spot_img
Saturday, March 28, 2026
spot_img

ಶ್ರೀ ಗುರು ನಿತ್ಯಾನಂದ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನ ಯರುಕೋಣೆ ಶಾಖೆ ಉದ್ಘಾಟನೆ

ಬೈಂದೂರು: ಶ್ರೀ ಗುರು ನಿತ್ಯಾನಂದ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ, ಪ್ರಧಾನ ಕಛೇರಿ ನಾವುಂದ ಇದರ ನೂತನ ಯರುಕೋಣೆ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಫೆ.11ರಂದು ನಡೆಯಿತು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ದೀಪ ಪ್ರಜ್ವಲನೆಗೈದು ಕಾರ್ಯಕ್ರಮ ಚಾಲನೆ ನೀಡಿ, ದೇಶದ ಪ್ರಗತಿಗೆ ಇಂಥಹ ಸಹಕಾರ ಸಂಘಗಳ ಪಾತ್ರ ಮಹತ್ವದ್ದು. ಜಾತ್ಯಾತೀತವಾಗಿ, ಒಗ್ಗಟ್ಟಾಗಿ ಸಹಕಾರ ಸಂಘಗಳನ್ನು ಬೆಳೆಸುವುದರಿಂದ ಅಭಿವೃದ್ದಿಗೆ ಪೂರಕವಾಗುತ್ತದೆ ಎಂದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎಮ್ ಸುಕುಮಾರ ಶೆಟ್ಟಿಯವರು ಭದ್ರತಾ ಕೊಠಡಿ ಉದ್ಘಾಟಿಸಿ ನೂತನ ಶಾಖೆಯು ಸಹಕಾರಿ ತತ್ವದಂತೆ ಗ್ರಾಮೀಣ ಜನತೆಯ ಆರ್ಥಿಕ ಅಭಿವೃದ್ದಿಗೆ ಪೂರಕವಾಗಿ ಸಂಸ್ಥೆಯು ಉನ್ನತಿ ಹೊಂದಲಿ ಎಂದು ಶುಭ ಹಾರೈಸಿದರು.

ಮಾಜಿ ಶಾಸಕ ಗೋಪಾ ಪೂಜಾರಿಯವರು ನೂತನ ಶಾಖೆಯು ಗಣಕೀಕರಣವನ್ನು ಚಾಲನೆ ನೀಡಿ. ಠೇವಣಿ ಪತ್ರ ಬಿಡುಗಡೆಗೊಳಿಸಿದರು.

