20.8 C
New York
Saturday, July 24, 2021

Buy now

spot_img

ಕೊರೋನಾ ಸಂಕಷ್ಟ ಸಮಯದಲ್ಲಿಯೂ ಸರ್ಕಾರಗಳಿಂದ ಅಭಿವೃದ್ದಿಗೆ ಒತ್ತು-ಸಂಸದ ಬಿ.ವೈ.ರಾಘವೇಂದ್ರ


ಕುಂದಾಪುರ, ಜೂ.7: ಕೊರೋನಾದ ಈ ಸಂಕಷ್ಟದ ಸಮಯದಲ್ಲಿಯೂ, ಸಾಕಷ್ಟು ಸವಾಲುಗಳು ಇದ್ದರೂ ಕೂಡಾ ಕೂಡಾ ಕೇಂದ್ರ ರಾಜ್ಯ ಸರ್ಕಾರಗಳು ಅಭಿವೃದ್ದಿಗೆ ಆದ್ಯತೆ ನೀಡಿವೆ. ಸಾಕಷ್ಟು ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿವೆ. ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಹೆದ್ದಾರಿಗಳ ಅಭಿವೃದ್ದಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 1600ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.


ಅವರು ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದರು.
ಬೈಂದೂರು ರಾಣೆಬೆನ್ನೂರು ಹೆದ್ದಾರಿ 766(ಎ) ಒಟ್ಟು 29.45 ಕಿ.ಮೀ 210 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ದಿಯಾಗಲಿದೆ. ದ್ವಿಪಥ, ಘಾಟಿ ಅಭಿವೃದ್ದಿಗೆ ಡಿಪಿಆರ್ ಸಿದ್ಧಪಡಿಸಲು 1.35 ಕೋಟಿ ಅನುದಾನ ನೀಡಲಾಗಿದೆ. ಹುಲ್‍ಕಲ್ ರಸ್ತೆ ಅಭಿವೃದ್ದಿಗೆ 3 ಕೋಟಿ, ಸ್ಥಳೀಯ ರಸ್ತೆಗಳ ಅಭಿವೃದ್ದಿಗಾಗಿ 3 ಕೋಟಿ ಅನುದಾನಕ್ಕೆ ಮಂಜೂರಾತಿ ನೀಡಿದೆ. ಬಾಳೆಬರೆ ಘಾಟಿ ಅಭಿವೃದ್ದಿಗೆ 3 ಕೋಟಿ ಅನುದಾನ, ಬೈಂದೂರು ಕೊಲ್ಲೂರು ರಾಣೆಬೆನ್ನೂರು ಹೆದ್ದಾರಿ ನಗರದಿಂದ 16 ಕಿ.ಮೀ ದೂರದಲ್ಲಿ 40 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ 25 ಕಿ.ಮೀ ಕಡಿಮೆಯಾಗುತ್ತದೆ. ಪರ್ಯಾಯ ರಸ್ತೆ ನಿರ್ಮಾಣದಿಂದ ಸುಲಭವಾಗಿ ಶಿವಮೊಗ್ಗಕ್ಕೆ ಹೋಗಬಹುದು ಎಂದರು.


ಬೈಂದೂರು ಕ್ಷೇತ್ರಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕ್ಯಾಬಿನೆಟ್ ಅನುಮೋದನೆ ಸಿಕ್ಕಿದ್ದು ತಿಂಗಳೊಳಗೆ ಟೆಂಡರ್ ಕರೆಯಲಾಗುವುದು. ಪ್ರತೀ ಮನೆಗೂ ಕೂಡಾ ಸಿಹಿ 788 ಗ್ರಾಮೀಣ ಜನ ವಸತಿಗಳಿಗೆ 2.42 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸಲಾಗುತ್ತದೆ. ಒಟ್ಟು 346 ಕೋಟಿ 39 ಲಕ್ಷ, ಕೇಂದ್ರ 139 ಕೋಟಿ, ರಾಜ್ಯ 80 ಕೋಟಿ, ನಬಾರ್ಡ್ 176 ಕೋಟಿ. ಕಾರ್ಯಚರಣೆ ನಿರ್ವಹಣೆ ವೆಚ್ಚ 49 ಕೋಟಿ. ಅಂದಾಜು 500 ಕೋಟಿ ಆಗುತ್ತದೆ. ಎರಡು ವರ್ಷದಲ್ಲಿ ಸಿಹಿ ನೀರು ಕೊಡುವ ವಿಶ್ವಾಸವಿದೆ ಎಂದರು.


ರಾಜ್ಯದ 20 ವರ್ಗಗಳಿಗೆ ಸಂಬಂಧಿಸಿದಂತೆ ಹಣ್ಣು ತರಕಾರಿ ಬೆಳೆಗಾರರು, ಕಟ್ಟಡ ಕಾರ್ಮಿಕರು, ಅಸಂಘಟಿತ ವಲಯ ಕಾರ್ಮಿಕರು, ಮೀನುಗಾರರು ಪ್ಯಾಕೇಜ್ ಘೋಷಣೆ ಮಾಡಿದೆ. ಪಾಸಿಟಿವ್ ಬಂದ ಕೆಲವು ವ್ಯಕ್ತಿಗಳಲ್ಲಿ ಬ್ಲಾಕ್ ಪಂಗಸ್ ಕಾಣಿಸಿಕೊಳ್ಳುತ್ತಿದ್ದು ಒಬ್ಬ ವ್ಯಕ್ತಿಗೆ 3-4 ಲಕ್ಷ ರೂ ಚಿಕಿತ್ಸಾ ವೆಚ್ಚವಾಗುತ್ತದೆ. ದುಬಾರಿ ಲಸಿಕೆಯನ್ನು ನೀಡಬೇಕಾಗುತ್ತದೆ ಇದನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರ ಭರಿಸುತ್ತಿದೆ ಎಂದರು.


ಕೋವಿಡ್ ವಾರಿಯರ್ಸ್, ಪ್ರಂಟ್ ಲೈನ್ ವಾರಿಯರ್ಸ್, ಸಮಸ್ಯೆಗೆ ಒಳಗಾದ 5 ಕುಟುಂಬವನ್ನು ಗುರುತಿಸಿ ಅವರಿಗೆ ಆಹಾರದ ಕಿಟ್ ನೀಡಲಾಗುತ್ತಿದೆ. ಸೇವಾ ಭಾರತಿ ಕರ್ನಾಟಕ, ಪ್ರೇರಣಾ ಎಜುಕೇಶನಲ್ ಟ್ರಸ್ಟ್ ಶಿವಮೊಗ್ಗ, ಕುಂದಾಪುರ ಎಜುಕೇಶನಲ್ ಸೊಸೈಟಿ ರಿ., ವತಿಯಿಂದ 1 ಸಾವಿರ ಬೆಲೆಬಾಳುವ ಕಿಟ್ ನೀಡಲಾಗಿದೆ ಎಂದರು.


ಈ ಸಂದರ್ಭದಲ್ಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ ಕುಮಾರ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯರಾದ ಸುರೇಶ ಬಟ್ವಾಡಿ, ಶಂಕರ ಪೂಜಾರಿ ಉಪಸ್ಥಿತರಿದ್ದರು.

Related Articles

Stay Connected

21,961FansLike
2,866FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!