Sunday, September 8, 2024

ತೆಕ್ಕಟ್ಟೆ: ಮಲ್ಪೆ ವಾಸುದೇವ ಸಾಮಗ ಸಂಸ್ಮರಣೆ – ‘ಶ್ರೀ ಕೃಷ್ಣ ತುಲಾಭಾರ’ಯಕ್ಷಗಾನ ಪ್ರದರ್ಶನ

ಕುಂದಾಪುರ: ವಾಸುದೇವ ಸಾಮಗ ಎನ್ನುವ ದೊಡ್ಡ ಅರ್ಥಧಾರಿಯ ಸಂಸ್ಮರಣೆ ಮಾಡುವುದು ಯಕ್ಷಗಾನದ ಕಲಾವಿದರ, ಕಲಾಭಿಮಾನಿಗಳ ಹೊಣೆ. ಸಾಮಗ ಕುಟುಂಬದ ಎಲ್ಲಾ ಕಲಾವಿದರೂ ವಿಭಿನ್ನವಾಗಿ ರಂಗದಲ್ಲಿ ಛಾಪು ಮೂಡಿಸಿದ ಕುಟುಂಬ. ಸ್ನೇಹಜೀವಿ ವಾಸುದೇವ ಸಾಮಗರು ಅರ್ಥಧಾರಿಕೆಯಲ್ಲಿ ವಿಶೇಷವಾಗಿ ಗುರುತಿಸಿಕೊಂಡವರು. ಸಾಮಗರ ಸಂಸ್ಮರಣೆಯ ಸಂದರ್ಭದಲ್ಲಿ ಸಂತೆಗುಳಿ ನಾರಾಯಣ ಭಟ್‌ರಿಗೆ ಈ ಸಂಸ್ಮರಣಾ ಪ್ರಶಸ್ತಿ ನೀಡಿರುವುದು ಅರ್ಥಪೂರ್ಣ ಎಂದು ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದರು.

ಅ.31ರಂದು ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಸಂಯಮಂ (ರಿ.) ಕೋಟೇಶ್ವರ ಹಾಗೂ ಯಶಸ್ವಿ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಪ್ರಾಯೋಜನೆಯಲ್ಲಿ ಹರಿದಾಸ ಮಲ್ಪೆ ವಾಸುದೇವ ಸಾಮಗ ಸಂಸ್ಮರಣೆ ಕಾರ್ಯಕ್ರಮ ಸಂತೆಗುಳಿ ನಾರಾಯಣ ಭಟ್‌ರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಂಸ್ಮರಣಾ ಮಾತುಗಳನ್ನಾಡಿದ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್, ವಾಸುದೇವ ಸಾಮಗರು ಆಟದ, ಕೂಟದ ಮಹಾ ನಿರ್ದೇಶಕರು, ಸಂಘಟಕರು. ಅನೇಕ ಮೇಳಗಳಲ್ಲಿ ಅಭಿನಯಿಸಿ, ಕಲಾವಿದರನ್ನು ತಿದ್ದಿ ತೀಡಿ ರಂಗದಲ್ಲಿ ಬೆಳೆಸಿ ತಾನು ಸಣ್ಣವನಾಗುತ್ತಿದ್ದರು. ಸಹ ಕಲಾವಿದನ ಪ್ರೌಢಿಮೆಯನ್ನು ಮೆಚ್ಚಿದವರು. ಅಸೂಯೆಪಟ್ಟವರಲ್ಲ ಎಂದರು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಮ್. ಎಲ್. ಸಾಮಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಯಕ್ಷಗಾನ ಕಲಾವಿದ ನಿಟ್ಟೂರು ಅನಂತ ಹೆಗಡೆ ಅಭಿನಂದನಾ ನುಡಿಗಳನ್ನಾಡಿದರು. ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸಿ. ಕುಮಾರ ಬೆಕ್ಕೇರಿ, ಯಶಸ್ವಿ ಕಲಾವೃಂದ ಕೊಮೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಬಹುಮೇಳಗಳ ಯಜಮಾನ ಪಿ. ಕಿಶನ್ ಹೆಗ್ಡೆ, ಮೀರಾ ವಿ. ಸಾಮಗ ಉಪಸ್ಥಿತರಿದ್ದರು.

ಪ್ರದೀಪ ವಿ. ಸಾಮಗ ಸ್ವಾಗತಿಸಿ, ಭಾಗವತ ಹೆಬ್ರಿ ಗಣೇಶ್ ಪ್ರಾರ್ಥಿಸಿ, ಡಾ. ವೈಕುಂಠ ಹೇರ್ಳೆ ವಂದಿಸಿದರು. ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಪ್ರಶಾಂತ್ ಮಲ್ಯಾಡಿ ಬಳಗದವರಿಂದ ಯಕ್ಷಗಾನ ಶ್ರೀಕೃಷ್ಣ ತುಲಾಭಾರ ರಂಗದಲ್ಲಿ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!