ಹಿರಿಯ ಸಹಕಾರಿ ಧುರೀಣರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ರಾಜು ಪೂಜಾರಿಯವರು ಕಛೇರಿ ಉದ್ಘಾಟನೆ ಮಾಡಿ, ಈ ಸಹಕಾರಿಯ ಅಧ್ಯಕ್ಷರಾದ ಡಾ.ಎನ್ ಕೆ ಬಿಲ್ಲವರು ಲಾಭದ ಬಗ್ಗೆ ಯೋಚಿಸದೆ ತೀರಾ ಹಿಂದುಳಿದ ಪ್ರದೇಶದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ದೃಷ್ಟಿಯಿಂದ ಯರುಕೋಣೆಯಲ್ಲಿ ಶಾಖೆ ಆರಂಭಿಸಿದ್ದಾರೆ. ಶಾಖೆಯು ಲಾಭದಾಯಕವಾಗಿ ಅಭಿವೃದ್ದಿ ಹೊಂದಲಿ ಎಂದರು.
ಶ್ರೀ ಗುರು ನಿತ್ಯಾನಂದ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ ಇದರ ಅಧ್ಯಕ್ಷ ಡಾ. ಎನ್ ಕೆ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರಿಗೆ ಸಹಕಾರಿಯ ಅಧ್ಯಕ್ಷ ಡಾ. ಎನ್ ಕೆ ಬಿಲ್ಲವರು ಸನ್ಮಾನಿಸಿದರು. ಕಟ್ಟಡ ಮಾಲೀಕ ಸುರೇಶ್ ಪೂಜಾರಿಯವರನ್ನು ಸನ್ಮಾನಿಸಲಾಯಿತು. ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಹಕ್ಕಾಡಿ ಜಗದೀಶ್ ಪೂಜಾರಿ, ಖಂಬದಕೋಣೆ ರೈ.ಸೇ.ಸ.ಸಂಘದ ನಿರ್ದೇಶಕರಾದ ಮೋಹನ್ ಪೂಜಾರಿ, ಹೇರೂರು ಪಂಚಾಯತ್ ಅಧ್ಯಕ್ಷರಾದ ಸುರೇಶ್ ನಾಯ್ಕ, ಪಂಚಾಯತ್ ಸದಸ್ಯರುಗಳಾದ ಶ್ರೀನಿವಾಸ ಪೂಜಾರಿ ಮತ್ತು ಸತೀಶ್ ಶೆಟ್ಟಿ ಉಪ್ರಳ್ಳಿ, ಉದ್ಯಮಿ ವೀರೇಂದ್ರ ಹೆಗಡೆ, ಬಿ ಎ ಹಂಝ ನಾವುಂದ, ರಮೇಶ್ ಮಾಚ ಹುಬ್ಬಳ್ಳಿ ಉದ್ಯಮಿಗಳು ಮುಂಬೈ, ಸಹಕಾರಿಯ ಉಪಾಧ್ಯಕ್ಷರಾದ ಶೇಖರ್ ಪೂಜಾರಿ, ನಿರ್ದೇಶಕರಾದ ಈಶ್ವರ್ ಖಾರ್ವಿ, ರಾಜೀವ್ ಎಮ್ ಶೆಟ್ಟಿ, ಮಂಜು ಪೂಜಾರಿ, ಶ್ರೀಮತಿ ಶುಭದಾ ಎನ್ ಬಿಲ್ಲವ, ಪ್ರಮೋದ್ ಪೂಜಾರಿ, ಎನ್ ಸಿ ಅಸ್ಲಾಂ, ಸುರೇಶ್ ಕೆ ಪೂಜಾರಿ, ಶ್ರೀಮತಿ ಸಾವಿತ್ರಿ ಪೂಜಾರಿ, ಯೋಗೀಶ್ ಕಾರಂತ ಉಪಸ್ಥಿತರಿದ್ದರು.

(ವರ್ಚುವಲ್ ಮೀಟಿಂಗ್‌ನಲ್ಲಿ ಶ್ಯಾಮ್ ಖೇತಾನಿ ಉದ್ಯಮಿ ಮುಂಬೈ, ಪಂಡಿತ್ ನವೀನಚಂದ್ರ ರಾಮ ಸನೀಲ್ ವಾಸ್ತು ತಜ್ಞರು ಮುಂಬೈ, ಸಿ‌ಎಂಡಿ ಡಿಜೆ ಲಾಜಿಸ್ಟಿಕ್ ಲಿ ಇದರ ದಿನೇಶ್ ಎಮ್ ಕೊಟ್ಯಾನ್ ಮುಂಬೈ, ಐಸಿ‌ಐಸಿ ಬ್ಯಾಂಕ್ ಎಜಿ‌ಎಂ ಜಾನ್ ಡೆವಿಸ್ ಮುಂಬೈ, ಅಕ್ಷಯ ಮಾಸಿಕ ಪತ್ರಿಕೆಯ ಮ್ಯಾನೇಜಿಂಗ್ ಎಡಿಟರ್ ಧರ್ಮೇಶ್ ಎಸ್ ಸಾಲಿಯಾನ್ ಮುಂಬೈ, ಸಮಾರಂಭಕ್ಕೆ ಜೊತೆಗೂಡಿದ್ದರು.)

ಸಂಘದ ಗೌರವ ಸಲಹೆಗಾರ ಕೆ ಪುಂಡಲೀಕ ನಾಯಕ್ ಸ್ವಾಗತಿಸಿದರು, ಸಹಕಾರಿ ಅಧ್ಯಕ್ಷ ಡಾ. ಎನ್ ಕೆ ಬಿಲ್ಲವ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಕಾರಿಯ ಮೇಲ್ವಿಚಾರಕ ಆರ್.ಕೆ.ಬಿಲ್ಲವ ವಂದಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಪೂಜಾ ಟಿ. ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!