Sunday, September 8, 2024

ಕುಂದಾಪುರದಲ್ಲಿ ಸೋಮವಾರವೂ ಮುಂದುವರಿದ ಹಿಜಾಬ್-ಕೇಸರಿಶಾಲು ಸಮರ

ಕುಂದಾಪುರ, ಫೆ.7: ಕುಂದಾಪುರದಲ್ಲಿ ನಡೆಯುತ್ತಿರುವ ಹಿಜಾಬ್ ಕೇಸರಿ ಶಾಲು ಸಂಘರ್ಷ ಸತತ ಸೋಮವಾರವೂ ಮುಂದುವರಿದೆ. ಸೋಮವಾರವೂ ಹಿಜಾಬ್ ಮತ್ತು ಕೇಸರಿ ಹಠ ಕುಂದಾಪುರದ ಬೇರೆ ಬೇರೆ ಕಾಲೇಜುಗಳಿಗೂ ವ್ಯಾಪಿಸಿದೆ. ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶನಿವಾರ ರಜೆ ನೀಡಿದ್ದು, ಸೋಮವಾರ ಕಾಲೇಜು ಆರಂಭವಾಗುತ್ತಲೇ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಸ್ಕಾರ್ಪ್ ಧರಿಸಿಯೇ ಕಾಲೇಜಿಗೆ ಹಾಜರಾಗಿದ್ದು ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವ ಸಂದೇಹ ಹುಟ್ಟು ಹಾಕಿತ್ತು. ಆದರೆ ಕಾಲೇಜು ಅಭಿವೃದ್ದಿ ಸಮಿತಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜಿನಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಕುಳಿಸಲಾಯಿತು.

ರಾಜ್ಯ ಸರಕಾರ ಕಾಲೇಜು ಆವರಣದೊಳಕ್ಕೆ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳ ಹೊರತಾಗಿ ಇತರರಿಗೆ ಪ್ರವೇಶವಿಲ್ಲ ಎಂಬ ಆದೇಶ ಹೊರಡಿಸಿದ್ದರಿಂದ ಪ್ರಾಂಶುಪಾಲರು ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಅದು ಫಲಪ್ರದವಾಗಲಿಲ್ಲ.

ಇತ್ತ ಕೋಟೇಶ್ವರದ ಪ್ರಥಮದರ್ಜೆ ಕಾಲೇಜಿನಲ್ಲಿಯೂ ಕೂಡಾ ಹಿಜಾಬ್-ಕೇಸರಿ ಶಾಲು ಸಂಘರ್ಷ ಕಂಡುಬಂತು. ಅಲ್ಲಿ ಮೂವರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು ಅವರಿಗೆ ಕಾಲೇಜಿನ ಒಳಗೆ ಪ್ರವೇಶ ನಿರಾಕರಿಸಲಾಯಿತು.
ಕುಂದಾಪುರ ಎಲ್ಲ ಕಾಲೇಜುಗಳ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!