Sunday, September 8, 2024

ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ: 2021-22ರ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭ

ಬಿ.ಎಂ.ಸುಕುಮಾರ ಶೆಟ್ಟಿ, ಕಾಲೇಜಿನ ಅಧ್ಯಕ್ಷರು.


ಕುಂದಾಪುರ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪದವಿ ಆಸೆ ಪೂರೈಸುವ ಆಶಯದಿಂದ ರೂಪು ತಳೆದ ಸಂಸ್ಥೆ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ. ಅಶಯವನ್ನು ಹಸನಾಗಿ ಹಬ್ಬಿಸಿಕೊಂಡು ಬಂದು ಯಶಸ್ವಿಗೊಳಿಸುತ್ತಿರುವ ಕಾರಣಕ್ಕೆ ಪ್ರಸ್ತುತ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಪದವಿ ಕಾಲೇಜುಗಳಲ್ಲಿ ವಿಶೇಷ ಸಾಲಿನಲ್ಲಿ ಗುರುತಿಸಿಕೊಂಡಿದೆ. ‘ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾಗಬೇಕು’ ಎಂಬುದು ಕಾಲೇಜಿನ ಅಧ್ಯಕ್ಷರು ಮತ್ತು ಬೈಂದೂರು ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿಯವರ ಧ್ಯೇಯ. ಅಧ್ಯಕ್ಷರ ಧ್ಯೇಯ ವಾಕ್ಯವನ್ನು ಸಾರ್ಥಕಗೊಳಿಸುವ ಪಯಣದೊಂದಿಗೆ ಸಂಸ್ಥೆಯು 2021-22ರ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆರಂಭಗೊಳಿಸಿದೆ.


130 ವಿದ್ಯಾರ್ಥಿಗಳೊಂದಿಗೆ ಹನ್ನೊಂದು ವರ್ಷಗಳ ಹಿಂದೆ ಆರಂಭಗೊಂಡ ಸಂಸ್ಥೆಯಲ್ಲಿ ಪ್ರಸ್ತುತ 1200 ಕಲಿಕಾರ್ಥಿಗಳಿದ್ದಾರೆ ಎಂಬುದು ಸಂಸ್ಥೆಯ ಸಾಧನೆಯ ಹಾದಿಯ ಹೆಗ್ಗುರುತು. ಹೀಗೆ ಆರಂಭಗೊಂಡ ಕಿರು ಅವಧಿಯಲ್ಲಿ ಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಕ್ರೀಡಾರಂಗದಲ್ಲಿ ಹಾಗೂ ಇನ್ನಿತರ ವಿಸ್ತರಣಾ ಚಟುವಟಿಕೆಗಳಲ್ಲಿ ಕಾಲೇಜು ಗಣನೀಯ ಸಾಧನೆಗೈದಿದೆ.


ಸಂಸ್ಥೆಯ ಸಾಧನೆಗಳು :
ಕಾಲೇಜಿನ ವಾರ್ಷಿಕ ಸಂಚಿಕೆ ‘ಶಿಖರ’ ಮಂಗಳೂರು ವಿ.ವಿ ಮಟ್ಟದಲ್ಲಿ ಸತತ ನಾಲ್ಕು ವರ್ಷ ಪ್ರಥಮ ಸ್ಥಾನ.
ಮಂಗಳೂರು ವಿ.ವಿ ಕ್ರೀಡಾ ರ್ಯಾಂಕಿಂಗ್‍ನಲ್ಲಿ ಉಡುಪಿ ವಲಯ ಕಾಲೇಜುಗಳಲ್ಲಿ ಪ್ರಥಮ, ಸಮಗ್ರ 9ನೇ ಶ್ರೇಣಿ,
ಗ್ರಾಮೀಣ ಭಾಗದಿಂದ ಬಂದ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೂ ಪ್ರವೇಶಾವಕಾಶ ಮತ್ತೆ ಅವರುಗಳಿಗೇ ಬಿ.ಬಿ.ಎ ನಲ್ಲಿ ಮೂರನೇ ಶ್ರೇಣಿ, ಬಿ.ಕಾಂ.ನಲ್ಲಿ 8ನೇ ಶ್ರೇಣಿ, ಬಿ.ಕಾಂ ಅಕೌಂಟೆನ್ಸಿಯಲ್ಲಿ ಚಿನ್ನದ ಪದಕಗಳು.
ಸಾಂಸ್ಕೃತಿಕ – ಮಂಗಳೂರು ವಿ.ವಿ ಅಂತರ್ ಕಾಲೇಜು ಮಟ್ಟದಲ್ಲಿ ನಿರಂತರವಾಗಿ ಉತ್ಕೃಷ್ಟ ಸಾಧನೆ.
ಕ್ಯಾಂಪಸ್ ಆಯ್ಕೆ – ವಿದ್ಯಾರ್ಥಿಗಳು ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.


