spot_img
Thursday, March 26, 2026
spot_img

ನಿವೃತ್ತ ವಾಯುಸೇನಾ ಅಧಿಕಾರಿ ಪಿ.ಹೆಚ್.ರಾಮಣ್ಣ ಶೆಟ್ಟಿ ನಿಧನ


ಕುಂದಾಪುರ, ಜೂ.25: ನಿವೃತ್ತ ವಾಯುಸೇನಾ ಅಧಿಕಾರಿ JWO ಪಿ.ಹೆಚ್. ರಾಮಣ್ಣ ಶೆಟ್ಟಿ (85ವ) ಕೊರ್ಗಿ ಹೊಸಮಠದಲ್ಲಿ ಜೂ.25ರಂದು ನಿಧನರಾದರು. ಭಾರತೀಯ ವಾಯಸೇನೆಯಲ್ಲಿ ಅಧಿಕಾರಿಯಾಗಿದ್ದ ಅವರು ನಿವೃತ್ತಿ ನಂತರ ಹನುಮಾನ್ ಟ್ರಾನ್ಸ್‌ಪೋರ್ಟ್ ಕಂಪೆನಿಯಲ್ಲಿ ಕೆಲಕಾಲ ಸೇವೆ ಸಲ್ಲಿಸಿ ಬಳಿಕ ಮಣಿಪಾಲದಲ್ಲಿ ಸುಪ್ರೀಂ ಕೋಚ್ ಬಿಲ್ಡರ್ಸ ಕಂಪೆನಿ ಸ್ಥಾಪಿಸಿ ಅದರ ಆಡಳಿತ ನಿರ್ದೇಶಕರಾಗಿದ್ದರು. ಸಹಕಾರ ಕ್ಷೇತ್ರದಲ್ಲಿಯೂ ಆಸಕ್ತಿ ಹೊಂದಿದ್ದ ಅವರು ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಕೆಲವು ಕಾಲ ಸೇವೆ ಸಲ್ಲಿಸಿದ್ದರು. ಕೊರ್ಗಿ ಹೊಸಮಠ ಹಾಲು ಉತ್ಪಾದಕರ ಸಂಘ ಸ್ಥಾಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಇವರು ಅದರ ಪ್ರಥಮ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.


ಬಳಿಕ ಪ್ರಗತಿಪರ ಕೃಷಿಕರಾಗಿ ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು, ರಾಜಕೀಯ ರಂಗದಲ್ಲಿಯೂ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಮಗ ಡಾ| ರಾಜೇಶ್ ಶೆಟ್ಟಿ, ಸೊಸೆ, ಮಗಳು, ಅಳಿಯ ಮಣಿಪಾಲ ಎಂ.ಐ.ಟಿ ಪ್ರಾಧ್ಯಾಪಕ ಪ್ರೊ.ಎಸ್ ವಿ.ಉದಯ್ ಕುಮಾರ್ ಶೆಟ್ಟಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!