Sunday, September 8, 2024

ಚಿತ್ರಮಂದಿರ, ಜಿಮ್, ಈಜುಕೊಳಗಳಲ್ಲಿ ಶೇ. 100 ರಷ್ಟು ಆಸನ ಭರ್ತಿಗೆ ಅವಕಾಶ- ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

ಉಡುಪಿ: ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಹೊರಡಿಸಲಾದ ಹೆಚ್ಚುವರಿ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಠಾನದಿಂದ ಜಿಲ್ಲೆಯಾದ್ಯಂತ ಪಾಸಿಟಿವ್ ಪ್ರಕರಣಗಳ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ, ಹೊರಡಿಸಲಾದ ಆದೇಶದಲ್ಲಿ ಮಾರ್ಪಾಡು ಮಾಡಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.

ಸಿನಿಮಾ ಹಾಲ್, ಮಲ್ಟಿಫ್ಲೆಕ್ಸ್, ಥಿಯೇಟರ್, ರಂಗಮಂದಿರ, ಆಡಿಟೋರಿಯಂ, ಜಿಮ್ ಮತ್ತು ಯೋಗ ಕೇಂದ್ರ ಹಾಗೂ ಈಜುಕೊಳಗಳಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇ. 100 ಸಾಮರ್ಥ್ಯದೊಂದಿಗೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿಕೊಂಡು ಕಾರ್ಯಾಚರಿಸಲು ಅನುಮತಿ ನೀಡಲಾಗಿದ್ದು, ನಿಗಧಿತ ಆಸನ ಸಾಮರ್ಥ್ಯವನ್ನು ಮೀರಿರಬಾರದು. ಎರಡು ಡೋಸ್ ಲಸಿಕೆ ಪ್ರಮಾಣ ಪತ್ರ ಹೊಂದಿರುವ, ರೋಗ ಲಕ್ಷಣರಹಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಪ್ರವೇಶ ಸಮಯದಲ್ಲಿ ಥರ್ಮಲ್ ಸ್ಕ್ಯಾನ್ ಬಳಸಿ ಜ್ವರ ಲಕ್ಷಣಗಳ ಕುರಿತು ತಪಾಸಣೆ ನಡೆಸುವುದು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿರುತ್ತದೆ.

ಸಿನಿಮಾ ಹಾಲ್, ಮಲ್ಟಿಫ್ಲೆಕ್ಸ್, ಥಿಯೇಟರ್, ರಂಗಮಂದಿರ, ಆಡಿಟೋರಿಯಂಗಳಲ್ಲಿ ಸಾರ್ವಜನಿಕರು ಪ್ರದರ್ಶನ ಸಮಯ ಸೇರಿದಂತೆ ಎಲ್ಲಾ ಸಮಯದಲ್ಲಿಯೂ ಕಡ್ಡಾಯವಾಗಿ ಮಾಸ್ಕ್ ಧರಿಸಿರುವ ಕುರಿತು ಸಂಘಟಕರು ಮೇಲ್ವಿಚಾರಣೆ ನಡೆಸಬೇಕು. ಪ್ರತಿ ಪ್ರದರ್ಶನದ ನಂತರ ಸಭಾಂಗಣ ಮತ್ತು ವಿಶ್ರಾಂತಿ ಕೊಠಡಿಗಳನ್ನು ಸ್ವಚ್ಛಗೊಳಿಸುವುದು ಕಡ್ಡಾಯವಾಗಿರುತ್ತದೆ. ಸಿ.ಪಿ.ಡಬ್ಲ್ಯೂ.ಡಿ ಮಾರ್ಗಸೂಚಿಗಳ ಪ್ರಕಾರ ಎ.ಸಿ ನಿರ್ವಹಿಸಬೇಕು. ಮೇಲ್ಕಂಡ ಸ್ಥಳಗಳ ಒಳಗೆ ಉಪಾಹಾರ, ಆಹಾರ ಮತ್ತು ಪಾನೀಯಗಳ ಸೇವನೆಯನ್ನು ನಿಷೇಧಿಸಲಾಗಿರುತ್ತದೆ.

ಜಿಮ್ ಮತ್ತು ಯೋಗಕೇಂದ್ರಗಳು ಚಟುವಟಿಕೆಯನ್ನು ಹೊರಾಂಗಣದಲ್ಲಿ ಮತ್ತು ತೆರೆದ ಸ್ಥಳದಲ್ಲಿ ಇತರರಿಂದ ಯಾವುದೇ ದೂರುಗಳಿಲ್ಲದೆ ನಡೆಸಬೇಕು. 2 ಮೀಟರ್ ಭೌತಿಕ ಅಂತರ ಕಾಯ್ದುಕೊಳ್ಳಬೇಕು. ಪ್ರತಿ ಸೆಷನ್ ಅಥವಾ ಬ್ಯಾಚ್‌ನ ನಂತರ ಸಭಾಂಗಣ ಮತ್ತು ವಿಶ್ರಾಂತಿ ಕೊಠಡಿಗಳನ್ನು ಸ್ವಚ್ಛಗೊಳಿಸಬೇಕು. ಸಿ.ಪಿ.ಡಬ್ಲ್ಯೂ.ಡಿ ಮಾರ್ಗಸೂಚಿಗಳ ಪ್ರಕಾರ ಎ.ಸಿ ನಿರ್ವಹಿಸಬೇಕು.

ಈಜುಕೊಳಗಳಲ್ಲಿ 2 ಮೀಟರ್ ಭೌತಿಕ ಅಂತರ ಕಾಯ್ದುಕೊಳ್ಳಬೇಕು. ಪ್ರತಿ ಸೆಷನ್/ ಬ್ಯಾಚ್‌ನ ನಂತರ ಈಜುಗಾರರು ಉಪಯೋಗಿಸಿರುವ ಬದಲಾವಣೆ ಕೊಠಡಿ / ವಿಶ್ರಾಂತಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು.

ಆದೇಶಗಳನ್ನು ಪಾಲಿಸದೇ ಇರುವವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು, ಡಿಸಾಸ್ಟರ್ ಮ್ಯಾನೆಜ್‌ಮೆಂಟ್ ಆಕ್ಟ್ ೨೦೦೫, ಕರ್ನಾಟಕ ಎಪಿಡೆಮಿಕ್ ಡಿಸಾಸ್ಟರ್ ಆಕ್ಟ್ ೨೦೨೦ ಮತ್ತು ಐ.ಪಿ.ಸಿ ಸೆಕ್ಷನ್ ೧೮೮ ಪ್ರಕಾರ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!