ಸತತ ಹತ್ತು ವರ್ಷಗಳಿಂದ ಕಾಲೇಜಿನ ಆಶ್ರಯದಲ್ಲಿ ಮಂಗಳೂರು ವಿ.ವಿ ಅಂತರ್ ಕಾಲೇಜು ಕ್ರೀಡಾ ಸ್ಪರ್ಧೆಗಳ ಆಯೋಜನೆ.
ಕಾಲೇಜಿನಲ್ಲಿ ವಿದ್ಯಾರ್ಥಿಗಳ ಬರವಣಿಗೆಯ ಆಸಕ್ತಿಗೆ ಪ್ರೋತ್ಸಾಹ ನೀಡುವ ವಾಲ್ ಮ್ಯಾಗಜಿನ್ (ಭಿತ್ತಿ ಪತ್ರಿಕೆ) ‘ಧ್ವನಿ’, ವಾರ್ಷಿಕ ಸಂಚಿಕೆ ‘ಶಿಖರ’ ಹಾಗೂ ವಿಭಾಗದ ಪತ್ರಿಕೆಗಳಿವೆ .ಕ್ಯಾಂಪಸ್ ವೈಸ್-ದ್ವೈವಾರ್ಷಿಕ ನ್ಯೂಸ್ ಬುಲೆಟಿನ್.’ಉದಯ ಗಾಂವ್ಕರ್ ಅವರು ರಚಿಸಿ, ವಾಸುದೇವ ಗಂಗೇರ ನಿರ್ದೇಶಿಸಿದ್ದ “ಮಹಾತ್ಮ” ರಂಗ ಪ್ರಸ್ತುತಿ ಏಳು ಪ್ರಯೋಗಗಳನ್ನು ಕಾಣುವುದರ ಜೊತೆಗೆ ವಿ.ವಿ ಮಟ್ಟದ ಸ್ಪರ್ಧೆಗಳಲ್ಲಿ ಶ್ರೇಷ್ಠ ರಂಗ ತಜ್ಞರ ಗಮನ ಸೆಳೆದಿದೆ


