spot_img
Saturday, March 28, 2026
spot_img

ಜಟ್ಟಿಗೇಶ್ವರ, ಭದ್ರಮಹಾಂಕಾಳಿ ಸಪರಿವಾರ ಗರಡಿ ಬೆಣ್ಗೆರೆ: ವಾರ್ಷಿಕ ಮಾರಿಹಬ್ಬ ಸಂಪನ್ನ

ಕುಂದಾಪುರ: ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಹಾಗೂ ಸಪರಿವಾರ ಗರಡಿ ಬೆಣ್ಗೆರೆ ಗುಜ್ಜಾಡಿ ಇಲ್ಲಿ ವಾರ್ಷಿಕ ಮಾರಿ ಹಬ್ಬ ಕಾರ್ಯಕ್ರಮವೂ ಮಂಗಳವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ಸಂಪೂರ್ಣ ಅನ್ನದಾನ ಸೇವಕರಾದ ಆರತಿ ಪೂಜಾರ್ತಿ ಇವರ ತಾಯಿಯಾದ ದೇವಿ ಪೂಜಾರಿ ಎಡಕಂಠ ಇವರನ್ನು ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ನೆಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಬಾಬು ಜೆ ಪೂಜಾರಿ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷರಾದ ಮಹಾಬಲ ದೇವಾಡಿಗ, ಮಾಧವ ಪೂಜಾರಿ ಬದಾಕೆರೆ, ಗಣಪತಿ ಪೂಜಾರಿ ಮತ್ತು ಅನಂತ ಖಾರ್ವಿ, ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹ ಪೂಜಾರಿ ಅರೆಶಿರೂರು, ಕಾರ್ಯದರ್ಶಿಗಳಾದ ಪುಟ್ಟಯ್ಯ ಪೂಜಾರಿ, ಪ್ರಧಾನ ಪಾತ್ರಿಗಳಾದ ನಾರಾಯಣ ಪೂಜಾರಿ, ನರಸಿಂಹ ಪೂಜಾರಿ, ಮಂಜು ಪೂಜಾರಿ, ಅರ್ಚಕರಾದ ಚಿಕ್ಕಯ್ಯ ಪೂಜಾರಿ, ಉದಯ್ ಪೂಜಾರಿ, ಬಾಬು ಪೂಜಾರಿ, ಹಿರಿಯ ಪೂಜಾರಿ, ಗಣಪತಿ ಪಾಟೀಲ್, ಹರೀಶ್ ಖಾರ್ವಿ, ಜಗದೀಶ್ ಖಾರ್ವಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 600ಕ್ಕೂ ಮಿಕ್ಕಿ ಭಕ್ತಾದಿಗಳು ಭಾಗವಹಿಸಿ ಅನ್ನಪ್ರಸಾದವನ್ನು ಸ್ವೀಕರಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!