Sunday, September 8, 2024

ಸಂಘಟನೆಗಳಲ್ಲಿ ನಿಸ್ವಾರ್ಥ ಮನೋಭಾವದ ಸೇವೆ ಅಗತ್ಯ-ಸೂರ್ಯ ಎಸ್. ಪೂಜಾರಿ

ಮುಂಬಯಿ: ಸಂಘಟನೆಯ ಅಭಿವೃದ್ಧಿಯಾದರೆ ಸಮುದಾಯದವರಿಗೆ ಮತ್ತು ಸದಸ್ಯರಿಗೆ ಹೆಚ್ಚಿನ ನೆರವು ಸಿಗುತ್ತದೆ. ಆ ನಿಟ್ಟಿನಲ್ಲಿ ಆಡಳಿತ ಮಂಡಳಿ ಸಾಕಷ್ಟು ಶ್ರಮವಹಿಸಿ ದುಡಿಯುತ್ತಿದ್ದು ಉಪಸಮಿತಿಗಳು ಕೈ ಜೋಡಿಸಿದರೆ ನಾವು ನಿಶ್ಚಿತವಾದ ಗುರಿ ತಲುಪಬಹುದು. ಕೊರೊನಾ ನಿಮಿತ್ತ ಈವರೆಗೂ ಹಲವಾರು ನಿರ್ಬಂಧಗಳು ಇದ್ದಿರುವುದರಿಂದ ಸ್ಥಗಿತಗೊಂಡ ಕಾರ್ಯ ಚಟುವಟಿಕೆಗಳನ್ನು ಪುನ ಆರಂಭಿಸಬೇಕಾಗಿದೆ. ಮುಂದೂಡಿರುವ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣೆ ಸಮಾರಂಭವನ್ನು ಆಯೋಜಿಸ ಬೇಕಾಗಿರುವುದರಿಂದ ಎಲ್ಲರೂ ಸಕ್ರೀಯವಾಗಿ ಸಂಘಟನೆಯ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಇದರ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ಹೇಳಿದರು.

ಅವರು ಇತ್ತೀಚೆಗೆ ಮುಂಬಯಿ ಥಾಣೆ ಪಶ್ಚಿಮದಲ್ಲಿರುವ ರೋಟರಿ ಕ್ಲಬ್ ಸಭಾಗೃಹದಲ್ಲಿ ಆಯೋಜಿಸಿದ ಸಂಘದ ಉಪಸಮಿತಿಗಳ ರಚನೆ ಮತ್ತು ಪ್ರಾದೇಶಿಕ ಪ್ರತಿನಿಧಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವವರು ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸಬೇಕು ಯಾವುದೇ ಪ್ರತಿಫಲದ ನಿರೀಕ್ಷೆ ಮಾಡದೆ ತನ್ನಿಂದಾದ ಕಾರ್ಯವನ್ನು ಮಾಡಿದಾಗ ಸಮಾಜ ಅವರನ್ನು ಗುರುತಿಸುತ್ತದೆ ಸಂಘಟನೆಯ ಆಭಿವೃದ್ಧಿಯೇ ನಮ್ಮೆಲ್ಲರ ಧ್ಯೇಯವಾಗಬೇಕು ಪದಾಧಿಕಾರಿಗಳಾಗಿ ಆಯ್ಕೆಯಾದವರು ಆಡಳಿತ ಸಮಿತಿಯ ನಿರೀಕ್ಷೆ ಹುಸಿಗೊಳಿಸದೆ ಸಮುದಾಯದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಉಪಸಮಿತಿಗಳಾದ ಮಹಿಳಾ ಸಮಿತಿ, ಯುವ ಅಭ್ಯುದಯ ಸಮಿತಿ, ಧಾರ್ಮಿಕ ಮತ್ತು ಸಾಮಾಜಿಕ ಸಮಿತಿಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಉಪಾಧ್ಯಕ್ಷರುಗಳಾದ ನರಸಿಂಹ ಎಮ್. ಬಿಲ್ಲವ, ಎಸ್. ಕೆ. ಪೂಜಾರಿ ಮತ್ತು ಗೌರವ ಕೋಶಾಧಿಕಾರಿ ಶ್ರೀಧರ ವಿ. ಪೂಜಾರಿ ಮಾತನಾಡಿದರು.

ಸುಶೀಲ ಆರ್. ಪೂಜಾರಿ, ಯಶೋದಾ ಎಸ್. ಪೂಜಾರಿ, ರೇಖಾ ಎನ್. ಬಿಲ್ಲವ ಪ್ರಾರ್ಥನೆ ಸಲ್ಲಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೊತೆ ಕಾರ್ಯದರ್ಶಿ ಸುಶೀಲ ಆರ್. ಪೂಜಾರಿ ವಂದಿಸಿದರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!