ಸಂಸ್ಥೆಯ ವಿಶೇಷತೆ :
ಆಳ್ವಾಸ್‍ನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಕಾಮರ್ಸ್ ಡೀನ್ ಆಗಿ ಸೇವೆ ಸಲ್ಲಿಸಿದ; ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಆಸಕ್ತರು ಹಾಗೂ ಸುದೀರ್ಘ ಇಪ್ಪತೈದು ವರ್ಷಗಳ ಶಿಕ್ಷಣ ಕ್ಷೇತ್ರದ ಅನುಭವವಿರುವ ಕೊತ್ತಾಡಿ ಉಮೇಶ ಶೆಟ್ಟಿಯವರು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಪ್ರತಿಭಾವಂತ ಪ್ರಾಧ್ಯಾಪಕರ ತಂಡವೇ ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿದೆ. ಯುನಿವರ್ಸಿಟಿ ರ್ಯಾಂಕ್ ಪಡೆದವರು, ಸಾಂಸ್ಕೃತಿಕ ಆಸಕ್ತರು, ರಂಗಭೂಮಿ ಆಸಕ್ತರು, ನಿರ್ದೇಶನದಲ್ಲಿ ನೈಪುಣ್ಯರು, ವಾಗ್ಮಿಗಳು, ಉತ್ತಮ ನಿರೂಪಕರು, ಸಂಗೀತಗಾರರು ಹೀಗೆ ಬಹುಮುಖ ಪ್ರತಿಭೆಯುಳ್ಳ ಪ್ರಾಧ್ಯಾಪಕರ ಸಮೂಹವಿದೆ.
ಯಕ್ಷಗಾನ ಮತ್ತು ತಾಳಮದ್ದಳೆ ಪ್ರದರ್ಶನ ನೀಡುವ ಪ್ರಾಧ್ಯಾಪಕರ ಮತ್ತು ವಿದ್ಯಾರ್ಥಿಗಳ ಸಮರ್ಥ ತಂಡ.
ಎನ್. ಸಿ. ಸಿ, ಎನ್.ಎಸ್.ಎಸ್ ಘಟಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಲಲಿತಾ ಕಲಾ ಸಂಘ, ಮಹಿಳಾ ವೇದಿಕೆ, ಅರ್ಥಶಾಸ್ತ್ರ ಸಂಘ, ರೋವರ್ಸ್ ಮತ್ತು ರೇಂಜರ್ಸ್ ಘಟಕ, ರೆಡ್‍ಕ್ರಾಸ್ ಘಟಕ, ಇನ್ನೋವೆಶನ್ ಕ್ಲಬ್,ಯಕ್ಷಗಾನ ಸಂಘ, YRC, Rangers Rovers ಮತ್ತು ಐಕ್ಯೂಎಸಿ ಘಟಕ, ವಿದ್ಯಾರ್ಥಿಗಳ ವಿವಿಧ ಅಭಿರುಚಿಗೆ ತಕ್ಕಂತೆ 25 ವಿವಿಧ ವೇದಿಕೆಗಳು, ಉತ್ತಮ ಗ್ರಂಥಾಲಯ, ಪ್ರಯೋಗಾಲಯಗಳು ಮತ್ತು 1500 ವಿದ್ಯಾರ್ಥಿಗಳು ಕುಳಿತು ಕಾರ್ಯಕ್ರಮ ನೋಡಬಲ್ಲ ವಿಶಾಲವಾದ ಕೇರಳ ಮಾದರಿಯ ಸಭಾಂಗಣ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯವಿದೆ.
ಪೋಷಕ – ಶಿಕ್ಷಕರ ನಿರಂತರ ಸಂಪರ್ಕ, ಚರ್ಚೆ ಮತ್ತು ಪೋಷಕರ ಸಲಹೆಗಳಿಗೆ ಸ್ಪಂದನೆ. ಪ್ರಾಕ್ತನ ವಿದ್ಯಾರ್ಥಿ ಸಂಘ, ಅನ್ನಪೂರ್ಣ ಕ್ಯಾಂಟೀನ್ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಮಧ್ಯಾಹ್ನ ಭೋಜನದ ಸೌಲಭ್ಯವಿದೆ.


