spot_img
Monday, March 23, 2026
spot_img

ಬೈಂದೂರು:ಅಗಲಿದ ಜನ್ನಾಲು ತೇಜಪ್ಪ ಶೆಟ್ಟಿಯವರ ಶ್ರದ್ಧಾಂಜಲಿ ಸಭೆ

ಬೈಂದೂರು: ಅ.18ರಂದು ಅಗಲಿದ ಜನ್ನಾಲು ತೇಜಪ್ಪ ಶೆಟ್ಟಿಯವರಿಗೆ ನುಡಿನಮನ, ಶ್ರದ್ಧಾಂಜಲಿ ಬೈಂದೂರು ಬಂಟರ ಸಭಾಭವನದಲ್ಲಿ ನಡೆಯಿತು.

ಮಾಜಿ ಶಾಸಕರಾದ ಬಿ.ಅಪ್ಪಣ್ಣ ಹೆಗ್ಡೆಯವರು ದಿವಂಗತರ ಸಂಸ್ಮರಣಾ ನುಡಿಗಳನ್ನಾಡಿದರು. ಬೈಂದೂರು ಬಂಟರ ಸಂಘದ ಅಧ್ಯಕ್ಷರಾದ ವಿಠಲ ಶೆಟ್ಟಿಯವರು ತೇಜಪ್ಪ ಶೆಟ್ಟಿಯವರ ಸಹೃದಯಿ ವ್ಯಕ್ತಿತ್ವವನ್ನು ಸ್ಮರಿಸಿದರು. ಹಕ್ಲಾಡಿ ಪ್ರೌಢ ಶಾಲೆಯ ಶಿಕ್ಷಕ ಡಾ.ಕಿಶೋರ್ ಕುಮಾರ್ ಶೆಟ್ಟಿ ಯವರು ನುಡಿನಮನ ಸಲ್ಲಿಸಿ ತೇಜಪ್ಪ ಶೆಟ್ಟಿ ಯವರು ಸದಾ ಸ್ಮರಣೀಯರು ಎಂದು ನುಡಿದರು. ಚಿತ್ತೂರು ಶಾಲೆಯ ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂದಾಪುರ ವಡೇರಹೋಬಳಿ ಪ್ರೌಢ ಶಾಲೆಯ ಶಿಕ್ಷಕ ನಾರಾಯಣ ರಾಜು ತೇಜಪ್ಪ ಶೆಟ್ಟಿ ಯವರ ಕುರಿತಾದ ಅವರ ಅಳಿಯ ಗೋಪಾಲ ಶೆಟ್ಟಿ ನುಡಿನಮನ ಸಲ್ಲಿಸಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎಮ್.ಸುಕುಮಾರ ಶೆಟ್ಟಿ, ಸ್ಥಳೀಯ ಪ್ರಮುಖರಾದ ತಗ್ಗರ್ಸೆ ನಾರಾಯಣ ಹೆಗ್ಡೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕೆ ಬಾಬು ಹೆಗ್ಡೆ, ಶಂಕರ ಪೂಜಾರಿ, ಅಶೋಕ್ ಎಸ್ ಶೆಟ್ಟಿ ಹುಬ್ಬಳ್ಳಿ ದೀಪಕ್ ಕುಮಾರ್ ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷರಾದ ಎಸ್ ವಸಂತ ಹೆಗ್ಡೆ, ಜಗನ್ನಾಥ ಶೆಟ್ಟಿ, ಬಂಟ ಸಮುದಾಯದ ಪ್ರಮುಖರಾದ ಸದಾಶಿವ ಶೆಟ್ಟಿ, ಶಶಿಧರ ಶೆಟ್ಟಿ, ಗೋಕುಲ್ ಶೆಟ್ಟಿ, ವಾದಿರಾಜ ಶೆಟ್ಟಿ, ಜಗದೀಶ ಶೆಟ್ಟಿ ಕುದ್ರುಕೋಡು ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು.

ಕಂಬದಕೋಣೆ ಪ್ರೌಢಶಾಲೆಯ ಶಿಕ್ಷಕ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾಮಾಜಿಕ ಮುಖಂಡರಾಗಿ, ಊರ ಕುಟುಂಬದ ಸಾಮಾಜಿಕ ನ್ಯಾಯ ನಿರ್ಣಾಯಕರಾಗಿ, ಆದರ್ಶಯುತ ಮೌಲ್ಯಾಧಾರಿತ ಜೀವನ ನಡೆಸಿ ಕೀರ್ತಿಶೇಷರಾದ ದಿ. ಜನ್ನಾಲು ತೇಜಪ್ಪ ಶೆಟ್ಟಿಯವರ ಶ್ರದ್ಧಾಂಜಲಿ ಸಭೆಯು ಅವರ ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಕುಟುಂಬಸ್ಥರ ಹಾಗೂ ಬಂಧುಗಳ ಉಪಸ್ಥಿತಿಯಲ್ಲಿ ನಡೆಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!