Thursday, November 21, 2024

ಮೂರನೆ ಅಲೆಯ ಭಯ: ಆಳುವ ವರ್ಗಕ್ಕೆ ಇನ್ನೊಂದು ವರದಾನ


ಸುಬ್ರಹ್ಮಣ್ಯ ಪಡುಕೋಣೆ (ಸಂಪಾದಕ)


ಕೊರೊನಾ ಮತ್ತೊಮ್ಮೆ ಎಲ್ಲರಲ್ಲಿ ಭಯ ಹುಟ್ಟಿಸುತ್ತಿದೆ. ಈಗಾಗಲೇ ಕರೊನಾದಿಂದ ಜನ ತತ್ತರಿಸಿ ಹೋಗಿದ್ದರೆ. ಜನರ ಸಂಕಷ್ಟ ಕಾಲದಲ್ಲೂ ನೆರವಿಗೆ ಬಾರದ ಸರಕಾರಗಳು ಕೊರೊನಾದಿಂದ ಸಾಯಿರಿ ಎಂಬ ಪರೋಕ್ಷ ಸಲಹೆಯನ್ನು ನೀಡುತ್ತಿದೆ. ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಆದರೆ ಸರಕಾರಕ್ಕೆ ಚೆಲ್ಲಾಟವಾಗಿದೆ. ಕೊರೊನಾ ಸಂದರ್ಭದಲ್ಲಿಯೂ ಜನರ ನೆರವಿಗೆ ಬರಬೇಕೆಂಬ ಕನಿಷ್ಟ ಕಾಳಜಿ ಸರಕಾರಕ್ಕೆ ಇಲ್ಲ. ಈ ಸಂದರ್ಭದಲ್ಲಿ ಜನರಿಗೆ ದುಡಿಮೆ ಇಲ್ಲದೆ, ಹಸಿವನ್ನು ನೀಗಿಸಿಕೊಳ್ಳಲು ಸಾಧ್ಯವಿಲ್ಲದೆ ಕೈಕಟ್ಟಿ ಕುಳಿತಿದ್ದಾರೆ. ಆದರೆ ಆಳುವ ವರ್ಗಗಳು ಜನರಿಂದ ವಸೂಲಿಗೆ ಇಳಿದಿವೆ. ತಮ್ಮ ಮನಸ್ಸಿಗೆ ಬಂದಂತೆ ಬೆಲೆ ಹೆಚ್ಚಳವಾಗಿದೆ. ಕೊರೊನಾ ಕಾಲದಲ್ಲೂ ತಮಗೆ ಬೇಕಾದಂತೆ ಆಳುವ ವರ್ಗಗಳು ವರ್ತಿಸುತ್ತಿದೆ. ಯಾವುದೇ ಕಾರಣವನ್ನು ಕೊಡದೆ ಬೆಲೆ ಏರಿಕೆಯಾಗುತ್ತಿದೆ. ತೈಲ ಬೆಲೆ ಯದ್ವಾತದ್ವಾ ಏರಿಕೆಯಾಗಿದೆ. ಕೊರೊನಾ ಕಾಲದಲ್ಲಿ ಕನಿಷ್ಟ ಆರೋಗ್ಯ ಸೇವೆ ಒದಗಿಸಲಾಗದ ಆಳುವ ವರ್ಗಗಳು ಜನರ ಕಷ್ಟವನ್ನು ನೋಡಿ ಕುಳಿದಿದೆ. ಲಕ್ಷಾಂತರ ಮಂದಿಯನ್ನು ಹಸಿವಿನಿಂದ ಸಾಯಿಸಿದರೆ, ಕೋಟ್ಯಂತರ ಮಂದಿಯನ್ನು ನಿರುದ್ಯೋಗಿಗಳನ್ನಾಗಿ ಮಾಡಿದರೆ, ಔಷದಿಯಿಲ್ಲದೆ ಜನ ಸತ್ತರೆ ಅವರ ನೆರವಿಗೆ ಬಾರದ ಆಳುವ ವರ್ಗಗಳು ಬೆಲೆ ಏರಿಕೆ ಮತ್ತು ಮಾರಾಟದ ವಿಚಾರದಲ್ಲಿ ಮಾತ್ರ ತಲ್ಲೀನವಾಗಿ ಬಿಟ್ಟಿದೆ. ಈಗಾಗಲೇ ಅನೇಕ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿದ ಸರಕಾರ ಜನರ ನೆರವಿಗೆ ಬರಬೇಕೆನ್ನುವ ಕಲ್ಪನೆಯಲ್ಲೂ ಇಲ್ಲ. ಪ್ರಥಮ ಅಲೆ ಬಂದಾಗ ಯಾವುದೇ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳದೆ ತೆಪ್ಪಗೆ ಕುಳಿತ ಸರಕಾರ ಎರಡನೆ ಅಲೆಯನ್ನು ಬೇಜವಬ್ದಾರಿಯಾಗಿ ನಿಭಾಯಿಸಿತು. ಎರಡನೆ ಅಲೆಯಿಂದಾಗಿ ಜನ ಬೀದಿ ಬೀದಿಯಲ್ಲಿ ಸಾಯುವಂತಾಯಿತು. ಆರೋಗ್ಯ ವಿಚಾರದಲ್ಲಿ ಯಾವುದೇ ಮಹತ್ವದ ತೀರ್ಮಾನಗಳು ಸರಕಾರದ ಬಳಿ ಇರಲಿಲ್ಲ. ಕನಿಷ್ಟ ಆಮ್ಲಜನಕ ಪೂರೈಕೆ ಮಾಡಲು ಸರಕಾರಕ್ಕೆ ಸಾಧ್ಯವಾಗಲಿಲ್ಲ. ಲಕ್ಷಾಂತರ ಮಂದಿ ಅಮ್ಲಜನಕವಿಲ್ಲದೆ ಸಾಯುವಂತಾಯಿತು. ಸರಕಾರ ಆಗಲೂ ಪ್ರಕರಣವನ್ನು ಗಂಭೀರವಗಿ ಪರಿಗಣಿಸಲಿಲ್ಲ. ಕನಿಷ್ಟ ಲಸಿಕೆ ಕಾರ್ಯವನ್ನು ಕಡ್ಡಾಯಗೊಳಿಸಿ ಸಾರ್ವತ್ರಿಕವಾಗಿ ಜನರಿಗೆ ನೀಡಲು ಸಾಧ್ಯವಾಗಲಿಲ್ಲ. ಇನ್ನು ಕೂಡ ಪರಿಪೂರ್ಣ ಲಸಿಕೆಯನ್ನು ಹಾಕಲು ಸಾಧ್ಯವಾಗಲಿಲ್ಲ. ಅ ಜಿಲ್ಲಾ ಮಟ್ಟದಲ್ಲಿ ಕನಿಷ್ಟ ಕನಿಷ್ಟ ಮಟ್ಟದಲ್ಲಿ ಲಸಿಕೆ ನೀಡಲಾಗುತ್ತಿದೆ. ಎಲ್ಲರಿಗೂ ಉಚಿತ ಲಸಿಕೆ ಎಂದು ಹೇಳಿ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆಗಳನ್ನು ಹಣ ಪಡೆದು ನೀಡಲಾಗುತ್ತಿದೆ. ಮೂರನೆ ಅಲೆಯು ಬರುವ ಸೂಚನೆ ಈಗಾಗಲೇ ಕಂಡು ಬರುತ್ತಿದೆ. ಅದನ್ನು ಎದುರಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಇನ್ನೂ ಸ್ಪಷ್ಟತೆ ಇಲ್ಲ. ಕರ್ನಾಟಕದಲ್ಲಿ ಈಗಾಗಲೇ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಮೂರನೆ ಅಲೆಯ ಹೊಡೆತ ಹೇಗಿರುತ್ತೆ ಅನ್ನುವುದರ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಈಗಾಗಲೆ ಉದ್ಯಮಗಳು ನೆಲ ಕಚ್ಚಿವೆ. ಅದರಿಂದ ಹೊರ ಬರಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಮೂರನೆ ಅಲೆ ಬಂದು ಮತ್ತೆ ಲಾಕ್ ಡೌನ್ ಆದರೆ ಇನ್ನಷ್ಟು ಉದ್ಯಮಗಳು ನೆಲೆ ಕಚ್ಚಲಿದೆ. ಇನ್ನೂ ಕೂಡ ಸರಕಾರದ ಬಳಿ ಕೊರೊನಾ ಎದುರಿಸುವ ಸ್ಪಷ್ಟ ನೀತಿ ನಿಯಮಗಳು ಇಲ್ಲ. ಈಗಾಗಲೇ ಪಕ್ಕದ ರಾಜ್ಯವಾದ ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿದೆ. ಅದು ಕರ್ನಾಟಕ್ಕೂ ಬರಲಿದೆ. ಕೊರೊನಾ ಆಳುವ ವರ್ಗಕ್ಕೆ ಒಂದು ವರದಾನ. ಮಾತೆತ್ತಿದರೆ ಕೊರೊನಾ ಕಾರಣ ಹೇಳಿ ಎಲ್ಲವನ್ನು ಮುಗಿಸಬಹುದು. ಬೇರೆ ಯಾವುದೇ ಕಾರಣಗಳು ಸಮರ್ಥನೆ ಆಗುವುದಿಲ್ಲ. ಕೊರೊನಾ ಮಾತ್ರ ಎಲ್ಲದಕ್ಕೂ ಕಾರಣ ಒದಗಿಸುತ್ತದೆ. ಮೂರನೆ ಅಲೆ ಸರಕಾರಕ್ಕೆ ಇನ್ನೊಂದು ವರದಾನ ವಾದರೆ ಜನರಿಗೆ ಜೀವ ಹೋಗುವ ಭಯ. ಆಳುವ ವರ್ಗಗಳು ಜನರ ನೆರವಿಗೆ ಬರುವ ನಿಟ್ಟಿನಲ್ಲಿ ಕಾರ್ಯಪ್ರವರ್ತವಾಗಲಿ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!