ಸಂಸ್ಥೆಯ ಹೆಮ್ಮೆ :
ಕುಶ ಪೂಜಾರಿ ಮತ್ತು ದಿವ್ಯಾ ಶೆಟ್ಟಿ ರಾಷ್ಟ್ರಮಟ್ಟದ ಯೋಗಪಟುಗಳು. ಸಂದೀಪ್ ದೇವಾಡಿಗ ರಾಷ್ಟ್ರ ಮಟ್ಟದ ಸಾಪ್ಟ್‍ಬಾಲ್ ಆಟಗಾರ. ಸುಕನ್ಯಾ ಶೆಟ್ಟಿ ರಾಷ್ಟ್ರಮಟ್ಟದ ಚೆಸ್ ಆಟಗಾರ್ತಿ. ಜಾಕ್ಸನ್ ಡಿ’ಸೋಜಾ ರಾಷ್ಟ್ರಮಟ್ಟದ ಪವರ್ ಲಿಪ್ಟರ್. ಸನತ್ ಅಡಿಗ ಮತ್ತು ಕಾರ್ತಿಕ ಶೆಟ್ಟಿ R.D ಕ್ಯಾಂಪ್‍ನಲ್ಲಿ ವಿ.ವಿ ಪ್ರತಿನಿಧಿಗಳಾಗಿ ಭಾಗವಹಿಸುವಿಕೆಯ ಮೂಲಕ ಸಂಸ್ಥೆಯ ಸಾಧಕರಾಗಿ ಮೂಡಿಬಂದವರು.
ಹೀಗೆ ಹತ್ತಾರು ವಿಶೇಷತೆಗಳಿಂದ ಗಮನ ಸಳೆಯುತ್ತಿರುವ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ತನ್ನ ಶೈಕ್ಷಣಿಕ ಸೇವೆಯನ್ನು ಮುಂದುವರಿಸುತ್ತಾ ದಾಪುಗಾಲಿಡುತ್ತಿದೆ.


ಇಲ್ಲಿ ಲಭ್ಯವಿರುವ ಕೋರ್ಸುಗಳು
ಬಿ.ಕಾಂನಲ್ಲಿ ಮೂರು ವಿಭಾಗಗಳು, ಬಿ.ಕಾಂನೊಂದಿಗೆ CA/CS/CMA
ಬಿ.ಬಿ.ಎ, ಮತ್ತು ಬಿ.ಸಿ.ಎ ಹಾಗು ಬಿ.ಎಸ್ಸಿಯಲ್ಲಿ ಒಂದು ವಿಭಾಗವಿದೆ.
ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ (lBPS) ತರಬೇತಿ.
ಸರ್ಟಿಫಿಕೇಟ್ ಕೋರ್ಸ್‍ಗಳು:
ಗ್ರಾಹಕ ಶಿಕ್ಷಣ, ಕಮ್ಯುನಿಕೇಟಿವ್ ಇಂಗ್ಲಿಷ್, ಪಬ್ಲಿಕ್ ಅಡ್ಮಿನಿಸ್ಟ್ರೇಶನ್, ಇವೆಂಟ್ ಮ್ಯಾನೇಜ್‍ಮೆಂಟ್, ಕೃಷಿ ಮಾರುಕಟ್ಟೆ,Tally & GST, Soft Skills Developments.
ಯೋಗ ಮತ್ತು ಆಧ್ಯಾತ್ಮ, ಯಕ್ಷಗಾನ, ಕಸೂತಿ ಮತ್ತು ಕರಕುಶಲ, Computer fundamentals, Electrical appliances  & Repairs.


ಪ್ರವೇಶ ಪ್ರಕ್ರಿಯೆ ಆರಂಭ
ಕಾಲೇಜು ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಪಾಲಕರು, ವಿದ್ಯಾರ್ಥಿಗಳು ಸಂಪರ್ಕಿಸಿ ದಾಖಲಾತಿ ಮಾಡಿಕೊಳ್ಳಬಹುದು. ವಿಶಾಲಾಕ್ಷಿ ಬಿ.ಹೆಗ್ಡೆ ಕ್ಯಾಂಪಸ್, ಸಂಗಮ್ ಕುಂದಾಪುರ. 576201
ನೇರ ದಾಖಲಾತಿಗೆ: https://bbhegdecollege.in/registration

ಕಾಲೇಜು ವೆಬ್‍ಸೈಟ್ : www.bbhegdecollege.com
ಸಂಪರ್ಕ : (9901574789) ಕಛೇರಿ: 08254-235588/9844218126. More info : 9741474255

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!