spot_img
Monday, March 23, 2026
spot_img

ಶ್ರೀ ಬ್ರಹ್ಮಶ್ರೀ ಸೌಹಾರ್ದ ಸಹಕಾರಿ ವಂಡ್ಸೆ: ನೂತನ ಆಡಳಿತ ಮಂಡಳಿಗೆ ಆಯ್ಕೆ

ಕುಂದಾಪುರ: ಶ್ರೀ ಬ್ರಹ್ಮಶ್ರೀ ಸೌಹಾರ್ದ ಸಹಕಾರಿ ನಿ., ವಂಡ್ಸೆ ಇದರ ನೂತನ ಆಡಳಿತ ಮಂಡಳಿಗೆ ಚುನಾವಣೆ ಅ.28ರಂದು ನಡೆಯಿತು. ನೂತನ ಅಧ್ಯಕ್ಷರಾಗಿ ಕೆ.ಬಸವರಾಜ್, ‘ಶಾರ್ವರಿ’ ರಾಯಪ್ಪನಡಿ, ಉಪಾಧ್ಯಕ್ಷರಾಗಿ ವೆಂಕಟೇಶ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.

ನಿರ್ದೇಶಕರಾಗಿ ಶಿವರಾಮ ಶೆಟ್ಟಿ ವಂಡ್ಸೆ, ಉದಯ ಕೆ.ನಾಯ್ಕ್ ವಂಡ್ಸೆ, ರವೀಂದ್ರ ಎನ್.ಬಂಗೇರ ಕುಂದಾಪುರ, ಶಂಕರ ಗಾಣಿಗ ಹೊಲಾಡು ವಂಡ್ಸೆ, ಜಲಜ ಪೂಜಾರಿ ಮಾವಿನಕಟ್ಟೆ, ಶಶಿಕಲಾ ಎಸ್ ವಂಡ್ಸೆ, ಚಂದ್ರ ರಾಯಪ್ಪನಡಿ, ದಿವಾಕರ ಸುಜಿ ವಂಡ್ಸೆ, ದೇವು ಮೆಂಡನ್ ರಾಯಪ್ಪನಡಿ, ನಾಗರಾಜ್ ಪುತ್ರನ್ ಅಂಬ್ಲಾಡಿ, ಹರೀಶ್ ನಾಯ್ಕ ವಂಡ್ಸೆ ಇವರು ಮುಂದಿನ ಐದು ವರ್ಷಗಳ ಅವಧಿಗೆ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಹಿರಿಯ ಲೆಕ್ಕಪರಿಶೋಧಕರಾದ ಶೇಖರ ಸಪಲಿಗ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಹಕಾರಿಯ ಕಾನೂನು ಸಲಹೆಗಾರರಾದ ನ್ಯಾಯವಾದಿ ಉಮೇಶ್ ಶೆಟ್ಟಿ ಶಾನ್ಕಟ್ಟು ಉಪಸ್ಥಿತರಿದ್ದರು.

ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಸಂತೋಷ್ ಸ್ವಾಗತಿಸಿ, ಶಾಖಾ ಸಿಬಂದಿ ಅಭಿಷೇಕ್ ಎಸ್.ವಂಡ್ಸೆ ವಂದಿಸಿದರು. ನಿತ್ಯನಿಧಿ ಸಂಗ್ರಹಕ ಗುರುರಾಜ್ ಗಾಣಿಗ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!