_img

ಶ್ವೇತಛತ್ರದಡಿಯಲ್ಲಿ ಪ್ರಾಚಾರ್ಯ ಕೆ.ಪಿ. ಹೆಗಡೆಯವರಿಗೆ ಗುರುವಂದನೆ

ಕುಂದಾಪುರ: ಪ್ರಾಚಾರ್ಯ ಕೆ.ಪಿ. ಹೆಗಡೆಯವರಿಗೆ ಗುರುವಂದನೆಯನ್ನು ಸಲ್ಲಿಸಿಕೊಂಡು ಶ್ವೇತ ಛತ್ರ ಯಕ್ಷಮಿತ್ರ (ರಿ.)ಕೋಣಿ, ಕುಂದಾಪುರ ಇವರ ನೇತೃತ್ವದಲ್ಲಿ ವರ್ಷೋತ್ಸವ ಗಾನಗುರುವೈಭವ ಕಾರ್ಯಕ್ರಮವನ್ನು ಫೆಬ್ರವರಿ, 27ರಂದು ಸಂಜೆ ಗಂಟೆ 4ರಿಂದ ತೆಕ್ಕಟ್ಟೆ ಹಯಗ್ರೀವದಲ್ಲಿ ಶ್ರೀ ’ಕೃಷ್ಣ ಸಂಧಾನ’ ತಾಳಮದ್ದಲೆಯೊಂದಿಗೆ ಏರ್ಪಡಿಸಲಾಗಿದೆ. ಗಣ್ಯರಾದ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ದೀಪಕ್ ಶೆಟ್ಟಿ ಬಾರ್ಕೂರು, ರಾಮಚಂದ್ರ ವರ್ಣ ಹಂಗಳೂರು, ಪ್ರೊ. ಉದಯಕುಮಾರ್ ಶೆಟ್ಟಿ, ಸುಜಯೀಂದ್ರ ಹಂದೆ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಲಾವಿದರಾಗಿ ಸುರೇಶ್ ಶೆಟ್ಟಿ ಶಂಕರನಾರಾಯಣ, ಲಂಬೋದರ ಹೆಗಡೆ ನಿಟ್ಟೂರು, ರಾಘವೇಂದ್ರ ಹೆಗಡೆ ಯಲ್ಲಾಪುರ, ಶ್ರೀನಿವಾಸ ಪ್ರಭು, ಸಂಕದಗುಂಡಿ ಗಣಪತಿ ಭಟ್, ಪವನ್ ಕಿರಣ್‌ಕೆರೆ, ಹರೀಶ್ ಬೊಳಂತಿಮೊಗರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕ ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!