spot_img
Monday, March 23, 2026
spot_img

ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಮಹಿಳಾ ಮೀನುಗಾರರಿಗೆ ಸಾಲ ವಿತರಣೆ

ಕುಂದಾಪುರ: ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಮಹಿಳಾ ಮೀನುಗಾರರ ಸ್ವಸಹಾಯ ಸಂಘಗಳ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಯೂನಿಯನ್ ಬ್ಯಾಂಕ್ ಉಡುಪಿ ಡಿಜಿ‌ಎಂ ಡಾ. ಎಚ್.ಟಿ ವಾಸಪ್ಪ ಇವರು ಯೂನಿಯನ್ ಬ್ಯಾಂಕ್ ಗೋಪಾಡಿ ಶಾಖೆಯಲ್ಲಿ ಸಾಲ ಮಂಜೂರಾತಿ ಪತ್ರವನ್ನು ವಿತರಣೆ ಮಾಡಿ ಶುಭ ಹಾರೈಸಿದರು.

ಇದೇ ಸಂದರ್ಭ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ರಮೇಶ ಕಾಂಚನ್ ಮಾತನಾಡಿ, ಈಗಾಗಲೇ ಬ್ಯಾಂಕಿನಿಂದ ಪ್ರಸ್ತುತ ಮಹಿಳಾ ಮೀನುಗಾರರಿಗೆ ಸುಮಾರು 6 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಸಂತಸ ತಂದಿದೆ. ಇದೇ ರೀತಿ ಮಹಿಳಾ ಮೀನುಗಾರರಿಗೆ ಬರಬೇಕಾದ ಬಾಕಿ ಇರುವ ಸಾಲ ಮನ್ನಾ ಮತ್ತು ಬಡ್ಡಿ ಸಹಾಯ ಧನವನ್ನು ಶೀಘ್ರವಾಗಿ ವಿಲೇವಾರಿ ಮಾಡುವ ಬಗ್ಗೆ ಡಿಜಿ‌ಎಂ ಇವರಿಗೆ ಮನವಿ ಮಾಡಿದರು.

ಯೂನಿಯನ್ ಬ್ಯಾಂಕ್ ಗೋಪಾಡಿ ಶಾಖೆಯ ಮ್ಯಾನೇಜರ್ ಪವನ್‌ಕುಮಾರ ತೆಗ್ಗಿನ್, ಸಿಬ್ಬಂದಿಗಳು, ಸ್ವಸಹಾಯ ಸಂಘದ ಸದಸ್ಯರು, ಬ್ಯಾಂಕಿನ ಗ್ರಾಹಕರು ಮತ್ತಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!