spot_img
Thursday, March 26, 2026
spot_img

ಯೋಗ ದಿನದ ಅಂಗವಾಗಿ ಜಿಲ್ಲೆಯ ಪ್ರಧಾನ ಅಂಚೆ ಕಚೇರಿಗಳಲ್ಲಿ ಅಂಚೆ ಚೀಟಿ ಬಿಡುಗಡೆ

ಉಡುಪಿ: ಭಾರತೀಯ ಅಂಚೆ ಇಲಾಖೆಯು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆದ್ಯತೆ ನೀಡುತ್ತಾ ಬಂದಿದ್ದು, ಈ ದಿನವನ್ನು ಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ದೇಶದ ಸುಮಾರು 810 ಪ್ರಧಾನ ಅಂಚೆ ಕಚೇರಿಗಳಲ್ಲಿ ಯೋಗ ದಿನದ ಲಾಂಛನವಿರುವ ಸ್ಪೆಷಲ್ ಸ್ಟಾಂಪ್ ಕ್ಯಾನ್ಸಲೇಷನ್ (ವಿಶೇಷ ಅಂಚೆ ರದ್ಧತಿ ಮೊಹರು) ನ ವಿಶೇಷ ಅಂಚೆ ಚೀಟಿಗಳನ್ನು ಇಲಾಖೆಯು ಬಿಡುಗಡೆಗೊಳಿಸಿದೆ.


ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್ 21 ರಂದು ಜಿಲ್ಲೆಯ ಉಡುಪಿ, ಮಣಿಪಾಲ ಹಾಗೂ ಕುಂದಾಪುರ ಪ್ರಧಾನ ಅಂಚೆ ಕಚೇರಿಗಳಲ್ಲಿ ಅಂಚೆ ಪತ್ರ ಹಾಗೂ ಅಂಚೆ ಪರಿಕರಗಳಿಗೆ ಅಂಚೆ ಮೊಹರನ್ನು ಮುದ್ರಿಸಲಾಯಿತು.
ಕುಂದಾಪುರ‌ಅಂಚೆಕಚೇರಿಯಲ್ಲಿ ಯೋಗ ಮತ್ತು ಯೋಗದಿಂದಾಗುವ ಪ್ರಯೋಜನಗಳ ಕುರಿತು, ಯೋಗ ಪರಿಣಿತ, ಹಿರಿಯ ಅಂಚೆ ಕಚೇರಿ ಉದ್ಯೋಗಿ ಎಚ್.ಕೆ ಭಾಸ್ಕರ ಶೆಟ್ಟಿ ಮಾಹಿತಿ ನೀಡಿದರು.
ಈ ಮೂರು ಪ್ರಧಾನ ಅಂಚೆ ಕಚೇರಿಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಸಾರ್ವಜನಿಕರ ವೀಕ್ಷಣೆಗೆ ಯೋಗ ಮಾಹಿತಿ ಬಿತ್ತರಿಸುವ ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲಾಯಿತು.


ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್‌ಚಂದರ್ ನೇತೃತ್ವದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ ಹಾಗೂ ಕೃಷರಾಜ ವಿಠಲ ಭಟ್‌ರವರು ಮಾಹೆ ವಿಶ್ವ ವಿದ್ಯಾಲಯ ಮಣಿಪಾಲದ ಯೋಗ ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣ ಆಚಾರ್ಯ ಹಾಗೂ ನಗರದ ಹಿರಿಯ ಫಿಲಾಟಲಿಸ್ಟ್ ಕೃಷಯ್ಯನರವರ ನಿವಾಸಕ್ಕೆ ತೆರಳಿ ಯೋಗ ದಿನದ ಸ್ಪೆಷಲ್‌ಕ್ಯಾನ್ಸಲೇಷನ್ ಮಾಡಿದ ಕವರ್ ಮತ್ತು ಪೋಸ್ಟ್ ಕಾರ್ಡ್‌ಗಳನ್ನು ನೀಡಿ ಗೌರವಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!