spot_img
Monday, March 23, 2026
spot_img

ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕ: ನೂತನ ಪದಾಧಿಕಾರಿಗಳ ಆಯ್ಕೆ


ಕುಂದಾಪುರ: ಮೊಗವೀರ ಯುವ ಸಂಘಟನೆ(ರಿ). ಉಡುಪಿ ಜಿಲ್ಲೆ, ಕೋಟೇಶ್ವರ ಘಟಕದ 2021-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಕಛೇರಿಯಲ್ಲಿ ನಡೆಯಿತು.

ಸ್ಥಾಪಕಾಧ್ಯಕ್ಷ ಸತೀಶ್ ಎಂ. ನಾಯ್ಕ್ ಮತ್ತು ಗೌರವಾಧ್ಯಕ್ಷರಾದ ಜಗದೀಶ್ ಮೊಗವೀರ ಮಾರ್ಕೊಡು ಹಾಗೂ ಹಾಲಿ ಅಧ್ಯಕ್ಷರಾದ ರವೀಶ್ ಎಸ್. ಕೊರವಡಿ, ಮಹಿಳಾ ಸಂಘಟನೆಯ ಅಧ್ಯಕ್ಷೆ ಶಾರದಾ ಮೂಡುಗೋಪಾಡಿ, ಮಾಜಿ ಅಧ್ಯಕ್ಷರಾದ ನಾರಾಯಣ ಪೈಂಟರ್, ನಿತ್ಯಾನಂದ ನಾಯ್ಕ್, ಸುರೇಶ್ ಚಾತ್ರಬೆಟ್ಟು, ಅಶೋಕ್ ತೆಕ್ಕಟ್ಟೆ, ಮಾಜಿ ಮಹಿಳಾ ಸಂಘಟನೆಯ ಅಧ್ಯಕ್ಷರಾದ ಗೀತಾ ಹಳೆ‌ಅಳಿವೆ, ದಿವ್ಯಲಕ್ಷ್ಮೀ ಕೋಟೇಶ್ವರ, ಹೇಮಾ ತೆಕ್ಕಟ್ಟೆ ಹಾಗೂ ಗೌರವ ಸಲಹೆಗಾರರಾದ ರಾಮ ನಾಯ್ಕ್ ಬೀಜಾಡಿ, ಸುರೇಶ್ ಮೊಗವೀರ ಶಾನಾಡಿ, ಗುರಿಕಾರರು ಮತ್ತು ಸಂಘಟನೆಯ ಎಲ್ಲಾ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಅಯ್ಕೆ ಪ್ರಕ್ರಿಯೆ ನಡೆಯಿತು.

ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸುನೀಲ್. ಜಿ. ನಾಯ್ಕ್ ಚಾತ್ರಬೆಟ್ಟು, ಗೌರವಾಧ್ಯಧ್ಯಕ್ಷರಾಗಿ ಸೌರಭ ರಾಜೀವ ಮರಕಾಲ ಬೀಜಾಡಿ, ಕಾರ್ಯದರ್ಶಿಯಾಗಿ ಪುಂಡಲೀಕ ಮೊಗವೀರ ತೆಕ್ಕಟ್ಟೆ, ಮಹಿಳಾ ಸಂಘಟನೆಯ ಅಧ್ಯಕ್ಷರಾಗಿ ಶ್ರೀಮತಿ ಅನುಸೂಯ ಕೆದೂರು ಮತ್ತು ಕಾರ್ಯದರ್ಶಿಯಾಗಿ ಕುಮಾರಿ ನಿಶಾ ಕಾಳಾವರ, ಕೋಶಾಧಿಕಾರಿಯಾಗಿ ಶ್ರೀ ಪ್ರದೀಪ್ ಮೊಗವೀರ ಹೊದ್ರಾಳಿ,ಉಪಾಧ್ಯಕ್ಷರು ಗಳಾಗಿ ಶ್ರೀಧರ್. ಬಿ. ಎನ್, ನಾಗರಾಜ್ ಬೀಜಾಡಿ, ಶ್ರೀಧರ್ ಬಂಡಿಕಡು, ಸುಧಾಕರ್ ಪೈಂಟರ್, ರಾಘವೇಂದ್ರ ಹರಪನಕೆರೆ, ಮಹೇಶ್ ಕಾಂಚನ್ ಬೇಳೂರು, ಭಾಸ್ಕರ್ ಹಳೆ‌ಅಳಿವೆ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಿಥುನ್ ಮೊಗವೀರ ಬೇಳೂರು, ಕ್ರೀಡಾ ಕಾರ್ಯದರ್ಶಿಯಾಗಿ ಭಾಸ್ಕರ ಕುಂದರ್ ಹೊದ್ರಾಳಿ ಆಯ್ಕೆಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!